ಸಹಾಯ ಮಾಡುವುದಕ್ಕೆ ಮಿಗಿಲಾದ ದೊಡ್ಡ ಪಾತ್ರ ಇನ್ನೊಂದಿಲ್ಲ: ಅಭಿಮಾನಿಯ ಬೇಡಿಕೆಗೆ ಸೋನು ಸೂದ್ ಅರ್ಥಪೂರ್ಣ ಉತ್ತರ

Written by Soma Shekar

Published on:

---Join Our Channel---

ಬಾಲಿವುಡ್ ನಟ ಸೋನು ಸೂದ್ ಕೊರೊನಾ ಮೊದಲನೇ ಅಲೆಯ ಕಾಲದಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಿದಾಗ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಬಹಳಷ್ಟು ಶ್ರಮವನ್ನು ಪಟ್ಟಿದ್ದರು. ಅಲ್ಲದೇ ಅಂದಿನಿಂದಲೂ ಅವರು ಸಮಸ್ಯೆಗಳಲ್ಲಿ ಸಿಲುಕಿದ ಜನರಿಗೆ ನೆರವನ್ನು ನೀಡಲು ಧಾವಿಸಿದ್ದರು. ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಔಷಧಿಗಳು ಹಾಗೂ ಆಕ್ಸಿಜನ್ ಸಿಲೆಂಡರ್ ಗಳು ಹೀಗೆ ಮತ್ತೊಮ್ಮೆ ತಮ್ಮ ಸಹಾಯ ಹಸ್ತವನ್ನು ಚಾಚಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಅವರ ನೆರವನ್ನು ಕೋರಿ ಸಂಪರ್ಕಿಸುವ ಜನರಿಗೆ ಅವರ ಅಗತ್ಯಗಳನ್ನು ಅರಿತುಕೊಂಡು ಸೋನು ಸೂದ್ ಅವರು ತಮ್ಮಿಂದ ಸಾಧ್ಯವಾಗುವಷ್ಟು ನೆರವನ್ನು ನೀಡುತ್ತಾ, ದೇಶವಾಸಿಗಳ ಕಣ್ಣಲ್ಲಿ ರಿಯಲ್ ಹೀರೋ ಆಗಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಸೋನು ಸೂದ್ ಅವರ ಮುಂದೆ ಸಾವಿರಾರು ಬೇಡಿಕೆಗಳು ದಿನವೊಂದಕ್ಕೆ ಹರಿದು ಬರುತ್ತದೆ. ಅದರಲ್ಲಿ ಕೆಲವು ಅಭಿಮಾನಿಗಳು ಆಗಾಗ ಕೆಲವು ವಿಚಿತ್ರವಾದ ಬೇಡಿಕೆಗಳನ್ನು ಕೂಡಾ ಇಡುವುದುಂಟು. ವಿಶೇಷವೇನೆಂದರೆ ಸೋನು ಸೂದ್ ಅವರು ಸಹಾ ಇಂತಹ ಬೇಡಿಕೆ ಕೆಟ್ಟವರಿಗೆ ಬಹಳ ಜಾಣತನದಿಂದ ಉತ್ತರವನ್ನು ನೀಡುತ್ತಾರೆ. ಮಹೇಂದ್ರ ದುರ್ಗೆ ಹೆಸರಿನ ಟ್ವಿಟ್ಟರ್ ಬಳಕೆದಾರರು ಟ್ವೀಟ್ ಒಂದನ್ನು ಮಾಡಿ “ಸರ್ ನನಗೆ ಒಂದು ಕೋಟಿ ರೂಪಾಯಿ ಕೊಡಿ” ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು, “ಒಂದು ಕೋಟಿ ಸಾಕೇನು?? ಇನ್ನು ಸ್ವಲ್ಪ ಹೆಚ್ಚು ಕೇಳೋದಲ್ವ?? ಎಂದು ರಿಪ್ಲೈ ಮಾಡಿ ನಗುವ ಇಮೋಜಿ ಹಾಕಿದ್ದಾರೆ.

ದೀಪಾಂಶು ಸಿಂಗ್ ಎನ್ನುವ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, “ಸರ್ ನನಗೆ ನಿಮ್ಮ ಮುಂದಿನ ಸಿನಿಮಾದಲ್ಲಿ ಒಂದು ರೋಲ್ ಅಥವಾ ಪಾತ್ರವನ್ನು ಕೊಡಿಸಿ” ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನು ಸೂದ್ ಅವರು “ಬೇರೆಯವರಿಗೆ ಸಹಾಯ ಮಾಡುವುದಕ್ಕಿಂತ ದೊಡ್ಡ ಪಾತ್ರ ಇನ್ನೊಂದಿಲ್ಲ. ಆ ಪಾತ್ರವನ್ನು ಮಾಡು, ಆಗ ನಿನಗಿಂತ ದೊಡ್ಡ ಹೀರೋಯಿನ್ ಯಾರು ಇರುವುದಿಲ್ಲ” ಎನ್ನುವ ಅರ್ಥಪೂರ್ಣವಾದ ಉತ್ತರವನ್ನು ನೀಡಿದ್ದಾರೆ. ಸೋನು ಸೂದ್ ಅವರು ಅಭಿಮಾನಿಗಳ ವಿಚಿತ್ರ ಬೇಡಿಕೆಗಳಿಗೆ ನೀಡುವ ಉತ್ತರಗಳನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Comment