ಸಾಲ ಕೊಡುವಾಗ, ಸಾಲ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ: ಇಲ್ಲವಾದರೆ ಸಾಲದ ಬಾಧೆ ತೀರದು

Astrology tips Entertainment Featured-Articles News

ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ. ಆದರೆ ಇನ್ನೂ ಕೆಲವರು ಅದನ್ನು ನಿಜವಾಗಿ ನಂಬುವುದಿಲ್ಲ. ಆದರೆ ಇದರ ಮೇಲೆ ನಂಬಿಕೆಯುಳ್ಳವರು ಸಾಲ ನೀಡುವಾಗ ಮತ್ತು ಸಾಲ ಪಡೆಯುವಾಗ ಬಹಳ ಜಾಗರೂಕರಾಗಿರಬೇಕು, ಆದರೆ ಇದು ನಂಬಿಕೆಯಿಲ್ಲದವರಿಗೆ ಹೇಳುವ ವಿಚಾರವಲ್ಲ ಎಂಬುದಾಗಿ ಜ್ಯೋತಿಷ್ಯವು ನಮಗೆ ಹೇಳುತ್ತದೆ. ಸಾಲವನ್ನು ನೀಡುವಾಗ ನಾವು ಯಾರಿಗೆ ಸಾಲ ನೀಡಬಹುದು, ಯಾವ ದಿನದಲ್ಲಿ ನೀಡಬಹುದು ಹಾಗೂ ನಮ್ಮ ಹಣವನ್ನು ಮರಳಿ ಎಂದು ಪಡೆಯುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ನೀವು ಯಾರಿಗಾದರೂ ಸಾಲ ನೀಡುತ್ತೀರಾ ಅಥವಾ ಯಾರಿಂದಲಾದರೂ ಸಾಲವನ್ನು ಪಡೆಯುತ್ತಿರುವಿರಾ? ಏನೇ ಆಗಲಿ ಈ ಎರಡು ಕೆಲಸ ಮಾಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ನೋಡೋಣ ಬನ್ನಿ. ಜೀವನದಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಎಲ್ಲರೂ ಎಲ್ಲೋ ಒಂದು ಕಡೆ ಸಾಲ ಪಡೆಯುವ ಪರಿಸ್ಥಿತಿ ಎದುರಾಗುತ್ತದೆ. ಆಗ ಅಂತಹ ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಸಾಲವನ್ನು ತ್ವರಿತವಾಗಿ ಪಡೆಯಬಹುದು. ಆದರೆ ಕೆಲವೊಮ್ಮೆ ಕೆಲವು ಸಾಲ ದೊಡ್ಡ ಸಮಸ್ಯೆಯಾಗಬಹುದು.

ಸಾಲವನ್ನು ಪಡೆದ ನಂತರ ಅದನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಸಕಾಲಕ್ಕೆ ಹಣ ಸಿಗುವುದಿಲ್ಲ. ಆದ್ದರಿಂದ, ಯಾವುದೇ ವ್ಯಕ್ತಿಯಿಂದ ಸಾಲವನ್ನು ತೆಗೆದುಕೊಳ್ಳುವಾಗ, ಕೆಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
ಕೆಲವರಿಗೆ ಜ್ಯೋತಿಷ್ಯದಲ್ಲಿ ನಂಬಿಕೆಯೇ ಇರುವುದಿಲ್ಲ. ಕೆಲವು ಕಾರ್ಯಗಳು ಕೆಲವು ವಿಧಾನಗಳಲ್ಲಿ ನಡೆಯದೇ ಇರಬಹುದು. ಆದರೆ ಅವರಿಗೂ ಸಮಸ್ಯೆಗಳನ್ನು ಎದುರಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಕ್ಷತ್ರಗಳವರು ಸಾಲವನ್ನು ಮಾಡಬಾರದು.

ಪಂಚಾಂಗದ ಪ್ರಕಾರ ಹಸ್ತಾ ನಕ್ಷತ್ರದವರಿಗೆ ಸಾಲ ತೀರಿಸಲು ತುಂಬಾ ಕಷ್ಟವಾಗುತ್ತದೆ. ಹಾಗೆಯೇ ಮೂಲ, ಅದ್ರ, ಜ್ಯೇಷ್ಟ, ವಿಶಾಖ, ಕೃತ್ತಿಕಾ, ಉತ್ತರ, ಫಾಲ್ಗುಣಿ, ಉತ್ತರಾಷಾಡ, ಉತ್ತರ ಬಾದ್ರಪದ, ರೋಹಿಣಿ ಮುಂತಾದ ನಕ್ಷತ್ರಗಳವರು ಸಹಾ ಸಾಲಬಾಧೆಯಿಂದ ದೂರವಿರುವುದು ಉತ್ತಮವೆಂದು ಜ್ಯೋತಿಷಿಗಳು ಹೇಳುತ್ತಾರೆ. ವಾರದ ಕೆಲವು ದಿನಗಳನ್ನು ಸಹಾ ಸಾಲ ಪಡೆಯಲು ಅಥವಾ ನೀಡಲು ಒಳ್ಳೆಯದು ಮತ್ತು ಕೆಟ್ಟದು ಎಂದು ಪರಿಗಣಿಸಲಾಗುತ್ತದೆ. ಸಾಲ ತೆಗೆದುಕೊಳ್ಳಲು ಮಂಗಳವಾರ ಅತ್ಯಂತ ಪ್ರಮುಖ ದಿನವಾಗಿದೆ. ಇಂದು ಮಾಡಿದ ಸಾಲವನ್ನು ಶೀಘ್ರದಲ್ಲೇ ತೀರಿಸಲಾಗುತ್ತದೆ.

ಬುಧವಾರದ ದಿನದಂದೂ ಯಾರೂ ಯಾರಿಗೂ ಸಾಲ ಕೊಡಬಾರದು. ನೀವು ಇಂದು ಸಾಲವನ್ನು ನೀಡಿದರೆ, ಆ ಸಾಲ ಎಂದಿಗೂ ತೀರಿಸುವುದಿಲ್ಲ. ಕೆಲವೊಮ್ಮೆ ನಾವು ಕೊಟ್ಟ ಸಾಲ ಮರಳಿ ಬರುವುದಿಲ್ಲ. ಸಾಲ ತೀರಿಸಲು ಹಣವಿದ್ದರೂ ಬೇರೆ ಕಷ್ಟಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ರಾಮಬಂಟ, ರಾಮದೂತನಾದ ಶ್ರೀ ಆಂಜನೇಯನನ್ನು ಪೂಜಿಸಿದರೆ, ಸಾಲ ಬಾಧೆಗಳು ಬೇಗನೆ ದೂರವಾಗುತ್ತವೆ ಎಂದು ಹೇಳಲಾಗಿದೆ.

Leave a Reply

Your email address will not be published.