ಮಕ್ಕಳ ಸಾಮಾನ್ಯ ಜ್ಞಾನ ಪರೀಕ್ಷೇಲಿ ಸೈಫ್ ಕರೀನಾ ಪ್ಯಾಮಿಲಿ ಪ್ರಶ್ನೆ ಬೇಕಿತ್ತಾ?? ಜನರು ಗರಂ, ಶಾಲೆಗೆ ನೋಟೀಸ್!!!

Written by Soma Shekar

Updated on:

---Join Our Channel---

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಜೊತೆಗೆ ಸಾಮಾನ್ಯ ಜ್ಞಾನ ಅಥವಾ ಆಂಗ್ಲ ಭಾಷೆಯಲ್ಲಿ ಜನರಲ್ ನಾಲೆಜ್, (ಜಿಕೆ) ಕೂಡಾ ಒಂದು ವಿಷಯವೇ ಆಗಿದೆ. ಬಹುತೇಕ ಎಲ್ಲಾ ಖಾಸಗಿ ಶಾಲೆಗಳಲ್ಲಿ ಸಹಾ ಸಾಮಾನ್ಯ ಜ್ಞಾನದ ವಿಷಯದಲ್ಲೂ ಸಹಾ ನಿರ್ಧಿಷ್ಟ ಅಂಕಗಳಿಗೆ ಪರೀಕ್ಷೆಗಳನ್ನು ನಡೆಸುವುದು ಸಾಮಾನ್ಯ ಎನಿಸಿದೆ. ಸಾಮಾನ್ಯ‌ ಜ್ಞಾನದಲ್ಲಿ ಪ್ರಚಲಿತ ವಿದ್ಯಮಾನಗಳು ಹಾಗೂ ಸಾಧಕರು, ಅವರ ಸಾಧನೆಗಳನ್ನು ಮಾತ್ರವೇ ಅಲ್ಲದೇ ಹೊಸ ಹೊಸ ವಿಷಯಗಳನ್ನು ಕುರಿತಾಗಿಯೂ ವಿದ್ಯಾರ್ಥಿಗಳಿಗೆ ತಿಳಿಸಿ, ಅವರ ಜ್ಞಾನಭಂಡಾರವನ್ನು ಸಮೃದ್ಧಗೊಳಿಸುವ ಪ್ರಯತ್ನ ಮಾಡಲಾಗುತ್ತದೆ.

ಇಂತಹ ಸಾಮಾನ್ಯ ಜ್ಞಾನದ ವಿಷಯದ ಪರೀಕ್ಷೆಯನ್ನು ನಡೆಸಿರುವ ಖಾಸಗಿ ಶಾಲೆಯೊಂದು ತನ್ನ ಪ್ರಶ್ನ ಪತ್ರಿಕೆಯಲ್ಲಿ ಸಿನಿಮಾ ನಟ ನಟಿಯ ಪುತ್ರನ ಕುರಿತಾಗಿ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆ ಪತ್ರಿಕೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಪ್ರಶ್ನೆ ಪತ್ರಿಕೆ ವೈರಲ್ ಆದ ಮೇಲೆ ಜನರು ಶಾಲೆಯ ಈ ವರ್ತನೆಗೆ ಸಿಟ್ಟು ಮತ್ತು ಅಸಾಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಹೌದು ಮಧ್ಯಪ್ರದೇಶದ ಖಂಡ್ವಾ ನಗರದ ಖಾಸಗಿ ಶಾಲೆಯೊಂದರ ಜಿಕೆ ಪರೀಕ್ಷೆಯಲ್ಲಿ ಇಂತಹ ಪ್ರಶ್ನೆ ಕೇಳಲಾಗಿದೆ.

ಪ್ರಶ್ನೆಪತ್ರಿಕೆಯಲ್ಲಿ ಎರಡನೇ ಪ್ರಶ್ನೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪುತ್ರನ ಪೂರ್ತಿ ಹೆಸರನ್ನು ಬರೆಯಿರಿ ಎಂದು ಕೇಳಲಾಗಿದೆ. ಅದು ಸಾಲದು ಎಂಬಂತೆ ಅದೇ ಪ್ರಶ್ನೆ ಪತ್ರಿಕೆಯ ಐದನೇ ಪ್ರಶ್ನೆಯಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಯಾರು ?? ಎನ್ನುವ ಪ್ರಶ್ನೆಯನ್ನು ಸಹಾ ಕೇಳಲಾಗಿದ್ದು ಇದನ್ನು ಕಂಡು ನೆಟ್ಟಿಗರು ಸಿಟ್ಟಾಗಿದ್ದಾರೆ. ಭಾರತದಲ್ಲೇ ಎಷ್ಟೋ ಮಹಾನ್ ಸಾಧಕರು ಇರುವಾಗ ಬಾಲಿವುಡ್ ನ ಸ್ಟಾರ್ ಗಳು, ಅವರ ಮಕ್ಕಳು, ಉತ್ತರ ಕೊರಿಯಾದ ಸರ್ವಾಧಿಕಾರಿ ಬೇಕಾ?? ಎಂದು ಪ್ರಶ್ನೆ ಮಾಡಿದ್ದಾರೆ.

ಖಾಸಗಿ ಶಾಲೆಯ ಈ ಜಿಕೆ ಪ್ರಶ್ನೆ ಪತ್ರಿಕೆ ವೈರಲ್ ಆಗಿ ಸಾರ್ವಜನಿಕ ವಲಯದಿಂದ ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾದ ಕೂಡಲೇ ಜಿಲ್ಲಾ ಶಿಕ್ಷಣಾಧಿಕಾರಿ ಸಂಜೀವ್ ಭಾಲೇರಾವ್ ಅವರು ಶಾಲೆಗೆ ಶೋಕಾಸ್ ನೋಟೀಸ್ ನೀಡಿದ್ದು, ಈ ನಿಟ್ಟಿನಲ್ಲಿ ಶಾಲೆಯ ಮೇಲೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನುವ ಮಾತನ್ನು ಅವರು ಹೇಳಿದ್ದಾರೆ.

Leave a Comment