ಸಾಲಕ್ಕಾಗಿ ರಸ್ತೆಯನ್ನೇ ಅಡವಿಟ್ಟ ಪಾಕಿಸ್ತಾನ: ಸಾಲದ ಬಡ್ಡಿ ದರವಂತೂ ಶಾಕಿಂಗ್!!
ಪಾಕಿಸ್ತಾನದ ಆರ್ಥಿಕತೆ ಹೇಗಿದೆ ಎನ್ನುವುದು ಇಡೀ ವಿಶ್ವಕ್ಕೆ ತಿಳಿದಿರುವ ವಿಚಾರವಾಗಿದೆ. ಆದರೂ ಕೂಡಾ ಪಾಕ್ ತನ್ನ ಆರ್ಥಿಕತೆ ಭಾರತಕ್ಕಿಂತಲೂ ಉತ್ತಮವಾಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾತ್ರ ಬಿಟ್ಟಿಲ್ಲ ಹಾಗೂ ಈ ನಿಟ್ಟಿನಲ್ಲಿ ಅದು ಆಗಾಗ ಮಾಡುವ ಕೆಲವು ಕೆಲಸಗಳು ವಿಶ್ವದ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ ನಗೆಪಾಟಲಿಗೆ ಗುರಿಯಾಗುವುದು ಸಹಾ ನಡೆಯುತ್ತಲೇ ಇರುತ್ತದೆ. ಈಗ ಅಂತಹುದೇ ಮತ್ತೊಂದು ಪ್ರಯತ್ನವನ್ನು ಮಾಡಿದ್ದು, ಈ ವಿಷಯ ಈಗ ದೊಡ್ಡ ಸುದ್ದಿಯಾಗಿ, ಪಾಕ್ ನ ಆರ್ಥಿಕತೆಯ ಬಗ್ಗೆ ಮತ್ತೊಮ್ಮೆ ನಗುವಂತಾಗಿದೆ.
ಹೌದು, ಪಾಕ್ ರಸ್ತೆಯೊಂದನ್ನು ಅಡವಿಟ್ಟು ದೊಡ್ಡ ಮೊತ್ತದ ಸಾಲವನ್ನು ದುಬಾರಿ ಬಡ್ಡಿಯ ದರದಲ್ಲಿ ಪಡೆದುಕೊಂಡಿದೆ. ಪಾಕಿಸ್ತಾನ ಏಳು ವರ್ಷದ ಅವಧಿಯ ಇಸ್ಲಾಮಿಕ್ ಬಾಂಡ್ ( ಸುಕುಕ್ ) ಮೂಲಕ ಒಂದು ಶತಕೋಟಿ ಡಾಲರ್ ಗಳ ಮೊತ್ತವನ್ನು ಸಾಲವನ್ನಾಗಿ ಪಡೆದುಕೊಂಡಿದೆ. ಈ ದೊಡ್ಡ ಮೊತ್ತದ ಸಾಲಕ್ಕೆ 7.95 % ಬಡ್ಡಿದರವನ್ನು ವಿಧಿಸಲಾಗಿದೆ ಎನ್ನಲಾಗಿದ್ದು, ಲಾಹೋರ್ – ಇಸ್ಲಾಮಾಬಾದ್ ನ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಾಗಿ ಇರಿಸಿದೆ ಪಾಕ್.
ಇನ್ನು ಇಸ್ಲಾಮಿಕ್ ಬಾಂಡ್ ನ ಅಡಿಯಲ್ಲಿ ಪಾಕಿಸ್ತಾನ ಪಡೆದ ಸಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬಡ್ಡಿಯನ್ನು ಮಾಡುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ಪಾಕ್ ಸೌದಿ ಅರೇಬಿಯಾದಿಂದ ಪಡೆದಿದ್ದಂತಹ 3 ಬಿಲಿಯನ್ ಡಾಲರ್ ಅಂದರೆ ಸುಮಾರು 52,800 ಕೋಟಿ ರೂಪಾಯಿಗಳಲ್ಲಿ ಪಾಕಿಸ್ತಾನ ಈಗಾಗಲೇ 35 ಸಾವಿರದ ಇನ್ನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಲಾಗಿದೆ.
ಈ ಕಾರಣದಿಂದ ಜನವರಿ 14 ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್ ಡಾಲರ್ ನಿಂದ ಕುಸಿತವನ್ನು ಕಂಡಿದೆ. ಆದ ಕಾರಣ ಪಾಕಿಸ್ತಾನ ತನ್ನ ವಿದೇಶಿ ವಿನಿಮಯ ಮೀಸಲಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಆಗುವುದನ್ನು ತಡೆಯುವುದಕ್ಕೋಸ್ಕರವಾಗಿ ಈಗ ಹೆದ್ದಾರಿಯನ್ನು ಅಡವಿಟ್ಟು ದೊಡ್ಡ ಪ್ರಮಾಣದ ಬಡ್ಡಿ ದರದಲ್ಲಿ ದೊಡ್ಡ ಮೊತ್ತದ ಸಾಲವನ್ನು ಪಡೆದುಕೊಂಡಿದೆ.