ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳ್ತಾರಾ ಸಾಯಿ ಪಲ್ಲವಿ!! ಅಭಿಮಾನಿಗಳಲ್ಲಿ ಆತಂಕ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ ನಟಿ ಸಾಯಿ ಪಲ್ಲವಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಟಾಲಿವುಡ್ ನಲ್ಲಿ ಲೇಡಿ ಪವನ್ ಕಲ್ಯಾಣ್ ಎಂದೇ ಹೆಸರನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ ಬೇರೆಲ್ಲಾ ನಾಯಕಿಯರಿಗಿಂತಲೂ ಪ್ರತ್ಯೇಕವಾದ ಸ್ಥಾನವನ್ನು, ವರ್ಚಸ್ಸನ್ನು ಹಾಗೂ ಅಭಿಮಾನಿಗಳ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಸಿನಿಮಾವೊಂದನ್ನು ಸಾಯಿ ಪಲ್ಲವಿ ಒಪ್ಪಿಕೊಳ್ಳುವರು ಎಂದರೆ ಆ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಖಂಡಿತ ವಿಶೇಷತೆ ಇರುತ್ತದೆ ಎಂದರ್ಥ. ಕೇವಲ ಗ್ಲಾಮರ್ ಗೊಂಬೆಯಾಗಿ ನಟಿಸಲು ಸಾಯಿ ಪಲ್ಲವಿ ಯಾವುದೇ ಮುಜುಗರ ಇಲ್ಲದೇ ನೋ ಹೇಳುವ ನಟಿ.

ಅಂದ, ನಟನೆ ಮತ್ತು ಪ್ರತಿಭೆ ಮೂರು ಇರುವ ಈ ನಟಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವ ನಟಿ. ಆದರೆ ಇತ್ತೀಚಿಗೆ ಅಂದರೆ ನಟ ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್ ಸಿನಿಮಾ ನಂತರ ನಟಿ ಸಾಯಿ ಪಲ್ಲವಿ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ತನ್ನನ್ನು ಅರಸಿ ಬರುತ್ತಿರುವ ಹೊಸ ಸಿನಿಮಾಗಳ ಆಫರ್ ಗಳನ್ನು ಕೂಡಾ ಸಾಯಿ ಪಲ್ಲವಿ ತಿರಸ್ಕರಿಸುತ್ತಿದ್ದಾರೆ. ನಟಿಯ ಈ ನಡೆ ಸಹಜವಾಗಿಯೇ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು.

ಈಗ ನಟಿ ಸಾಯಿ ಪಲ್ಲವಿ ಸಿನಿಮಾಗಳ ಆಫರ್ ಅನ್ನು ತಿರಸ್ಕರಿಸುತ್ತಿರುವುದರ ಹಿಂದಿನ ಕಾರಣವೇನು ಎನ್ನುವ ವಿಚಾರವಾಗಿ ಸುದ್ದಿಯೊಂದು ಹೊರ ಬಂದಿದೆ. ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗಲೇ ನಟಿ ಸಾಯಿ ಪಲ್ಲವಿ ತಮ್ಮ ಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೌದು, ನಟಿ ಸಾಯಿ ಪಲ್ಲವಿ ಅವರು ಹಸೆಮಣೆಯನ್ನು ಏರಲು ಸಜ್ಜಾಗುತ್ತಿದ್ದು, ನಟಿಯು ಇದೇ ಕಾರಣದಿಂದ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

ನಟಿ ಸಾಯಿ ಪಲ್ಲವಿ ಅವರ ಬದುಕಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಳ್ಳಲು ಸಿದ್ಧತೆಗಳು ನಡೆದಿದೆ, ನಟಿಯು ಮದುವೆಯ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಲು ಆರಂಭಿಸಿದೆ.
ಮನೆಯಲ್ಲಿ ಸಾಯಿ ಪಲ್ಲವಿಗಾಗಿ ವರನ ಅನ್ವೇಷಣೆಯನ್ನು ಆರಂಭಿಸಿದ್ದು, ಅದೇ ಕಾರಣದಿಂದ ಅವರು ಯಾವುದೇ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನುವುದು ಟಿ ಟೌನ್ ನಲ್ಲಿ ಈಗ ನಡೆಯುತ್ತಿರುವ ಗುಸು ಗುಸು ಆಗಿದೆ.

ನಟಿ ಸಾಯಿ ಪಲ್ಲವಿ ಪ್ರೇಮ ವಿವಾಹದ ಬದಲಾಗಿ ಗುರು, ಹಿರಿಯರು ನಿಶ್ಚಯಿಸುವ ಹುಡುಗನನ್ನು ವರಿಸುವ ಆಲೋಚನೆಯಲ್ಲಿದ್ದಾರೆ. ಅಂದರೆ ಅವೇಂಜ್ಡ್‌ ಮ್ಯಾರೇಜ್ ಕಡೆಗೆ ನಟಿಯು ಒಲವನ್ನು ತೋರಿದ್ದಾರೆ. ನಟಿ ಸಾಯಿ ಪಲ್ಲವಿ ಇತ್ತೀಚಿಗೆ ನಟಿಸಿದ್ದು ಲವ್ ಸ್ಟೋರಿ ಮತ್ತು ಶ್ಯಾಮ್ ಸಿಂಗ್ ರಾಯ್ ಸಿನಿಮಾಗಳಲ್ಲಿ. ಆದರೆ ಸಾಕಷ್ಟು ಬೇಡಿಕೆ ಇರುವಾಗಲೇ ನಟಿ ಮದುವೆ ಕಡೆ ಗಮನ ನೀಡಿದ್ದಾರೆ ಎಂದು ತಿಳಿದು ಅವರ ಅಭಿಮಾನಿಗಳಿಗೆ ಇನ್ನು ಮುಂದೆ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ನಟಿಸುವರೋ, ಇಲ್ಲವೋ ಎನ್ನುವ ಅನುಮಾನ ಮೂಡಿದೆ.

Leave a Comment