ಸಹನಟನ ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ ಕಮಲಿ ಸೀರಿಯಲ್ ನಟಿ: ಅನಿಕಾ ಮನಸ್ಸು ಗೆದ್ದ ಆ ನಟ ಯಾರು??

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಕಮಲಿ ಧಾರಾವಾಹಿ ಒಂದಾಗಿದೆ‌. ಕಮಲಿ ಸೀರಿಯಲ್ ನಲ್ಲಿ ಎಲ್ಲಾ ಪಾತ್ರಗಳು ವಿಶೇಷವಾಗಿದೆ. ಈ ಸೀರಿಯಲ್ ನ ನೆಗೆಟಿವ್ ಶೇಡ್ ಇರುವ ಪಾತ್ರ ಅನಿಕಾ. ನಾಯಕಿಯ ನಂತರ ಇನ್ನೊಂದು ಪ್ರಮುಖ ಪಾತ್ರ ಭರ್ಜರಿ ಜನಪ್ರಿಯತೆ ಪಡೆದಿದೆ ಎಂದರೆ ಅದು ಅನಿಕಾ ಪಾತ್ರ. ಈ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ಹೆಸರು ಗೇಬ್ರಿಯಾಲಾ‌ ಸ್ಮಿತಾ ಅಲಿಯಾಸ್ ರಚನಾ ಅವರು ನಟಿಸುತ್ತಿದ್ದು, ಅನಿಕಾ ಪಾತ್ರದ ಮೂಲಕ ಅವರು ಮನೆ ಮನೆ ಮಾತಾಗಿದ್ದಾರೆ. ರಚನಾ ಅವರನ್ನು ಕಿರುತೆರೆಯ ಪ್ರೇಕ್ಷಕರು ಅನಿಕಾ ಎನ್ನುವ ಹೆಸರಿನಿಂದಲೇ ಗುರುತಿಸುವಷ್ಟು ನಟಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ನಿಜ.

ಇದೀಗ ನಟಿ ಗೇಬ್ರಿಯಾಲಾ‌ ಹೊಸ ವಿಚಾರವೊಂದರಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ನಟಿ ಈಗ ಸುದ್ದಿಯಾಗಿರುವುದು ತಮ್ಮ ಪ್ರೇಮದ ವಿಚಾರವಾಗಿ ಎಂದರೆ ಅಚ್ಚರಿ ಆಗಬಹುದು. ಆದರೆ ಇದು ವಾಸ್ತವ ವಿಷಯವಾಗಿದೆ. ಹೌದು ನಟಿ ಗೇಬ್ರಿಯಾಲಾ‌ ಅವರಿಗೆ ಕಮಲಿ ಸೀರಿಯಲ್ ನಲ್ಲೇ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಸಹ ನಟನ ಮೇಲೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ. ‌ಹೌದು, ನಟಿ ಗೇಬ್ರಿಯಾಲಾ‌ ಅವರ ಈ ಪ್ರೀತಿಯ ವಿಚಾರ ಈಗ ಮಾದ್ಯಮಗಳಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಾಗಾದ್ರೆ ನಟಿಯ ಮನಸ್ಸು ಗೆದ್ದ ಆ ಸಹ ನಟ ಯಾರೆಂದು ತಿಳಿಯೋಣ ಬನ್ನಿ.

ಕಮಲಿ ಧಾರಾವಾಹಿಯಲ್ಲಿ ಕಮಲಿಯ ಗೆಳೆಯ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ನಟ ಸುಹಾಸ್. ಈಗ ನಟಿ ಗೇಬ್ರಿಯಾಲಾ‌ ಅವರಿಗೆ ಸುಹಾಸ್ ಅವರ ಮೇಲೆ ಪ್ರೀತಿಯಾಗಿದೆ ಎನ್ನಲಾಗಿದೆ. ಸುಹಾಸ್ ಮತ್ತು ಗೇಬ್ರಿಯಾಲಾ‌ ಇಬ್ಬರೂ ಸಹಾ ಕಳೆದ ಮೂರು ವರ್ಷಗಳಿಂದ ಸಹಾ ಪ್ರೀತಿಯಲ್ಲಿ ಇದ್ದಾರೆ ಎನ್ನಲಾಗಿದೆ. ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರವನ್ನು ನಿರ್ವಹಿಸುತ್ತಿರುವ ನಟ ಸುಹಾಸ್, ಕಿರುತೆರೆಯ ಮರಳಿ ಮನಸಾಗಿದೆ, ನಿನ್ನಿಂದಲೇ, ಮಂಗಳ ಗೌರಿ ಮದುವೆ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ ಮತ್ತು ಕೆಲವು ಸಿನಿಮಾಗಳಲ್ಲಿ ಸಹಾ ಅವರು ಕಾಣಿಸಿಕೊಂಡಿದ್ದಾರೆ.

ಈ ಜೋಡಿಯ ಮದುವೆ ಶೀಘ್ರದಲ್ಲೇ ನಡೆಯಲಿದೆ ಎನ್ನಲಾಗಿದೆ. ಅಲ್ಲದೇ ಇವರ ಆರತಕ್ಷತೆ ಕಾರ್ಯಕ್ರಮ ಬರುವ ಏಪ್ರಿಲ್ ನಲ್ಲಿ ನಡೆಯಲಿದೆ ಎಂದು ಸಹಾ ಸುದ್ದಿಯಾಗಿದೆ. ಸುಹಾಸ್ ಪ್ರೇಮ ನಿವೇದನೆ ಯನ್ನು ಮಾಡಿದ ವೀಡಿಯೋವನ್ನು ಗೇಬ್ರಿಯಾಲಾ‌ ತಮ್ಮ ಸೋಶಿಹಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಗೇಬ್ರಿಯಾಲಾ‌ ಮತ್ತು ಸುಹಾಸ್ ಇಬ್ಬರೂ ಕೂಡಾ ಬಹಳ‌ ಖುಷಿಯಲ್ಲಿದ್ದಾರೆ. ಈ ಜೋಡಿಯ ಪ್ರೀತಿಯ ವಿಚಾರ ಸುದ್ದಿಯಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಸಹಾ ಕಾಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.

Leave a Reply

Your email address will not be published.