ಸಿಂಹದ ಮುಂದೆ ನಟಿಸೋದು ಕಷ್ಟವೇ: ಪ್ರೀ ರಿಲೀಸ್ ಈವೆಂಟ್ ನಲ್ಲಿ ಬಾಲಯ್ಯನ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?

Entertainment Featured-Articles Movies News
56 Views

Duniya Vijay : ಸಲಗದಂತ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ ನಂತರ ಸ್ಯಾಂಡಲ್ವುಡ್(Sandalwood) ನಟ ದುನಿಯಾ ವಿಜಯ್(Duniya Vijay) ಅವರು ನೆರೆಯ ತೆಲುಗು ಸಿನಿಮಾ ಇಂಡಸ್ಟ್ರಿಗೆ ಅಡಿ ಇಟ್ಟಿದ್ದಾರೆ. ತೆಲುಗಿನ ಹಿರಿಯ, ಸ್ಟಾರ್ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಅವರು ನಾಯಕನಾಗಿ ನಟಿಸಿರುವ ವೀರ ಸಿಂಹಾ ರೆಡ್ಡಿ(Veera Simha Reddy) ಸಿನಿಮಾದಲ್ಲಿ ದುನಿಯ ವಿಜಯ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್ ಬಿಡುಗಡೆ ನಂತರ ಅದರಲ್ಲಿ ದುನಿಯಾ ವಿಜಯ್ ಅವರ ಅಬ್ಬರವನ್ನು ಕಂಡು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ಇತ್ತೀಚಿಗೆ ನಡೆದ ವೀರ ಸಿಂಹಾ ರೆಡ್ಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲೂ ಸಹಾ ದುನಿಯಾ ವಿಜಯ್ ಅವರ ಬಗ್ಗೆ ಮೆಚ್ಚುಗೆಗಳು ಹರಿದು ಬಂದಿದೆ. ಪ್ರೀ ರಿಲೋಸ್ ಈವೆಂಟ್ ನಲ್ಲಿ ಮಾತನಾಡಿದ ದುನಿಯಾ ವಿಜಯ್ ಅವರು, ಈ ಸುವರ್ಣಾವಕಾಶ ದೊರೆಯಲು ನಿರ್ದೇಶಕ ಗೋಪಿಚಂದ್(Gopi Chand), ಮೈತ್ರಿ ಮೂವಿ ಮೇಕರ್ಸ್(Mythri Movie Makers) ಮತ್ತು ಬಾಲಯ್ಯ(Balayya) ಕಾರಣ ಎನ್ನುವ ಮಾತನ್ನು ಹೇಳಿದ್ದಾರೆ. ಇದೇ ವೇಳೆ ದುನಿಯ ವಿಜಯ್ ಅವರು ಸಿಂಹದ ಮುಂದೆ ನಟಿಸುವುದು ಕಷ್ಟ ಎಂದು ಬಾಲಕೃಷ್ಣ ಅವರನ್ನು ಹೊಗಳಿದ್ದಾರೆ.

ಈ ಸಂಕ್ರಾಂತಿಗೆ ಉ ಗ್ರ ನರಸಿಂದ ಉ ಗ್ರ ರೂಪದಲ್ಲೂ, ಶಾಂತಿ ರೂಪದಲ್ಲೂ ಕಾಣಿಸಲಿದ್ದಾನೆ. ಶಾಂತಿ ಬೇಕೆಂದರೆ ಶಾಂತಿ ಸಿಗಲಿದೆ, ಉ ಗ್ರ ರೂಪ ಬೇಕೆಂದರೆ ಅದು ಕೂಡಾ ಇರಲಿದೆ. ಗೋಪಿಚಂದ್ ಈ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಹೇಳಿದಾಗಲೇ ನಾನು ಥ್ರಿಲ್ ಆಗಿದ್ದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಕೂಡಾ ಒಂದು ದೊಡ್ಡ ಪಿಲ್ಲರ್ ಇದ್ದಂತೆ ಎನ್ನುವ ಮಾತನ್ನು ಹೇಳುವ ಮೂಲಕ ವೀರ ಸಿಂಹಾ ರೆಡ್ಡಿ ಸಿನಿಮಾದ ವಿಚಾರವಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ನಂತರ ನಂದಿನಿಗೆ ಬಿಗ್ ಸರ್ಪ್ರೈಸ್ ಕೊಟ್ಟ ರೂಪೇಶ್ ಶೆಟ್ಟಿ: ವೈರಲ್ ಫೋಟೋಗಳು

ಬಾಲಕೃಷ್ಣ(Nandamuri Balakrishna) ಅವರು ಮಾತನಾಡುತ್ತಾ, ದುನಿಯಾ ವಿಜಯ್ ನಮ್ಮ‌ ಸಿನಿಮಾದಲ್ಲಿ ಉತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ.‌ ಅವರನ್ನು ತೆರೆ ಮೇಲೆ ಅಚ್ಚರಿ ಪಡುವಿರಿ, ಆ ಪಾತ್ರ ಮಾಡಿದ್ದಕ್ಕೆ ನನ್ನ ಸಹೋದರನಿಗೆ ಧನ್ಯವಾದಗಳು, ಸ್ಯಾಂಡಲ್ವುಡ್ (Sandalwood) ನಲ್ಲಿ ದೊಡ್ಡ ಹೀರೋ ಆಗಿದ್ದರೂ ಇಲ್ಲಿ ಬಂದು ವಿ ಲ ನ್ ಪಾತ್ರವನ್ನು ಮಾಡಿದ್ದಾರೆ. ಇದು ಸಾಮಾನ್ಯ ವಿಷಯ ಅಲ್ಲ, ಕನ್ನಡ ಮತ್ತು ತೆಲುಗು ಭಾಷೆಯ ನಡುವೆ ಮೈತ್ರಿ ಆದಂತೆ ಇದೆ ಎಂದು ಎನ್ನುವ ಮಾತುಗಳನ್ನು ಹೇಳಿದ್ದಾರೆ.

Leave a Reply

Your email address will not be published. Required fields are marked *