ಸಾಲು ಸಾಲು ಸೋಲಿನ ಬೆನ್ನಲ್ಲೇ ಮತ್ತೆ ಇದೇನಾಯ್ತು? ನಟಿ ಪೂಜಾ ಹೆಗ್ಡೆ ಪರಿಸ್ಥಿತಿಗೆ ಮರುಕ ಪಡ್ತಿದ್ದಾರೆ ಅಭಿಮಾನಿಗಳು
ಸಿನಿಮಾ ರಂಗ ಅನ್ನೋದು ಅದೃಷ್ಟದ ಆಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಶಸ್ಸಿನ ಓಟ ಮಾಡುವಾಗಲೇ ಕೆಲವು ನಟ, ನಟಿಯರ ಅದೃಷ್ಟ ಕೈಕೊಟ್ಟು ಸಾಲು ಸಾಲು ಸೋಲನ್ನು ಸಹಾ ಎದುರಿಸಬೇಕಾಗುವುದು. ಕೆಲವರು ಸೋಲನ್ನು ಮತ್ತೆ ಅದೃಷ್ಟವನ್ನಾಗಿ ಬದಲಿಸಿಕೊಂಡರೆ, ಇನ್ನೂ ಕೆಲವರು ಮಾತ್ರ ಸತತ ಸೋಲಿನ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗತ್ತದೆ. ಬೇಡಿಕೆ ಸಹಾ ಕುಸಿಯುತ್ತದೆ. ಪ್ರಸ್ತುತ ದಿನಗಳಲ್ಲಿ ಅದೇಕೋ ದಕ್ಷಿಣ ಸಿನಿಮಾಗಳ ಸ್ಟಾರ್ ನಟಿ ಪೂಜಾ ಹೆಗ್ಡೆ ಗೆ ಅದೃಷ್ಟ ಸರಿಯಿಲ್ಲವೇನೋ ಎನ್ನುವಂತೆ ಕಾಣುತ್ತಿದೆ. ಏಕೆಂದರೆ ನಟಿಗೆ ಇತ್ತೀಚಿನ ಯಾವುದೇ ಯಶಸ್ಸು ಸಿಕ್ಕಿಲ್ಲ, ನಟಿಯ ಯಶಸ್ಸಿನ ಓಟಕ್ಕೂ ಕೊಂಚ ಬ್ರೇಕ್ ಬಿದ್ದಂತಾಗಿದೆ.
ಹೌದು, ಪೂಜಾ ಹೆಗ್ಡೆ ನಾಯಕಿಯಾಗಿದ್ದ, ನಟ ಪ್ರಭಾಸ್ ನಾಯಕನಾಗಿದ್ದ ಬಹುನಿರೀಕ್ಷಿತ ಸಿನಿಮಾ ರಾಧೇ ಶ್ಯಾಮ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಬಿಡುಗಡೆಯ ನಂತರ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ಮಾತ್ರ ಎಲ್ಲರ ಊಹೆಗೂ ಮೀರಿದಂತೆ ಸಿನಿಮಾ ಸೋಲಿನ ಕಡೆಗೆ ಮುಖ ಮಾಡಿತ್ತು. ರಾಧೇ ಶ್ಯಾಮ್ ಸೋಲಿನಿಂದ ನಟಿ ಹೊರ ಬರುವ ಮೊದಲೇ ತಮಿಳಿನಲ್ಲಿ ನಟ ವಿಜಯ್ ಜೊತೆ ನಟಿಸಿದ್ದ ಬೀಸ್ಟ್ ಸಿನಿಮಾ ಕೂಡಾ ಸೋಲು ಕಂಡಾಗ, ಅನೇಕರು ನಟಿ ಪೂಜಾ ಹೆಗ್ಡೆ ಯನ್ನು ಟ್ರೋಲ್ ಮಾಡಿದರು. ನಟಿ ಪೂಜಾ ಹೆಗ್ಡೆ ಅವರಿಗೆ ಮತ್ತೊಂದು ಸೋಲು ಎದುರಾಗಿತ್ತು.
ಈ ಎರಡು ಸಿನಿಮಾಗಳ ನಂತರ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ಅಭಿನಯದ ಆಚಾರ್ಯ ಸಿನಿಮಾದಲ್ಲಿ ಸಹಾ ಪೂಜಾ ಹೆಗ್ಡೆ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಇಲ್ಲೂ ಅದೃಷ್ಟ ಮತ್ತೊಮ್ಮೆ ಕೈಕೊಟ್ಟಂತೆ ಆಚಾರ್ಯ ಸಿನಿಮಾ ಸಹಾ ಸೋಲಿನ ಹಾದಿ ಹಿಡಿಯಿತು. ಇದರಿಂದಾಗಿ ಸತತ ಮೂರು ಸೋಲನ್ನು ನಟಿ ಎದುರಿಸಬೇಕಾಯಿತು. ಆದರೆ ಇದೆಲ್ಲದರ ನಡುವೆಯೇ ಪೂರಿ ಜಗನ್ನಾಥ್ ಮತ್ತು ವಿಜಯ ದೇವರಕೊಂಡ ಕಾಂಬಿನೇಷನ್ ನ ಹೊಸ ಸಿನಿಮಾ ಜನ ಗಣ ಮನಕ್ಕೆ ಪೂಜಾ ಹೆಗ್ಡೆ ನಾಯಕಿ ಎಂದು ಅಧಿಕೃತವಾಗಿ ಘೋಷಣೆಯಾಯಿತು.
ಆದರೆ ಅದೇಕೋ ಈಗ ಮತ್ತೆ ನಟಿ ಮತ್ತೊಮ್ಮೆ ಅದೃಷ್ಟದ ಆಟದಲ್ಲಿ ಒಂದು ಹೆಜ್ಜೆ ಹಿಂದೆ ಇಡುವಂತೆ ಆಗಿದೆ. ಹೌದು, ಲೈಗರ್ ಸಿನಿಮಾದ ಸೋಲಿನಿಂದಾಗಿ ಇದೀಗ ಪೂರಿ ಜಗನ್ನಾಥ್ ಮತ್ತು ವಿಜಯ ದೇವರಕೊಂಡ ಕಾಂಬಿನೇಷನ್ ನ ಜನಗಣಮನ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಸದ್ಯಕ್ಕೆ ಸಿನಿಮಾ ಚಿತ್ರೀಕರಣದ ಟೇಕಾಫ್ ಆಗುವುದು ಸಹಾ ಅನುಮಾನ ಎನ್ನಲಾಗಿದೆ. ನಟಿ ಪೂಜಾ ಹೆಗ್ಡೆ ಅವರ ಹೊಸ ಸಿನಿಮಾ ಈಗ ನಿಂತು ಹೋಗಿರುವುದು ಸಹಜವಾಗಿಯೇ ನಟಿಯ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದ್ದರೆ, ಇನ್ನೊಂದು ಕಡೆ ನಟಿಯ ಅದೃಷ್ಟ ಕೈಕೊಟ್ಟಿದೆ ಎನ್ನುವುದು ಕೆಲವರ ಅಭಿಪ್ರಾಯ ಆಗಿದೆ.