ಸಾವಿರ ಕಿಮೀ ಪಯಣಿಸಿ ಬಂದ RCB ಅಭಿಮಾನಿಗೆ ದಿನೇಶ್ ಕಾರ್ತಿಕ್ ಕೊಟ್ರು ಅದ್ಭುತ ಪ್ರತಿಕ್ರಿಯೆ!!

Entertainment Featured-Articles News Sports

ಐಪಿಎಲ್ 2022 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ‌ ಗೆಲುವು ಗಳ ಮೂಲಕ ತನ್ನ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯನ್ನು ನೀಡಿದೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಕ್ಷಿಸಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ಅವರು ಪ್ರದರ್ಶನ ನೀಡಿದ ಸ್ಪೋ ಟ ಕ ಪ್ರದರ್ಶನದಿಂದಾಗಿ ಡೆಲ್ಲಿ ವಿ ರು ದ್ಧ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಗೆಲುವಿನ ನಗೆಯನ್ನು ಬೀರುವಂತಾಗಿದೆ. ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ 66 ರನ್ ಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಈಗ ಮತ್ತೊಂದು ಆಸಕ್ತಿಕರ ವಿಚಾರ ಏನೆಂದರೆ ಪಂದ್ಯದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರು ಹಿಡಿದಿದ್ದ ಬ್ಯಾನರ್ ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು ಅಭಿಮಾನಿಯೊಬ್ಬರು, ಹಿಡಿದಿದ್ದ ಬ್ಯಾನರ್ ನಲ್ಲಿ, ” ಆರ್ ಸಿ ಬಿ ತಂಡವನ್ನು ಬೆಂಬಲಿಸುವ ಉದ್ದೇಶದಿಂದ 1000 ಕಿಮೀ ಪ್ರಯಾಣಿಸಿದ್ದೇನೆ ಮತ್ತು ಈ ಬಾರಿ ಕಪ್ ನಮ್ಮದೇ” ಎಂದು ಬರೆಯಲಾಗಿತ್ತು. ಈ ಬ್ಯಾನರ್ ಹಿಡಿದು ಅಭಿಮಾನಿಯು ಸಂಭ್ರಮಿಸಿದ್ದರು.

ಅಭಿಮಾನಿಯು ಹಿಡಿದಿದ್ದ ಈ ಬ್ಯಾನರ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬ್ಯಾನರ್ ಅನ್ನು ಗಮನಿಸಿದ ದಿನೇಶ್ ಕಾರ್ತಿಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬ್ಯಾನರ್ ಅನ್ನು ಹಂಚಿಕೊಂಡಿದ್ದು ಮಾತ್ರವೇ ಅಲ್ಲದೇ ಅದರ ಜೊತೆಗೆ ಅವರು, “ಅಷ್ಟು ದೂರದ ಪ್ರಯಾಣ ಫಲಪ್ರದವಾಗಲಿ” ಎನ್ನುವ ಪ್ರತಿಕ್ರಿಯೆಯನ್ನು ನೀಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರ ಪೋಸ್ಟ್ ಗೆ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಗಳು ಹರಿದು ಬಂದಿದೆ.

ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಅವರದ್ದು ಈ ಬಾರಿ ಅವರ ಕನಸನ್ನು ನನಸು ಮಾಡಿಕೊಳ್ಳುವ ಮಹತ್ವದ ಪಯಣವಾಗಿದೆ. ನಡೆದಿರುವ ಆರು ಪಂದ್ಯಗಳಲ್ಲಿ ಅವರು ಒಟ್ಟು 197 ರನ್ ಗಳನ್ನು ಸಿಡಿಸಿ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ. ಏಪ್ರಿಲ್19 ರಂದು ಆರ್ ಸಿ ಬಿ ಲಕ್ನೋ ವಿ ರು ದ್ಧ ಆಟವನ್ನು ಆಡಲಿದ್ದು, ಅಭಿಮಾನಿಗಳು ದಿನೇಶ್ ಕಾರ್ತಿಕ್ ಅವರ ಮೇಲೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ.

Leave a Reply

Your email address will not be published.