ಸಾಯಿಪಲ್ಲವಿ ಬಗ್ಗೆ ರಶ್ಮಿಕಾ ಆಡಿದ ಮಾತು ಕೇಳಿ ದಂಗಾಗಿ ಹೋದ ನೆಟ್ಟಿಗರು!! ರಶ್ಮಿಕಾ ಮಾತುಗಳು ಖಂಡಿತ ಅನಿರೀಕ್ಷಿತ

Entertainment Featured-Articles News

ರಶ್ಮಿಕಾ ಮಂದಣ್ಣ ಸದ್ಯಕ್ಕೆ ದಕ್ಷಿಣ ಸಿನಿಮಾ ರಂಗದಲ್ಲಿ ಇಬ್ಬರು ನಟಿಯರ ಸದಾ ಒಂದಿಲ್ಲೊಂದು ವಿಷಯಗಳಿಂದ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಆ ಇಬ್ಬರು ನಟಿಯರು ರಶ್ಮಿಕಾ ಮಂದಣ್ಣ ಮತ್ತು ಸಮಂತಾ. ರಶ್ಮಿಕಾ ಪ್ರಸ್ತುತ ದಕ್ಷಿಣ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ. ಸಿನಿಮಾ ವಿಷಯಗಳಿಂದಲೇ ಅಲ್ಲ, ತಮ್ಮ ಹೇಳಿಕೆಗಳಿಂದ ಕೂಡಾ ಸದ್ದು ಮಾಡುತ್ತಾರೆ. ಈಗ ರಶ್ಮಿಕಾ ಅಂತಹುದೇ ಒಂದು ವಿಚಾರವಾಗಿ ಅಂದರೆ ತಮ್ಮ ಹೇಳಿಕೆಯಿಂದಾಗಿಯೇ ಮತ್ತೊಮ್ಮೆ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಸಿನಿಮಾ ರಂಗದಲ್ಲಿ ಸಾಮಾನ್ಯವಾಗಿ ಒಬ್ಬ ನಟಿಯು ಮತ್ತೊಬ್ಬ ನಟಿಯ ಬಗ್ಗೆ ಮೆಚ್ಚುಗೆಯ ಮಾತನಾಡುವುದು, ಇನ್ನೊಬ್ಬ ನಟಿಯ ಅಂದದ ಬಗ್ಗೆ ಹೊಗಳಿಕೆ ನೀಡುವುದು ತೀರಾ ಅಪರೂಪ. ಸಹಜವಾಗಿಯೇ ನಟಿಯರ ಮಧ್ಯೆ ಒಂದು ಸ್ಪರ್ಧೆ, ಪೈಪೋಟಿಗಳು ಇರುತ್ತವೆ. ಮೇಲ್ನೋಟಕ್ಕೆ ಅದು ಕಾಣುವುದಿಲ್ಲವಾದರೂ, ಕೆಲವೊಮ್ಮೆ ನಟಿಯರು ನೀಡುವ ಹೇಳಿಕೆಗಳಲ್ಲಿ ಅವರ ಭಾವನೆಗಳು ಇಣುಕುತ್ತವೆ. ಆದರೆ ಈಗ ನಟಿ ರಶ್ಮಿಕಾ ಮಾತ್ರ ಇದಕ್ಕೆ ತಾನು ಭಿನ್ನ ಎನ್ನುವಂತಹ ಮಾತುಗಳನ್ನು ಆಡಿದ್ದಾರೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಸಿನಿಮಾ ಬಿಡುಗಡೆಗೆ ಮುನ್ನ ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿತ್ತು. ಕಾರ್ಯಕ್ರಮದಲ್ಲಿ ತೆಲುಗಿನ ಸ್ಟಾರ್ ನಟಿಯರಾದ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಕೂಡಾ ಅತಿಥಿಗಳಾಗಿ ಆಗಮಿಸಿದ್ದರು, ಒಂದೇ ವೇದಿಕೆಯ ಮೇಲೆ ಸಾಯಿ ಪಲ್ಲವಿ ಹಾಗೂ ರಶ್ಮಿಕಾ ಕಾಣಿಸಿಕೊಂಡಿದ್ದರು.

ಅತಿಥಿಯಾಗಿ ಆಗಮಿಸಿದ್ದ ನಟಿ ಸಾಯಿ ಪಲ್ಲವಿಯನ್ನು ರಶ್ಮಿಕಾ ಈ ವೇಳೆ ಹಾಡಿ ಹೊಗಳಿದ್ದಾರೆ. ನಟಿ ರಶ್ಮಿಕಾ ಮಾತನಾಡುತ್ತಾ, ನೀವು ಈವರೆಗೆ ಏನೆಲ್ಲಾ ಮಾಡಿರುವಿರೋ ಅದನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಅದೇ ಕಾರಣದಿಂದಲೇ ನೀವು ಇಷ್ಟೊಂದು ಪ್ರೀತಿಯನ್ನು ಗಳಿಸಿದ್ದೀರಿ. ನಿಮ್ಮ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಯನ್ನು ತಂದು ಕೊಟ್ಟಿದೆ ಎನ್ನುತ್ತಾ,‌ ಸಾಯಿ ಪಲ್ಲವಿ ತುಂಬಾ ಕ್ಯೂಟಾಗಿ ಇದ್ದಾರಲ್ವ? ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ ರಶ್ಮಿಕಾ.

Leave a Reply

Your email address will not be published.