ಸಾಕ್ಷಾತ್ತು ಲಕ್ಷ್ಮಿಯ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದ ದಿಯಾ ಸಿನಿಮಾ ನಾಯಕಿ ಖುಷಿ
ಕೊರೊನಾ ಪರಿಣಾಮವಾಗಿ ಕಳೆದ ವರ್ಷ ಲಾಕ್ ಡೌನ್ ಘೋಷಣೆ ಯಾದ ವಿಷಯ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ, ಏಕೆಂದರೆ ಅದೊಂದು ಮರೆಯಲಾಗದ ಇತಿಹಾಸ ಎನ್ನುವಂತಾಗಿದೆ. ಇನ್ನು ಲಾಕ್ ಡೌನ್ ಘೋಷಣೆಯಾದಾಗ ಸ್ಯಾಂಡಲ್ವುಡ್ನ 2 ಸೂಪರ್ ಹಿಟ್ ಸಿನಿಮಾಗಳಿಗೆ ಅದು ಭಾರಿ ಹೊಡೆತವನ್ನು ನೀಡಿತ್ತು. ಆ 2 ಸಿನಿಮಾಗಳೇ ದಿಯಾ ಮತ್ತು ಲವ್ ಮಾಕ್ಟೇಲ್. ದಿಯಾ ಸಿನಿಮಾ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆಯುವ ಹೊತ್ತಿನಲ್ಲೇ ಲಾಕ್ ಡೌನ್ ಘೋಷಣೆಯಾದ ಕಾರಣ, ಸಿನಿಮಾ ಥಿಯೇಟರ್ ಮುಚ್ಚಲ್ಪಟ್ಟವು. ಆಗ ದಿಯಾ ಸಿನಿಮಾ ಅರ್ಧದಲ್ಲೇ ಸಿನಿಮಾ ಥಿಯೇಟರ್ ಗಳಿಂದ ಹೊರ ಬರಬೇಕಾಯಿತು. ಆದರೆ ಅನಂತರ ಇದೇ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗಿ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿತು. ಸಾಮಾಜಿಕ ಜಾಲ ತಾಣಗಳಲ್ಲಿ ದಿಯಾ ಸಿನಿಮಾದ ಬಗ್ಗೆ ಬಹಳಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ಉತ್ತಮ ಸಿನಿಮಾ ಎಂದು ಹೊಗಳಿದರು.
ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ ನಟಿ ಖುಷಿ ಅವರು ತಮ್ಮ ಪಾತ್ರದ ಮೂಲಕ ಅಸಂಖ್ಯಾತ ಸಿನಿರಸಿಕರ ಮನಸ್ಸನ್ನು ಗೆದ್ದರು. ಸಿನಿಮಾದಲ್ಲಿ ಅವರ ನಟನೆ ಬಹಳಷ್ಟು ಜನರಿಗೆ ಹಿಡಿಸಿತು. ಹೆಂಗೆಳೆಯರು ತಮ್ಮ ಗರ್ಲ್ ಫ್ರೆಂಡ್ ದಿಯಾ ಸಿನಿಮಾದ ನಾಯಕಿಯಂತೆ ಇರಬೇಕು ಎಂದು ಆಸೆಪಟ್ಟರು. ಮತ್ತೊಂದು ವಿಶೇಷ ಸಂಗತಿ ಏನೆಂದರೆ ದಿಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಖುಷಿ ಅವರಿಗೆ ಅದಾಗಲೇ ಮದುವೆಯಾಗಿ ಮಗು ಇದೆ ಎನ್ನುವ ವಿಷಯ ಸುದ್ದಿಯಾದಾಗ ಬಹಳಷ್ಟು ಜನರು ಅದನ್ನು ಓದಿ ಆಶ್ಚರ್ಯ ಪಟ್ಟಿದ್ದರು.
ದಿಯಾ ಸಿನಿಮಾದ ನಂತರ ಬಹಳಷ್ಟು ಉತ್ತಮ ಅವಕಾಶಗಳು ಈ ನಟಿಯನ್ನು ಅರಸಿ ಬಂದಿವೆ. ಅವರು ಕೂಡಾ ಕೆಲವು ಸಂದರ್ಶನಗಳಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತಾಡಿದ್ದು ಉಂಟು. ದಿಯಾ ನಂತರ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಸಹ ಸಕ್ರಿಯವಾಗಿರುವ ಖುಷಿ ಅವರು ಆಗಾಗ ತಮ್ಮ ಫೋಟೋಶೂಟ್ ನ ಅಂದವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾಡಿರುವ ಹೊಸ ಫೋಟೋಶೂಟ್ ನ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ಆ ಫೋಟೋ ಗಳು ಬಹಳಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಖುಷಿಯವರು ತಾನು ಲಕ್ಷ್ಮಿ ರೂಪದಲ್ಲಿ ಸಿಂಗರಿಸಿಕೊಂಡು ಫೋಟೋಶೂಟ್ ಮಾಡಿಸಿರುವ ಬಹಳ ಸುಂದರ ಹಾಗೂ ಅದ್ಭುತವೆನಿಸುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಕ್ಷಾತ್ತು ಲಕ್ಷ್ಮೀದೇವಿಯ ಹಾಗೆ ಕಂಗೊಳಿಸುತ್ತಿರುವ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ನೂರಾರು ಜನ ಕಾಮೆಂಟುಗಳನ್ನು ಮಾಡಿ ಅವರ ಫೋಟೋಗಳು ಬಹಳ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.