ಸಾವಿರಕ್ಕೊಬ್ಬರು ಮಾತ್ರ ಉತ್ತರ ಕೊಡ್ತಿದ್ದಾರೆ!! ಈ ಚಿತ್ರದಲ್ಲಿರೋ 8 ಪ್ರಾಣಿಗಳನ್ನು ಪತ್ತೆ ಹಚ್ತೀರಾ??

Entertainment Featured-Articles News

ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ನ ಚಿತ್ರಗಳು ಪ್ರಸ್ತುತ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದು, ಪ್ರತಿಯೊಬ್ಬರೂ ಸಹಾ ತಮ್ಮ ಬುದ್ಧಿ ಮತ್ತೆಯನ್ನು ಪರೀಕ್ಷೆ ಮಾಡಲು ಸಜ್ಜಾಗುತ್ತಿದ್ದಾರೆ.
ಇಂತಹ ಚಿತ್ರಗಳ ಮೂಲಕ ಕೆಲವರು ತಮ್ಮ ಕಣ್ಣಿನ ದೃಷ್ಟಿ, ಏಕಾಗ್ರತೆಯ ಮಟ್ಟ, ವೀಕ್ಷಣ ಕೌಶಲ್ಯ ಹಾಗೂ ಸಮಯದ ವಿವರಗಳಿಗೆ ಗಮನ ನೀಡುತ್ತಾ, ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿ ಕೊಳ್ಳುತ್ತಿದ್ದಾರೆ. ಆ ದೃಷ್ಟಿ ಭ್ರಮೆಯ ಚಿತ್ರಗಳು ಕೇವಲ ಮನರಂಜನೆಯ ವಿಚಾರವಾಗಿ ಉಳಿದಿಲ್ಲ. ಬದಲಾಗಿ ಅವು ಹೊಸ ಹೊಸ ಸವಾಲಿನೊಂದಿಗೆ ಮೆದುಳಿಗೆ ಕೆಲಸವನ್ನು ನೀಡುತ್ತಿವೆ‌.

ಈ ಚಿತ್ರಗಳಲ್ಲಿ ಕೆಲವೊಂದು ವಿಷಯಗಳು ನಮ್ಮ ಕಣ್ಮುಂದೆ ಇದ್ದರೂ ಅದನ್ನು ತಕ್ಷಣಕ್ಕೆ ಗುರುತಿಸಲು ಸಾಧ್ಯವಾಗದೇ, ಅದು ಎಲ್ಲಿದೆ? ಎನ್ನುವುದನ್ನು ಪತ್ತೆ ಹಚ್ಚುವ ಸವಾಲನ್ನು ಈ ಚಿತ್ರಗಳು ನಮ್ಮ ಮುಂದೆ ಇಡುತ್ತೇವೆ. ಸಾಮಾನ್ಯವಾಗಿ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳನ್ನು ಕಂಡುಹಿಡಿಯುವ ಫೋಟೋಗಳು ನೆಟ್ಟಿಗರ ಗಮನವನ್ನು ಬಹಳವಾಗಿ ಸೆಳೆದು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತವೆ. ಚಿತ್ರದಲ್ಲಿ ಅಡಗಿರುವ ಪ್ರಾಣಿಗಳನ್ನು ಕಂಡು ಹಿಡಿಯಲು ಜನ ತಲೆ ಕೆರೆದುಕೊಳ್ಳುತ್ತಾರೆ.

ತಮ್ಮ ಗಮನವನ್ನು ಅತ್ತ ಕಡೆ ಕೇಂದ್ರೀಕರಿಸುತ್ತಾರೆ. ಈಗ ಅಂತಹ ಹೊಸ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಅಡಗಿರುವ ಪ್ರಾಣಿಗಳನ್ನು ಕಂಡುಹಿಡಿಯುವ ಸವಾಲನ್ನು ಅದು ಜನರ ಮುಂದೆ ಇಟ್ಟಿದ್ದು, ಬಹಳಷ್ಟು ಜನರಿಗೆ ಇದೊಂದು ಬಿಡಿಸಲಾರದ ಕಗ್ಗಂಟು ಎನ್ನುವಂತೆ ಕಾಣುತ್ತಿದೆ. ಈಗ ವೈರಲ್ ಆಗಿರುವ ಫೋಟೋದಲ್ಲಿ ನಾವು ಗಮನಿಸಿದಾಗ ರೇಖೆಗಳಿಂದ ರಚಿಸಿರುವ ಒಂದು ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಇಲ್ಲಿ ಆ ರೇಖೆಗಳ ನಡುವೆಯೇ ಒಂದಲ್ಲಾ, ಎರಡಲ್ಲಾ ಒಟ್ಟು ಎಂಟು ಪ್ರಾಣಿಗಳು ಅಡಗಿದೆ ಎಂದು ಹೇಳಲಾಗಿದೆ. ಆ ಎಂಟು ಪ್ರಾಣಿಗಳು ಎಲ್ಲಿವೆ ಎನ್ನುವುದನ್ನು ನಾವು ಗುರುತಿಸಬೇಕಾಗಿದೆ. ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಕಂಡುಹಿಡಿಯುವ ಸವಾಲನ್ನು ನಮ್ಮ ಮುಂದೆ ಇಟ್ಟಿದ್ದು, ಇದು ನಮ್ಮ ದೃಷ್ಟಿ ಮತ್ತು ಏಕಾಗ್ರತೆಯ ಪರೀಕ್ಷೆಗೆ ನಮ್ಮನ್ನು ಸಜ್ಜುಗಳಿಸುವಂತಿವೆ.

ಮೊದಲ ನೋಟದಲ್ಲಿ ಕಪ್ಪು-ಬಿಳುಪಿನ ರೇಖಾಚಿತ್ರ ಮಾತ್ರವೇ ನಮಗೆ ಕಾಣುತ್ತದೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಮರಗಳ ಕಾಂಡ ಮತ್ತು ಕೊಂಬೆಗಳ ನಡುವೆ ಅಡಗಿ ಕುಳಿತಿರುವ ಪ್ರಾಣಿಗಳನ್ನು ನೀವು ಕಂಡುಕೊಳ್ಳಬಹುದು. ನಿಮಗೆ ಯಾವುದಾದರೂ ಪ್ರಾಣಿ ಅಥವಾ ಪ್ರಾಣಿ ಆಕಾರದ ರೇಖೆಯು ಕಾಣಬಹುದು. ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿ. ಪ್ರಾಣಿಗಳ ಆಕಾರವನ್ನು ಮೂಡಿಸಲು ಮರದ ಕೊಂಬೆಗಳು ಹೇಗೆ ಹೆಣೆದುಕೊಂಡಿದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ.

ಅನಂತರ ನಿಮಗೆ ಈ ಚಿತ್ರದ ಎಡಬಾಗದಲ್ಲಿ 3 ಬಲಭಾಗದಲ್ಲಿ 3 ಮತ್ತು ಮಧ್ಯದಲ್ಲಿ ಎರಡು ಪ್ರಾಣಿಗಳಿರುವುದು ನಿಮಗೆ ಕಾಣಬಹುದು. ಆಗ ಅದನ್ನು ಮಾರ್ಕ್ ಮಾಡಿ. ಈಗ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿ. ನೀವು ಗುರುತಿಸಿರುವ ಆಕಾರದಲ್ಲಿ ಇರುವ ಪ್ರಾಣಿಗಳು ಯಾವುವು ಎನ್ನುವುದನ್ನು ಸಹಾ ಈಗ ನೀವು ಸ್ಪಷ್ಟವಾಗಿ ಗುರುತಿಸುವ ಸಾಮರ್ಥ್ಯ ನಿಮ್ಮದಾಗುವುದು.

Leave a Reply

Your email address will not be published.