ಸಲ್ಮಾನ್ ಖಾನ್ ಕುರಿತು ಮೆಗಾಸ್ಟಾರ್ ಚಿರಂಜೀವಿ ಟ್ವಿಟರ್ ನಲ್ಲಿ ಹೇಳಿದ ಮಾತು ಈಗ ಸಖತ್ ವೈರಲ್!!

Entertainment Featured-Articles News

ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ, ಮೋಹನ್ ರಾಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗಾಡ್ ಫಾದರ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದು ಮಲೆಯಾಳಂ ಸೂಪರ್ ಹಿಟ್ ಸಿನಿಮಾ ರಾಜಕೀಯ ಥ್ರಿಲ್ಲರ್ ಸಿ‌ನಿಮಾ ಲೂಸಿಫರ್ ನ ರಿಮೇಕ್ ಆಗಿದ್ದು, ನಟಿ ನಯನತಾರಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದು, ತೆಲುಗಿನಲ್ಲಿ ಭಾರೀ ತಾರಾಗಣದೊಂದಿಗೆ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಬಹಳ ಜೋರಾಗಿ ನಡೆಯುತ್ತಿದ್ದು, ಆಗಾಗ ಸುದ್ದಿಯಾಗುವ ಮೂಲಕ ಸಿನಿ ಪ್ರೇಮಿಗಳ ಗಮನವನ್ನು ಸೆಳೆಯುತ್ತಿದೆ.

ಇನ್ನು ಈ ಸಿನಿಮದ ಮತ್ತೊಂದು ವಿಶೇಷತೆ ಏನೆಂದರೆ ಮೊದಲ ಬಾರಿಗೆ ಬಾಲಿವುಡ್ ನ ಬಾಯ್ ಜಾನ್ ಖ್ಯಾತಿಯನ್ನು ಪಡೆದುಕೊಂಡಿರುವ ಸಲ್ಮಾನ್ ಖಾನ್ ಲೂಸಿಫರ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುವ ಮೂಲಕ ದಕ್ಷಿಣ ಸಿನಿರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಸುದ್ದಿಗಳನ್ನೆಲ್ಲಾ ನಿಜ ಮಾಡುವಂತೆ ನಟ ಸಲ್ಮಾನ್ ಖಾನ್ ಇತ್ತೀಚಿಗೆ ಲೂಸಿಫರ್ ಸಿನಿಮಾ ಸೆಟ್ ಗೆ ಬಂದಿದ್ದಾರೆ. ಈ ವಿಷಯವನ್ನು ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರು ಫೋಟೋ ಒಂದನ್ನು ಶೇರ್ ಮಾಡಿಕೊಂಡು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಟ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡು, “ಗಾಡ್ ಫಾದರ್ ಸೆಟ್ ಗೆ ಸ್ವಾಗತ, ನಿಮ್ಮ ಆಗಮನ ಪ್ರತಿಯೊಬ್ಬರಿಗೂ ಆನಂದವನ್ನ ನೀಡಿದೆ. ಅಲ್ಲದೇ ಉತ್ಸಾಹವನ್ನು ಇನ್ನೊಂದು ಲೆವಲ್ ಗೆ ತೆಗೆದುಕೊಂಡು ಹೋಗಿದೆ. ನಿಮ್ಮೊಡನೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವುದಕ್ಕೆ ಬಹಳ ಖುಷಿಯಾಗುತ್ತಿದೆ. ನಿಮ್ಮ ಇರುವಿಕೆ ಪ್ರೇಕ್ಷಕರಿಗೆ ಖಂಡಿತ ಕಿಕ್ ನೀಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮೆಗಾಸ್ಟಾರ್ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂಲ ಲೂಸಿಫರ್ ಸಿನಿಮಾದಲ್ಲಿ ಮಲೆಯಾಳಂ ಸ್ಟಾರ್ ನಟ ಪೃಥ್ವಿರಾಜ್ ಅವರು ನಟಿಸಿರುವ ಪಾತ್ರವನ್ನು , ಗಾಡ್‌ಫಾದರ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಅವರು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಚಿರಂಜೀವಿ ಅವರ ತಾಯಿ ಪಾತ್ರದಲ್ಲಿ ಪ್ರಖ್ಯಾತ ಯೂ ಟ್ಯೂಬರ್, ಬಿಗ್ ಬಾಸ್ ಖ್ಯಾತಿಯ ಗಂಗವ್ವ ನಿರ್ವಹಿಸುತ್ತಿದ್ದಾರೆ. ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

Leave a Reply

Your email address will not be published.