ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಆದ ಕನ್ನಡ ಕಿರುತೆರೆಯ ಮೋಹಕ ನಟಿ: ಶುಭ ಹಾರೈಸಿದ ಅಭಿಮಾನಿಗಳು

Entertainment Featured-Articles News
99 Views

ಕಳೆದ ಒಂದೂವರೆ ವರ್ಷದಿಂದಲೂ ಕನ್ನಡದ ಕಿರುತೆರೆಯ ಹಾಗೂ ಸ್ಯಾಂಡಲ್ವುಡ್ ನ ಬಹಳಷ್ಟು ಜನರು ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಹೊಸ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ಕೊರೊನಾ ಕಾಲವಾದ್ದರಿಂದ ಬಹಳಷ್ಟು ಜನ ಕಲಾವಿದರು ಸರಳವಾಗಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಅವರ ವಿವಾಹದ ಫೋಟೋಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗಲೇ ಅನೇಕರಿಗೆ ವಿವಾಹದ ವಿಷಯ ತಿಳಿದಿತ್ತು. ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭ ಹಾರೈಸಿದ್ದರು. ಇದೀಗ ಕನ್ನಡ ಕಿರುತೆರೆಯ ಮತ್ತೋರ್ವ ಮೋಹಕ ನಟಿ ವಿವಾಹ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ, ಅವರ ಮದುವೆಯ ಫೋಟೋಗಳು ಗಮನ ಸೆಳೆಯುತ್ತಿವೆ.

ಹರ ಹರ ಮಹಾದೇವ ಸೀರಿಯಲ್ ನಲ್ಲಿ ಪಾರ್ವತಿಯ ಪಾತ್ರವನ್ನು ಹೇಗೆ ತಾನೇ ಮರೆಯಲು ಸಾಧ್ಯ, ಆ ಪಾತ್ರದ ಮೂಲಕವೇ ಕರ್ನಾಟಕದ ಜನರ ಮನಸ್ಸನ್ನು ಗೆದ್ದ ನಟಿ ಪ್ರಿಯಾಂಕ ಚಿಂಚೋಳಿ. ಈಗ ಮನಸಾರೆ, ಮನಸ್ಸೆಲ್ಲಾ ನೀನೇ ಸೀರಿಯಲ್ ಗಳ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ‌ ಪ್ರಿಯಾಂಕ ಚಿಂಚೋಳಿ ಅವರು. ಕಿರುತೆರೆಯಲ್ಲಿ ತನ್ನ ನಟನೆ ಹಾಗೂ ಅಂದದ ಮೂಲಕ ಅನೇಕರ ಹೃದಯವನ್ನು ಗೆದ್ದು ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ನಟಿಯು ಇದೀಗ ತಮ್ಮ ಜೀವನದ ಮತ್ತೊಂದು ಮಹತ್ವದ ಘಟ್ಟಕ್ಕೆ ಅಡಿಯಿಟ್ಟಿದ್ದಾರೆ.

ಹೌದು ನಟಿ ಪ್ರಿಯಾಂಕಾ ಚಿಂಚೋಳಿ ಅವರು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದು, ಅವರ ರಿಜಸ್ಟರ್ ಮದುವೆಯ ಫೋಟೋಗಳು ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಟಿ ಪ್ರಿಯಾಂಕ ಅವರು ರಾಕೇಶ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ನಟಿ ಪ್ರಿಯಾಂಕ ಅವರು ರಾಕೇಶ್ ಅವರನ್ನು ಕಳೆದ ವರ್ಷ ಜುಲೈನಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ. ರಾಕೇಶ್ ಅವರು ಅಮೆರಿಕಾದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಈ ವರ್ಷ ಪ್ರೇಮಿಗಳ ದಿನದಂದು ಪ್ರಿಯಾಂಕ ಹಾಗೂ ರಾಕೇಶ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬರುವ ಡಿಸೆಂಬರ್ ನಲ್ಲಿ ಸಾಂಪ್ರದಾಯಿಕವಾಗಿ ಅವರು ಮದುವೆ ನಡೆಯಲಿದೆ ಎನ್ನಲಾಗಿದೆ.

ರಾಕೇಶ್ ಅವರು ಅಮೆರಿಕಾ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷರಾಗಿ ವೃತ್ತಿಯನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ನಟಿಯು ತಮ್ಮ ರಿಜಿಸ್ಟರ್ ಮ್ಯಾರೇಜ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಅವರ ಅಭಿಮಾನಿಗಳು ಅವರಿಗೆ ಹೊಸ ಜೀವನಕ್ಕೆ ಶುಭವನ್ನು ಹಾರೈಸುತ್ತಿದ್ದಾರೆ. ನಟಿ ಪ್ರಿಯಾಂಕ ಅವರು ಮದುವೆ ನಂತರವೂ ನಟಿಯಾಗಿ ತಮ್ಮ ವೃತ್ತಿಯಾಗಿರುವ ನಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಪ್ರಿಯಾಂಕ ಹಾಗೂ ರಾಕೇಶ್ ಅವರ ನವ ಜೀವನಕ್ಕೆ ನಾವು ಸಹಾ ಶುಭ ಹಾರೈಸೋಣ.

Leave a Reply

Your email address will not be published. Required fields are marked *