ಸಹೃದಯವಂತ ಕನ್ನಡಿಗರ ಬಳಿ ಈ 2 ವಿಷಯಗಳಿಗಾಗಿ ಕ್ಷಮೆ ಕೇಳಿದ ಬಾಹುಬಲಿ ನಿರ್ದೇಶಕ ರಾಜಮೌಳಿ
ಎಸ್ ಎಸ್ ರಾಜಮೌಳಿ ಎಂದರೆ ಇದು ದಕ್ಷಿಣ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲೇ ಸೆನ್ಸೇಷನ್ ಸೃಷ್ಟಿಸಿರುವ ನಿರ್ದೇಶಕನ ಹೆಸರು. ಬಾಹುಬಲಿ ಮೂಲಕ ಹೊಸ ಇತಿಹಾಸ, ನೂತನ ದಾಖಲೆ ಗಳನ್ನು ಬರೆದ ಈ ನಿರ್ದೇಶಕನ ಹೊಸ ಸಿನಿಮಾ ತ್ರಿಬಲ್ ಆರ್ ನ ಬಿಡುಗಡೆಗಾಗಿ ದೊಡ್ಡ ಮಟ್ಟದ ನಿರೀಕ್ಷೆಗಳು ಇವೆ, ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಂಡ ಅಪ್ಡೇಟ್ ಗಳನ್ನು ಸಹಾ ನೀಡುತ್ತಲೇ ಇರುತ್ತದೆ.
ಇನ್ನು ಇಂದು ನಿರ್ದೇಶಕ ರಾಜಮೌಳಿ ಅವರು ಬೆಂಗಳೂರಿನಲ್ಲಿ ಆರ್ ಆರ್ ಆರ್ ಸಿನಿಮಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಹಾಡಿನ ಬಿಡುಗಡೆಯ ವೇಳೆಯಲ್ಲಿ ರಾಜಮೌಳಿ ಅವರು ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಮಾತು ಆರಂಭಿಸಿದ ವೇಳೆ ಅವರು ಮೊದಲು ಎರಡು ವಿಷಯಗಳಿಗೆ ನೀವು ಕ್ಷಮಿಸಬೇಕು ಎನ್ನುವ ಮಾತನ್ನು ಹೇಳಿದ್ದಾರೆ. ಮೊದಲನೆಯ ಕ್ಷಮೆ ತಾನು ಕನ್ನಡ ತಪ್ಪಾಗಿ ಮಾತಾಡಿದರೆ ಅದಕ್ಕಾಗಿ ಎಂದು ರಾಜಮೌಳಿ ಅವರು ಹೇಳಿದರು.
ಎರಡನೆಯ ಕ್ಷಮೆಯು , ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾವುದೇ ಪ್ರೆಸ್ ಮೀಟ್ ಗಳನ್ನು ಮಾಡದೇ ಇರುವುದಕ್ಕೆ ಎನ್ನುವ ಮಾತನ್ನು ಹೇಳಿದ್ದಾರೆ. ಹಾಗೆ ಮಾತನಾಡುತ್ತಾ ಅವರು ಇನ್ನು ಜನನಿ ಸಾಂಗ್ ಅನ್ನು ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಈ ಸಿನಿಮಾದ ಒಂದು ಸೋಲ್ ಅನ್ನು ಪರಿಚಯ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ತ್ರಿಬಲ್ ಆರ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಮಾಡುವುದಾಗಿ ಹೇಳಿದ್ದಾರೆ.
ಮುಂದಿನ ತಿಂಗಳು ಬೆಂಗಳೂರಿನಲ್ಲಿ ತ್ರಿಬಲ್ ಆರ್ ನ ಪ್ರಿ ರಿಲೀಸ್ ಈವೆಂಟ್ ಆಯೋಜನೆ ಮಾಡುತ್ತಿದ್ದು, ಈ ವೇಳೆ ರಾಮ್ ಚರಣ್ ತೇಜಾ, ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ಎಲ್ರೂ ಸಹಾ ಬೆಂಗಳೂರಿನಲ್ಲಿ ಸೇರುವುದಾಗಿ ಅವರು ಹೇಳಿದ್ದಾರೆ. ತ್ರಿಬಲ್ ಆರ್ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲಕಾರಿ ಮಾಹಿತಿಗಳನ್ನು ಸಿನಿಮಾ ತಂಡ ಶೇರ್ ಮಾಡಿಕೊಂಡಿದ್ದು, ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ.