ಸಾಧನೆಗೂ ವಯಸ್ಸಿಗೂ ಸಂಬಂಧ ಇಲ್ಲ ಅಂತ ಸಾಬೀತು ಮಾಡಿದ 104 ವರ್ಷದ ಅಜ್ಜಿ: ನನ್ನಿಂದ ಏನೂ ಆಗಲ್ಲ ಅನ್ನೋರು ಇದನ್ನು ತಪ್ಪದೇ ಓದಬೇಕು

Written by Soma Shekar

Published on:

---Join Our Channel---

ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ, ನಮ್ಮಲ್ಲಿ ಉತ್ಸಾಹ, ಸಾಧಿಸುವ ಛಲ ಹಾಗೂ ಹುಮ್ಮಸ್ಸು ಇದ್ದರೆ ಸಾಧನೆಯ ಹಾದಿಯು ಕಠಿಣವಾದರೂ ಕೂಡಾ ಯಾವುದೇ ವಯಸ್ಸಿನಲ್ಲೇ ಆದರೂ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಈ ಮಾತು ನಿಜಕ್ಕೂ ಅಕ್ಷರಶಃ ವಾಸ್ತವ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಕೇರಳದ 104 ವರ್ಷದ ಅಜ್ಜಿ. ಇವರು ವಯಸ್ಸು ಎನ್ನುವುದು ಕೇವಲ ಒಂದು ನಂಬರ್ ಮಾತ್ರವೇ ಎನ್ನುವುದನ್ನು ಜನರಿಗೆ ತೋರಿಸಿ ಕೊಡುವ ಮೂಲಕ ಬಹಳಷ್ಟು ಜನರಿಗೆ ಈಗ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ನೀಡುತ್ತಿದ್ದು, ದೇಶದೆಲ್ಲೆಡೆ ಯಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ.

ಕೇರಳದ ಶಿಕ್ಷಣ ಸಚಿವ ವಸುದೇವನ್ ಶಿವಕುಟ್ಟಿ ಅವರು 104 ವರ್ಷ ವಯಸ್ಸಿನ ಅಜ್ಜಿ ಕುಟ್ಟಿಯಮ್ಮ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಜ್ಞಾನ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ಕೊಟ್ಟಾಯಂನ 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಈಗ ಇಂತಹುದೊಂದು ಸಾಧನೆಯನ್ನು ಮೆರೆದು ಎಲ್ಲೆಡೆ ಸುದ್ದಿಯಾಗಿದ್ದಾರೆ. ಅವರ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100 ಕ್ಕೆ 89 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಾನು ಎಲ್ಲಾ ಹೊಸ ಕಲಿಕೆದಾರರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಕೇರಳದ ಶಿಕ್ಷಣ ಸಚಿವರು ಟ್ವೀಟ್ ಮಾಡುವ ಮೂಲಕ ಕುಟ್ಟಿಯಮ್ಮನ ಸಾಧನೆಯನ್ನು ಮೆಚ್ಚಿಕೊಂಡಿದ್ದು, ಅವರಿಗೆ ಹಾಗೂ ಇನ್ನಿತರ ಕಲಿಕೆಯ ಆಸಕ್ತಿಯನ್ನುಳ್ಳವವರಿಗೆ ಶುಭ ಕೋರಿದ್ದಾರೆ.

ಆದರೆ ಸಾಕ್ಷರತಾ ಪ್ರೇರಕ ಕಾರ್ಯಕ್ರಮದ ಮೂಲಕ ಶಿಕ್ಷಣದ ಆಸಕ್ತಿ ಪಡೆದ ಕುಟ್ಟಿಯಮ್ಮ ಎಲ್ಲಾ‌ ತರಗತಿಗೆ ಎಲ್ಲಾ ತರಗತಿಗಳಿಗೆ ಹಾಜರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಾಕ್ಷರತಾ ಪ್ರೇರಣಾ ಕಾರ್ಯಕ್ರಮದಲ್ಲಿ ತಮ್ಮ ಮನೆಯಿಂದಲೇ ಭಾಗಿಯಾಗಿದ್ದರು. ಹೀಗೆ ಓದು, ಬರಹವನ್ನು ಕಲಿತ ಕುಟ್ಟಿಯಮ್ಮ ಈಗ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಯೋ ಸಹಜ ಸಮಸ್ಯೆ ಎನ್ನುವ ಹಾಗೆ ಕುಟ್ಟಿಯಮ್ಮನಿಗೆ ಕಿವಿ ಕೇಳದ ಕಾರಣ, ಪರಿವೀಕ್ಷಕರಿಗೆ ಗಟ್ಟಿಯಾಗಿ ಮಾತನಾಡಲು ಹೇಳುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕುಟ್ಟಿಯಮ್ಮನ ಸಾಧನೆ ನೋಡಿ ಬಹಳಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿವೆ. ಇಳಿ ವಯಸ್ಸಿನಲ್ಲೂ ಕುಟ್ಟಿಯಮ್ಮನ ಏಕಾಗ್ರತೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ ಮಾತ್ರವೇ ಅಲ್ಲದೇ ಇದು ಅನೇಕ ಜನರಿಗೆ ಸ್ಪೂರ್ತಿಯನ್ನು ನೀಡಲಿದೆ ಎನ್ನುವ ಮಾತನ್ನು ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳ ಮೂಲಕ ತಿಳಿಸುತ್ತಿದ್ದಾರೆ. ನಾವೂ ಕೂಡಾ ಕುಟ್ಟಿಯಮ್ಮ ನ ಸಾಧನೆಗೊಂದು ಮೆಚ್ಚುಗೆ ನೀಡೋಣ.

Leave a Comment