ಸಾಕು ಪ್ರಾಣಿಗಳು ಎಂದರೆ ಕೆಲವರಿಗೆ ಅತಿಯಾದ ಪ್ರೀತಿ ಇರುತ್ತದೆ. ಅವು ತಾವು ಸಾಕಿರುವ ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ನೋಡುತ್ತಾರೆ, ಅವುಗಳಿಗೂ ಮನೆ ಮಕ್ಕಳಿಗೆ ನೀಡುವ ಹಾಗೆ ಪ್ರೀತಿಯನ್ನು ತೋರಿಸಿ, ಆಪ್ಯಾಯತೆಯಿಂದ ಆರೈಕೆಯನ್ನು ಮಾಡುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಾವು ಸಾಕಿರುವ ಪ್ರಾಣಿಗಳ ಜನ್ಮದಿನವನ್ನು ಸ್ನೇಹಿತರು, ಬಂಧು ಬಳಗವನ್ನೆಲ್ಲಾ ಕರೆದು ಬಹಳ ಅದ್ದೂರಿಯಾಗಿ ಆಚರಣೆಯನ್ನು ಮಾಡುತ್ತಾರೆ. ಅಂತಹ ವಿಷಯಗಳು ದೊಡ್ಡ ಸುದ್ದಿಯನ್ನು ಮಾಡುತ್ತವೆ.
ಇಂತಹುದೇ ಒಂದು ವಿಷಯ ಇದೀಗ ದೊಡ್ಡ ಸದ್ದು ಮಾಡಿದೆ. ಮಲೇಷ್ಯಾದ ಉದ್ಯಮಿ ಹಲೀಜಾ ಮೇಸೂರಿ ಅವರು ಇತ್ತೀಚಿಗೆ ತಮ್ಮ ಬೆಕ್ಕಿನ ನಾಲ್ಕನೇ ವರ್ಷದ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಸಾಕು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಯೊಂದರಿಂದ ಈ ಬೆಕ್ಕನ್ನು ತಂದ ಮೇಲೆ ಹಲೀಜಾ ಅದರ ಮೇಲಿನ ಪ್ರೀತಿ ಹಾಗೂ ಕಾಳಜಿಯಿಂದ ಲಕ್ಷ ಲಕ್ಷ ಗಳ ಹಣವನ್ನು ಈಗಾಗಲೇ ಖರ್ಚು ಮಾಡಿದ್ದಾರೆ. ಬೆಕ್ಕಿನ ಮೇಲೆ ಅತೀವ ಪ್ರೀತಿಯನ್ನು ಹೊಂದಿದ್ದಾರೆ ಹಲೀಜಾ.
ಆದರೆ ಇತ್ತೀಚಿಗೆ ಹಲೀಜಾ ಅವರು ತಮ್ಮ ಬೆಕ್ಕಿಗಾಗಿ ಖರ್ಚು ಮಾಡಿರುವ ಹಣದ ಬಗ್ಗೆ ತಿಳಿದರೆ ಎಲ್ಲರಿಗೂ ಗಾಬರಿಯಾಗುತ್ತದೆ. ಜನ ಅಚ್ಚರಿ ಪಡುತ್ತಿದ್ದಾರೆ. ಹಲೀಜಾ ಹಾಗೂ ಅವರ ಪತಿಯು ಇನ್ನೂ ಎರಡು ಬೆಕ್ಕುಗಳನ್ನು ಸಾಕಿದ್ದಾರೆ ಆದರೂ ಅವರಿಗೆ ಮನಿ ಎನ್ನುವ ಹೆಸರಿನ ಬೆಕ್ಕಿನ ಮೇಲೆ ಮಾತ್ರ ಹೆಚ್ಚು ಪ್ರೀತಿಯಿದೆ. ಆದ್ದರಿಂದಲೇ ತಮ್ಮ ಈ ಬೆಕ್ಕಿನ ನಾಲ್ಕನೇ ಜನ್ಮದಿನಕ್ಕಾಗಿ ಹಲೀಜಾ ಮತ್ತು ಅವರ ಪತಿ ಇಬ್ಬರೂ ಸೇರಿ ನಾಲ್ಕೂವರೆ ಲಕ್ಷ ರೂಪಾಯಿ ಬೆಲೆಯ ಲಾಕೆಟ್ ಒಂದನ್ನು ಖರೀದಿ ಮಾಡಿದ್ದಾರೆ.
ಹಲೀಜಾ ತಮ್ಮ ಬೆಕ್ಕಿನ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಶೇರ್ ಮಾಡಿಕೊಂಡ ಫೋಟೋದಲ್ಲಿ ಅವರು ಬೆಕ್ಕಿನ ಕೊರಳಿಗೆ ಹಾಕಿದ ದುಬಾರಿ ಲಾಕೆಟ್ ಕೂಡಾ ಕಾಣುತ್ತದೆ. ಅದರಲ್ಲಿ ಬೆಕ್ಕಿನ ಹೆಸರು, ಅದರ ಜನ್ಮ ದಿನಾಂಕವನ್ನು ನಮೂದು ಮಾಡಿರುವುದನ್ನು ನೋಡಬಹುದು. ಹಲೀಜಾ ಅವರ ಪತಿಗೆ ಬೆಕ್ಕುಗಳು ಅಂದರೆ ಬಹಳ ಇಷ್ಟ ಎನ್ನಲಾಗಿದ್ದು, ಅವರು ಹೊರಗೆ ಟ್ರಾವೆಲ್ ಅಥವಾ ಟ್ರಿಪ್ ಗೆ ಹೋಗುವಾಗಲೂ ಬೆಕ್ಕು ಗಳನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರೆ.
ಹಲೀಜಾ ತಮ್ಮ ಬೆಕ್ಕಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆಕೆ ದಿನಾ ತಮ್ಮ ಬೆಕ್ಕಿಗೆ ಹೊಸ ಬಟ್ಟೆಯನ್ನು ಹಾಕುತ್ತಾರೆ, ತಿಂಗಳಿಗೊಮ್ಮೆ ಪಾರ್ಲರ್ ಗೆ ಕರೆದುಕೊಂಡು ಹೋಗುವುದು ಮಾತ್ರವೇ ಅಲ್ಲದೇ ಬೆಕ್ಕಿಗೆ ಸ್ಪಾ ಟ್ರೀಟ್ಮೆಂಟ್ ಕೂಡಾ ಕೊಡಿಸುತ್ತಾರೆ. ಹಲೀಜಾ ಬೆಕ್ಕನ್ನು ತಮ್ಮ ಮನೆಯ ಸದಸ್ಯನಂತೇ ನೋಡಿಕೊಳ್ಳುತ್ತಾರೆ. ಟಿಕ್ ಟಾಕ್ ನಲ್ಲಿ ಸಹಾ ಹಲೀಜಾ ತಮ್ಮ ಬೆಕ್ಕಿನ ವೀಡಿಯೋ ಹಾಕಿ ಅದನ್ನು ಫೇಮಸ್ ಮಾಡಿದ್ದಾರೆ.