ತೆಲುಗು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡಾ ಸೇರಿದ್ದಾರೆ. ಅಪಾರವಾದ ಬೇಡಿಕೆಯನ್ನು ಸಹಾ ಉಳ್ಳ ಪೂಜಾ ಹೆಗ್ಡೆ ತನ್ನ ಅಂದ , ಅಭಿನಯ ಗಳಿಂದ ಅಪಾರವಾದ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಪ್ರತಿಭಾವಂತ ಕಲಾವಿದೆ ಎನಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮಾತ್ರ ಪೂಜಾ ಹೆಗ್ಡೆ ಅವರ ಅದೃಷ್ಟ ಅವರಿಗೆ ಕೈಕೊಟ್ಟಿದೆ ಏನೋ ಎನ್ನುವಂತೆ ಸಾಲುಸಾಲಾಗಿ ಮೂರು ಚಿತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ. ಅವರ ಸಿನಿಮಾಗಳ ಈ ಸೋಲಿನಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಿಪಡಿಸುತ್ತಿದ್ದಾರೆ.
ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ರಾಧೇಶ್ಯಾಮ್, ಬೀಸ್ಟ್ ಮತ್ತು ಆಚಾರ್ಯ ಸಿನಿಮಾಗಳು ಬಿಡುಗಡೆಯ ನಂತರ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಈ ಮೂರು ಚಿತ್ರಗಳಲ್ಲಿಯೂ ಪೂಜಾ ಹೆಗ್ಡೆ ನಾಯಕಿಯಾಗಿದ್ದರು. ಅವರಿಗೆ ಈ ಹಿನ್ನಡೆಯಿಂದ ಬೇಸರ ಖಂಡಿತ ಆಗಿದೆ. ಆದರೆ ಅವರ ಸಿನಿಮಾ ಸೋಲುಗಳಿಂದಾಗಿ, ನಟಿಯ ಬೇಡಿಕೆಯ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ಹೊಸ ಸಿನಿಮಾಗಳ ಆಫರ್ ಗಳು ಪೂಜಾ ಹೆಗ್ಡೆ ಅವರನ್ನು ಅರಸಿ ಬರುತ್ತಿವೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಅವರ ಸಾಲು ಸಾಲು ಸೋಲುಗಳನ್ನು ನೋಡಿ ಆನೇಕಲರು ಪೂಜಾ ಹೆಗ್ಡೆ ಯನ್ನು ಐರಲ್ ಲೆಗ್ ಎಂದು ವೆಂಗ್ಯ ಮಾಡುತ್ತಿದ್ದಾರೆ. ಆದರೆ ಸಿನಿಮಾ ನಿರ್ಮಾಪಕರು ಮಾತ್ರ ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ, ತಮ್ಮ ಹೊಸ ಸಿನಿಮಾಗಳಿಗೆ ಪೂಜಾ ಹೆಗ್ಡೆ ಅವರನ್ನು ನಾಯಕಿಯನ್ನಾಗಿ ಮಾಡಲು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಹೊಸ ಸುದ್ದಿಯೊಂದು ಹೊರ ಬಂದಿದೆ.
ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆಯವರನ್ನು ನಾಯಕಿ ಎಂದು ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೌದು, ತೆಲುಗಿನ ಪ್ರಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಜನಗಣಮನ ಈ ಸಿನಿಮಾವನ್ನು ನಟಿ ಚಾರ್ಮಿ ಕೌರ್ ಅವರ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ನಟ ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆರೆ ಮೇಲೆ ಮಿಂಚಲಿದ್ದಾರೆ. ವಿಜಯ ದೇವರಕೊಂಡ ಹಾಗೂ ಪೂಜಾ ಹೆಗ್ಡೆ ಜೋಡಿ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸುದ್ದಿ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಇನ್ನು ಈ ಜೋಡಿ ತೆರೆಯ ಮೇಲೆ ಯಾವ ಜಾದೂ ಮಾಡುತ್ತದೆ ಎನ್ನುವುದಕ್ಕೆ ಸಾಕಷ್ಟು ಸಮಯ ಕಾಯುವುದು ಅನಿವಾರ್ಯವಾಗಿದೆ.