ಸಿಖ್ಖರ ಗಡ್ಡ, ಮೀಸೆಯ ಬಗ್ಗೆ ಜೋಕ್ ಮಾಡಿದ ಭಾರತಿ ಸಿಂಗ್ ಗೆ, ಈಗ ಪಾಪ ಏನಾಗಿದೆ ನೋಡಿ!!

Entertainment Featured-Articles Movies News Viral Video

ಹಿಂದಿ ಕಿರುತೆರೆಯಲ್ಲಿ ಸ್ಟಾಂಡಪ್ ಕಮಿಡಿಯನ್, ಅನೇಕ ದೊಡ್ಡ ರಿಯಾಲಿಟಿ ಶೋ ಗಳ ನಿರೂಪಕಿಯಾಗಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಭಾರತೀ ಸಿಂಗ್ ಮಹಿಳಾ ಕಮಿಡಿಯನ್ ಆಗಿ ಒಬ್ಬ ಸಿನಿಮಾ ತಾರೆಯಷ್ಟೇ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಭಾರತಿ ಸಿಂಗ್ ಇರುವ ಶೋ ಎಂದರೆ ಅಲ್ಲಿ ನಗುವಿಗೆ ಕೊರತೆ ಇರುವುದಿಲ್ಲ. ಭಾರತಿ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಇಬ್ಬರೂ ಜೋಡಿಯಾಗಿ ಕೆಲವು ಶೋ ಗಳ ನಿರೂಪಣೆ ಮಾಡುವುದು ಸಹಾ ವಿಶೇಷವಾಗಿದೆ.‌

ಇತ್ತೀಚಿಗಷ್ಟೇ ಭಾರತಿ ಸಿಂಗ್ ತಾಯಿಯಾಗಿದ್ದು, ಆ ಖುಷಿಯಲ್ಲಿ ಇದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆಯೇ ಭಾರತಿ ಸಿಂಗ್ ಅವರ ಮೇಲೆ ಪಂಜಾಬಿನ ಅಮೃತಸರದಲ್ಲಿ ಸೋಮವಾರ ರಾತ್ರಿ ಎಫ್ಐಆರ್ ದಾಖಲಾಗಿದೆ. ಹೌದು, ಭಾರತಿ ಸಿಂಗ್ ಅವರ ಒಂದು ಹಳೆಯ ವೀಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಭಾರತಿ ಸಿಂಗ್ ಮಾಡಿದ ಒಂದು ಹಾಸ್ಯ ಇದೀಗ ಆಕೆಯ ಮೇಲೆ ಎಫ್ ಐ ಆರ್ ದಾಖಲು ಮಾಡಲು ಕಾರಣವಾಗಿದೆ.

ಸೋಮವಾರದ ರಾತ್ರಿ ಅಮೃತಸರದ ಶಿರೋಮಣಿ ಗುರುದ್ವಾರ ಪರಬಂಧಕ್ ಕಮಿಟಿಯು ಭಾರತಿ ಸಿಂಗ್ ವಿ ರು ದ್ಧ ಎಫ್ ಐ ಆರ್ ದಾಖಲಿಸಿದೆ. ಇಷ್ಟಕ್ಕೂ ಈ ದೂರು ದಾಖಲಿಸಲು ಕಾರಣವಾದ ಆ ದೃಶ್ಯ ಯಾವುದು ಎನ್ನುವುದಾದರೆ, ಹಳೆಯ ವೀಡಿಯೋ ಒಂದರಲ್ಲಿ ಭಾರತಿ ಸಿಂಗ್ ಅವರ ಗಡ್ಡ ಮೀಸೆಯ ಕುರಿತಾಗಿ ಒಂದು ಜೋಕ್ ಮಾಡಿದ್ದಾರೆ. ಅದರಲ್ಲಿ ಆಕೆ, ಗಡ್ಡದ ಪ್ರಯೋಜನ ಏನೆಂದರೆ, ಸ್ವಲ್ಪ ಹಾಲು ಕುಡಿದು, ಅನಂತರ ನಿಮ್ಮ ಗಡ್ಡವನ್ನು ಬಾಯಲ್ಲಿ ಇರಿಸಿಕೊಂಡರೆ ಸಿಹಿ ಶ್ಯಾವಿಗೆಯ ರುಚಿ ಸಿಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಈ ವೀಡಿಯೋ ವೈರಲ್ ಆದ ಮೇಲೆ ಸಿಖ್ ಸಮುದಾಯದಲ್ಲಿ ಕೆಲವರು, ತಾವು ಸಿಖ್ ಧಾರ್ಮಿಕ ವಿಧಿ ಯಂತೆ ಬೆಳೆಸುವ ಗಡ್ಡ ಮೀಸೆಯ ವಿಚಾರವಾಗಿ ಭಾರತಿ ಸಿಂಗ್ ವ್ಯಂಗ್ಯ ಮಾಡಿ, ಧಾರ್ಮಿಕ ಮನೋಭಾವಗಳಿಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆ ರೋ ಪ ಮಾಡುತ್ತಾ ದೂರು ದಾಖಲು ಮಾಡಿದ್ದಾರೆ. ಇನ್ನು ಈ ವಿಚಾರ ಸುದ್ದಿಯಾದ ನಂತರ ಭಾರತಿ ಸಿಂಗ್ ವೀಡಿಯೋ ಒಂದನ್ನು ಮಾಡಿ, ತಾನು ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ ಎಂದು ಕ್ಷಮಾಪಣೆ ಕೇಳಿದ್ದಾರೆ.

Leave a Reply

Your email address will not be published. Required fields are marked *