ಸಿಖ್‌ ಯುವಕರಿಗಿರುವ ಹಕ್ಕು ಮುಸ್ಲಿಂ ಯುವತಿಯರಿಗೆ ಏಕಿಲ್ಲ? ಹಿಜಬ್ ಪ್ರಕರಣಕ್ಕೆ ನಟಿ ಸೋನಂ ಕಪೂರ್ ಪ್ರಶ್ನೆ

Entertainment Featured-Articles News

ಕರ್ನಾಟಕದ ಉಡುಪಿಯಲ್ಲಿ ಆರಂಭವಾದ ಮುಸ್ಲಿಂ ಯುವತಿಯರು ಹಿಜಬ್ ಧರಿಸುವ ವಿಚಾರ ಇಂದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿ ಉಳಿದಿಲ್ಲ. ಈ ವಿಚಾರ ಬೃಹತ್ ರೂಪವನ್ನು ಪಡೆದುಕೊಂಡು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಿಗೆ ಕಾರಣವಾಗಿದೆ. ಒಂದು ಕಡೆ ಸಮವಸ್ತ್ರ ಎನ್ನುವುದು ಒಂದೇ ರೀತಿಯಾಗಿರಬೇಕು, ಇದರಲ್ಲಿ ತಾರತಮ್ಯ ಸಲ್ಲದು ಎನ್ನುವ ಮಾತನ್ನು ಹೇಳಿದರೆ, ಇನ್ನೂ ಕೆಲವರು ಹಿಜಬ್ ಮುಸ್ಲಿಂ ಯುವತಿಯರ ಹಕ್ಕು ಎಂದು ಒಟ್ಟಾರೆ ಪರ, ವಿ ರೋ ಧ ಚರ್ಚೆಗಳು ನಡೆದಿವೆ.

ಈ ಪ್ರಕರಣವು ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯದಲ್ಲಿ ಕಾಲೇಜುಗಳಲ್ಲಿ ನಡೆದ ಘಟನೆಗಳನ್ನು ಕಂಡು ಭದ್ರತೆಯ ದೃಷ್ಟಿಯಿಂದ ಈಗಾಗಲೇ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ಹಿಜಬ್ ಪ್ರಕರಣವು ದೊಡ್ಡ ಸುದ್ದಿಯಾದ ಮೇಲೆ ಹಲವು ಸಿನಿಮಾ ಸೆಲೆಬ್ರಿಟಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಈಗ ಇದೇ ವಿಚಾರಕ್ಕೆ ಬಾಲಿವುಡ್ ನ ಮತ್ತೊಬ್ಬ ಜನಪ್ರಿಯ ನಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ, ಫ್ಯಾಷನ್ ವಿಚಾರದಲ್ಲಿ ಸದಾ ಟ್ರೆಂಡ್ ನಲ್ಲಿ ಇರುವ ನಟಿ ಸೋನಮ್ ಕಪೂರ್ ಹಿಜಬ್ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಎರಡು ವಿಭಿನ್ನ ಫೋಟೋಗಳನ್ನು ಕೊಲೇಜ್ ಮಾಡಿದ್ದಾರೆ , ಇದರಲ್ಲಿ ಒಂದು ಕಡೆ ಪೇಟ ತೊಟ್ಟ ಸಿಖ್ ವ್ಯಕ್ತಿ, ಇನ್ನೊಂದು ಕಡೆ ಹಿಜಬ್ ಧರಿಸಿದ ಮಹಿಳೆಯ ಚಿತ್ರವನ್ನು ನಾವು ಗಮನಿಸಬಹುದಾಗಿದೆ.

ಫೋಟೋವನ್ನು ಶೇರ್ ಮಾಡಿಕೊಂಡ ಸೋನಂ ಕಪೂರ್ ಅದರ ಜೊತೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಸಿಖ್ ಪುರುಷರು ತಲೆಗೆ ಪೇಟ ಧರಿಸಬಹುದಾದರೆ, ಮುಸ್ಲಿಂ ಮಹಿಳೆ ಹಿಜಬ್ ಏಕೆ ಧರಿಸಬಾರದು?? ಎನ್ನುವ ಪ್ರಶ್ನೆಯನ್ನು ಹಾಕಿದ್ದಾರೆ. ಸೋನಮ್ ಕಪೂರ್ ಈ ಮೂಲಕ ಹಿಜಬ್ ಪ್ರಕರಣಕ್ಕೆ ಇನ್ನೊಂದು ಧಾರ್ಮಿಕ ಸಂಪ್ರದಾಯವನ್ನು ತಳಕು ಹಾಕುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

Leave a Reply

Your email address will not be published.