ಜೀವನದ ಅತ್ಯಂತ ದೊಡ್ಡ ಸತ್ಯವೆಂದರೆ ಅದು ಮೃ ತ್ಯು. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹುಟ್ಟಿದವರ ಸಾವು ಖಚಿತ. ಪ್ರತಿಯೊಬ್ಬರ ಸಾವು ನಿಗಧಿಯಾಗಿರುತ್ತದೆ. ಆದರೆ ಅಕಾಲಿಕ ಮರಣ ದೇವರು ನೀಡುವ ಶಿಕ್ಷೆ ಎಂದು ಹೇಳಲಾಗುತ್ತದೆ. ಈ ರೀತಿ ಅಕಾಲಿಕವಾಗಿ ಮರಣಹೊಂದಿದವರು ನಿಗಧಿತ ಸಮಯದವರೆಗೆ ದೇಹವಿಲ್ಲದ ಆತ್ಮಗಳಾಗಿ ಅಲೆಯುವರು ಎಂದು ಹೇಳಲಾಗುತ್ತದೆ. ಸಾವು ಯಾವಾಗ ಬರುತ್ತದೆ? ಯಾರನ್ನು ತೆಗೆದುಕೊಂಡು ಹೋಗುತ್ತದೆ? ಎನ್ನುವುದನ್ನು ಯಾರಿಂದಲೂ ಹೇಳುವುದು ಸಾಧ್ಯವಿಲ್ಲ.
ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನಿಗೆ ಆತನ ಸಾವು ಬರುವ ಮೊದಲು, ಕೆಲವೊಂದು ಸೂಚನೆಗಳು ಸಿಗುತ್ತದೆ ಎಂದು ಹೇಳಲಾಗಿದೆ. ಆ ಸೂಚನೆಗಳು ಶೀಘ್ರದಲ್ಲೇ ಸಾವು ಸಂಭವಿಸುತ್ತದೆ ಎನ್ನುವ ಎಚ್ಚರಿಕೆಯ ಚಹ್ನೆಗಳಾಗಿವೆ ಎನ್ನಲಾಗುತ್ತದೆ. ಶಿವಪುರಾಣದಲ್ಲಿ ಶಿವನು ಮಾತೆ ಪಾರ್ವತಿಗೆ ಈ ವಿಚಾರಗಳನ್ನು ಹೇಳುವಾಗ ಕೆಲವೊಂದು ಚಿಹ್ನೆಗಳನ್ನು ಉಲ್ಲೇಖ ಮಾಡಿರುವುದಾಗಿ ಹೇಳಲಾಗಿದೆ. ಹಾಗಾದರೆ ಸೂಚನೆಗಳು ಯಾವುವು ಎಂದು ತಿಳಿಯೋಣ.
ಶಿವಪುರಾಣದಲ್ಲಿ ತಿಳಿಸಿರುವಂತೆ ಮನುಷ್ಯನಿಗೆ ಸಾವು ಸನ್ನಿಹಿತವಾಗುತ್ತಿರುವಾಗ, ಕೆಲವು ದಿನಗಳಿಗೆ ಮೊದಲೇ ಆತನ ನಾಲಗೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ನಾಲಗೆ ಆಹಾರದ ರುಚಿಯನ್ನು ಸರಿಯಾಗಿ ಗ್ರಹಿಸುವುದಿಲ್ಲ. ಅಲ್ಲದೇ ಆ ವ್ಯಕ್ತಿಯು ಮಾತನಾಡುವುದು ಕೂಡಾ ಸ್ಪಷ್ಟವಾಗಿರುವುದಿಲ್ಲ ಹಾಗೂ ಮಾತನಾಡಲು ಕಷ್ಟಪಡುವಂತಾಗುತ್ತದೆ.
ಯಾವುದಾದರೂ ವ್ಯಕ್ತಿಯೊಬ್ಬನು ಸೂರ್ಯ, ಚಂದ್ರ ಹಾಗೂ ಅಗ್ನಿಯ ಪ್ರಕಾಶವನ್ನು ನೋಡಲು ಸಾಮರ್ಥ್ಯವನ್ನು ಕಳೆದುಕೊಳ್ಳುವನು ಎಂದರೆ ಆ ವ್ಯಕ್ತಿಗೆ ಸಾವು ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಸಾವು ಸನ್ನಿಹಿತವಾದ ವ್ಯಕ್ತಿಯು ಸೂರ್ಯ, ಚಂದ್ರ ಹಾಗೂ ಅಗ್ನಿಯ ಪ್ರಕಾಶವನ್ನು ಸಾಮಾನ್ಯ ಪ್ರೀತಿಯಲ್ಲಿ ನೋಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾನೆ ಎನ್ನಲಾಗಿದೆ.
ವ್ಯಕ್ತಿಯೊಬ್ಬನ ದೇಹದ ಬಣ್ಣ ತಿಳಿ ಹಳದಿ ಅಥವಾ ಬಿಳಿಯ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಅದು ಕೂಡಾ ಸಾವಿನ ಚಿಹ್ನೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ ವ್ಯಕ್ತಿಯ ನೆರಳು ಆತನಿಗೆ ಕಾಣಿಸುತ್ತಿಲ್ಲ ಎಂದರು ಅದು ಸಾವು ಸಮೀಪಿಸುತ್ತಿರುವ ಸಂಕೇತವೆಂದು ಹೇಳಲಾಗಿದ್ದು, ವಯಸ್ಸಾದವರಿಗೆ ತನ್ನ ಮುಂಡವಿಲ್ಲದ ನೆರಳು ಕಾಣಿಸ ತೊಡಗಿದರೆ ಸಾವು ಸಮೀಪಿಸುತ್ತಿದೆ ಎನ್ನುವ ಅರ್ಥ ನೀಡುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗಾದರೂ ತನ್ನ ನಾಲಗೆ, ಮುಖ, ಕಣ್ಣು ಮತ್ತು ಕಿವಿಗಳು ಕಲ್ಲಿನಂತೆ ಆಗುತ್ತಿದೆ ಎನ್ನುವ ಅನುಭೂತಿಯನ್ನುಂಟು ಮಾಡಿದರೆ ಅದು ಕೂಡ ಸಾವು ಸಮೀಪಿಸುತ್ತಿದೆ ಎನ್ನುವಾಗ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇವೆಲ್ಲಾ ನಂಬಿಕೆಯ ವಿಚಾರಗಳಾಗಿದ್ದು ಅವರವರ ಯೋಚನಾ ಲಹರಿಯ ಮೇಲೆ ನಿರ್ಧರಿತವಾಗುತ್ತದೆ.