ಶೆಟ್ಟಿ ವಧುವಿನ ಉಂಗುರ ಸಾನ್ಯಾ ಕೈ ಬೆರಳಲ್ಲಿ! ಶಾಕ್ ಆದ ನೆಟ್ಟಿಗರು, ಏನಿದು ಹೊಸ ವಿಷಯ?

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್(Kannada Big Boss) ಸೀಸನ್ ಒಂಬತ್ತರ ಖ್ಯಾತಿಯ ನಟಿ ಸಾನ್ಯ ಅಯ್ಯರ್(Sanya Iyyer) ಅವರು ತಮ್ಮ ವೃತ್ತಿ ಜೀವನದ ವಿಚಾರಕ್ಕಿಂತ ಹೆಚ್ಚಾಗಿ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹ ಮತ್ತು ಆತ್ಮೀಯತೆ ವಿಚಾರವಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ಮುಗಿದ ನಂತರವೂ ಸಹಾ ಈ ಜೋಡಿಯ ಕುರಿತಾಗಿ ಆಗಾಗ ಸುದ್ದಿಗಳಾಗುತ್ತಿದೆ. ಈಗ ಇವರ ಬಗ್ಗೆ ಹೊಸದೊಂದು ಸುದ್ದಿ ಹರಿದಾಡಿದ್ದು ಎಲ್ಲರಿಗೂ ಸಹಾ ಅಚ್ಚರಿಯನ್ನು ಮೂಡಿಸಿದೆ. ಎಲ್ಲರ ಗಮನವನ್ನು ಸಹಾ ಈ ಸುದ್ದಿ ಸೆಳೆದಿದೆ ಎಂದರೆ ಅದು ಸುಳ್ಳಲ್ಲ.

ಬಿಗ್ ಬಾಸ್ ಓಟಿಟಿಯಲ್ಲಿ ಆರಂಭವಾದ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ(Sanya and Roopesh) ಸ್ನೇಹವು ಟಿವಿ ಬಿಗ್ ಬಾಸ್ ನಲ್ಲೂ ಸಹಾ ಮುಂದುವರೆದಿತ್ತು. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಮತ್ತು ಸಾನ್ಯಾ ಪ್ರೇಮ ಪಕ್ಷಿಗಳಾಗಿ ಗುರ್ತಿಸಿಕೊಂಡಿದ್ದರು. ಇವರ ಜೋಡಿ ಬಹಳಷ್ಟು ಮಂದಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು ಕೂಡಾ. ಸದಾ ಇಬ್ಬರೂ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದರು. ಇದೀಗ ಶೋ ನಂತರ ಸಹಾ ಅವರ ಸ್ನೇಹ ಮುಂದುವರೆದಿದೆ.

ಓಟಿಟಿ ಬಿಗ್ ಬಾಸ್ ನಲ್ಲಿ ಭೇಟಿಯಾದ ರೂಪೇಶ್ ಮತ್ತು ಸಾನ್ಯಾ(Roopesh Sanya) ನಡುವೆ ಮೂಡಿದ ಸ್ನೇಹ, ಟಿವಿ ಬಿಗ್ ಬಾಸ್ ನಲ್ಲಿ ಇನ್ನಷ್ಟು ಗಾಢವಾಗಿತ್ತು. ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆದ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ಅತ್ತು ಗೋಳಾಡಿದ್ದರು. ಹಣೆಗೆ ಮಿಸ್ ಯೂ ಸಾನ್ಯಾ ಎಂದು ಬರೆದುಕೊಂಡ ಹಣೆಪಟ್ಟಿಯನ್ನು ಸಹಾ ಕಟ್ಟಿಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಈಗ ಇವೆಲ್ಲವುಗಳ ನಡುವೆ ಸಾನ್ಯಾ ಮತ್ತು ರೂಪೇಶ್ ಕುರಿತಾಗಿ ಹೊಸ ಸುದ್ದಿ ಸದ್ದನ್ನು ಮಾಡಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಮಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಮದುವೆಯಾದ ಮಹಿಳೆಯರು ಅಲ್ಲಿನ ಸಂಪ್ರದಾಯದಂತೆ ಉಂಗುರವನ್ನು ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹದ ಸೂಚನೆ ನೀಡುವ ಆಭರಣವಾಗಿರುತ್ತದೆ ಈ ಉಂಗುರ ಎನ್ನಲಾಗಿದೆ.

ಇದೀಗ ಸಾನ್ಯಾ ಅವರ ಕೈ ಬೆರಳಲ್ಲಿ ಸಹಾ ಅಂತಹುದೊಂದು ಉಂಗುರ ಕಾಣಿಸಿಕೊಂಡಿದೆ. ಸಾನ್ಯಾ ಬೆರಳಿನಲ್ಲಿ ಕಾಣಿಸಿಕೊಂಡ ಉಂಗುರವನ್ನು ಗಮನಿಸಿದ ನೆಟ್ಟಿಗರು ನಟಿ ಸೈಲೆಂಟಾಗಿ ಮದುವೆ ಆಗಿ ಬಿಟ್ಟಿದ್ದಾರಾ? ಎಂದು ಚರ್ಚೆಗಳನ್ನು ಆರಂಭಿಸಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯಾ ಅವರ ಸ್ನೇಹವೇ ಇಂತಹುದೊಂದು ಅನುಮಾನ ಹುಟ್ಟಿಕೊಳ್ಳಲು ಈಗ ಕಾರಣವಾಗಿದೆ.

ಅಲ್ಲದೇ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಪರೋಕ್ಷವಾಗಿ ತಾವು ಇಷ್ಟ ಪಡುತ್ತಿರುವ ವಿಷಯವನ್ನು ಬಿಗ್ ಬಾಸ್ ಮನೆಯಲ್ಲೇ ಹೇಳಿಕೊಂಡಿದ್ದಾರೆ. ಫೋಟೋ ಶೂಟ್ ವೇಳೆ ಸಾನ್ಯಾ ಶೆಟ್ಟಿ ಸಂಪ್ರದಾಯದ ಉಂಗುರವನ್ನು ಧರಿಸಿರುವುದು ಎಲ್ಲಾ ವದಂತಿಗಳಿಗೆ ಕಾರಣವಾಗಿದ್ದು, ಹರಡಿರುವ ಸುದ್ದಿ ನಿಜವೋ, ಸುಳ್ಳೋ ಎನ್ನುವುದಕ್ಕೆ ಅವರೇ ಉತ್ತರವನ್ನು ನೀಡಬೇಕಾಗಿದೆ. ಅವರ ಪ್ರತಿಕ್ರಿಯೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment