ಸಾವಿಗೂ ಮುನ್ನ ಕೊನೆಯದಾಗಿ ಅಪ್ಪು ಕರೆ ಮಾಡಿದ್ದು ಯಾರಿಗೆ? ಆ ಕರೆಯೇ ಕೊನೆಯ ಕರೆಯಾಗಿ ಹೋಯ್ತು

Written by Soma Shekar

Published on:

---Join Our Channel---

ಚಂದನವನದ ವೀರ ಕನ್ನಡಿಗ ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ರಾಜಕುಮಾರನಂತೆ ಬೆಳಗಿದವರು. ಸರಳ, ಸಹೃದಯ ಗುಣದಿಂದಾಗಿಯೇ ಅವರು ಅಪಾರ ಅಭಿಮಾನಿಗಳನ್ನು ಹಾಗೂ ಕನ್ನಡ ಕಲಾವಿದರು ಮಾತ್ರವೇ ಅಲ್ಲದೇ ಅನ್ಯ ಭಾಷೆಯ ಸಿನಿಮಾ ನಟ, ನಟಿಯರ ಮನಸ್ಸನ್ನು ಸಹಾ ಗೆದ್ದವರು. ಇಂತಹ ಅದ್ಭುತ ನಟ ನಿನ್ನೆ ಎಲ್ಲರನ್ನೂ ಆಗಲಿದರು ಎಂದಾಗ ಇದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಅಪ್ಪು ಅವರ ನಿಧನ ವಾರ್ತೆ ಕೇಳಿ ಇಡೀ ಚಿತ್ರರಂಗ ಮೌನಕ್ಕೆ ಜಾರಿದೆ.

ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಅಂತಿಮ ದರ್ಶನಕ್ಕೆ ಜನ ಸಾಗರವೇ ಸೇರಿದೆ. ಅಪ್ಪು ಅವರ ಪ್ರತಿಯೊಂದು ವಿಷಯವೂ ಈಗ ತಿಳಿಯುವ ಆಸಕ್ತಿ ಮೂಡುತ್ತಿದೆ. ಅವರ ಸಣ್ಣ ಸಣ್ಣ ವಿಷಯಗಳು ಕೂಡಾ ವಿಶೇಷ ಎನಿಸುತ್ತದೆ. ಏಕೆಂದರೆ ಮರಳಿ ಬಾರದ ಲೋಕಕ್ಕೆ ಹೋದ ಅಭಿಮಾನ ನಟನ ಸ್ಮರಣೆಗಳೇ ಈಗ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಸಾಧನಗಳಾಗಿದೆ. ನಿನ್ನೆ ಪುನೀತ್ ಅವರು ಕೊನೆಯದಾಗಿ ಯಾರಿಗೆ, ಏಕೆ ಕರೆ ಮಾಡಿದ್ದರು ಎನ್ನುವುದು, ಅದು ಅವರ ಕೊನೆಯ ಕರೆಯಾಗುವುದು ಎಂದು ಯಾರೂ ಕೂಡಾ ನಿರೀಕ್ಷೆ ಮಾಡಿರಲಿಲ್ಲ.

ಪುನೀತ್ ಅವರು ನಿನ್ನೆ ಬೆಳಿಗ್ಗೆ ಅವರ ಮ್ಯಾನೇಜರ್ ಗೆ ಕರೆ ಮಾಡಿ, ಎಲ್ಲಿದ್ದೀಯಾ?? ಎಂದು ಕೇಳಿದ್ದರು. ಅವರ ಮ್ಯಾನೇಜರ್ ಆಗ ತಾನು ಥಿಯೇಟರ್ ನಲ್ಲಿ ಇರುವುದಾಗಿ ಹೇಳಿದ್ದಾರೆ. ಆಗ ಪುನೀತ್ ಅವರು ಬೇಗ ಮನೆಗೆ ಬಾ, ರೆಡಿಯಾಗಿ ಭಜರಂಗಿ- ಸಿ‌ನಿಮಾಕ್ಕೆ ಹೋಗೋಣ ಎಂದು ಹೇಳಿದ್ದರಂತೆ. ಆಮೇಲೆ ಯಾಕೋ ಸ್ವಲ್ಪ ಸುಸ್ತಾಗಿದೆ, ಬೇಗ ಬಾ ಎಂದಿದ್ರಂತೆ. ಅದೇ ಪುನೀತ್ ಅವರು ಮಾಡಿದ್ದ ಕೊನೆಯ ಕರೆಯಾಗುವುದು ಎನ್ನುವುದನ್ನು ಯಾರೊಬ್ಬರೂ ಸಹಾ ಊಹೆ ಕೂಡಾ ಮಾಡಿರಲಿಲ್ಲ. ಈಗ ಅದೊಂದು ಮರೆಯದ ಕೊನೆಯ ಕರೆಯಾಗಿ ಉಳಿದಿದೆ.

ಇನ್ನು ಮೊನ್ನೆ ರಾತ್ರಿ ಪುನೀತ್ ಅವರು ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜನ್ಮದಿನದ ಪಾರ್ಟಿಗೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು, ಅಲ್ಲಿ ಅವರು ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ, ಅನಿರುದ್ದ್ ಇತರರ ಜೊತೆ ಸಮಯವನ್ನು ಕಳೆದಿದ್ದರು. ಹಾಡಿ, ಕುಣಿದಿದ್ದರು‌. ಇದೇ ಅವರ ಕಡೆಯ ಪಾರ್ಟಿಯಾಯಿತು. ಪಾರ್ಟಿಯಲ್ಲಿ ಅವರೊಂದಿಗೆ ಸಮಯ ಕಳೆದವರಿಗಂತೂ ಮರು ದಿನ ಪುನೀತ್ ಇಲ್ಲ ಎನ್ನುವ ವಿಷಯ ಖಂಡಿತ ಒಂದು ದೊಡ್ಡ ಆ ಘಾ ತ ವನ್ನೇ ನೀಡಿದೆ ಎನ್ನುವುದು ಸಹಾ ವಾಸ್ತವ.

Leave a Comment