ಸಲ್ಮಾನ್ ಕುಟುಂಬಕ್ಕೆ ಆಘಾತ: 28 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಲು ಮುಂದಾದ ಸೊಹೇಲ್ ಖಾನ್ ದಂಪತಿ

Entertainment Featured-Articles Movies News

ಬಾಲಿವುಡ್ ನಲ್ಲಿ ವಿಚ್ಚೇದನಗಳು ಹಾಗೂ ಬ್ರೇಕಪ್ ಗಳು ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಯಾವಾಗ ಯಾವ ಸೆಲೆಬ್ರಿಟಿ ದಂಪತಿ ದೂರವಾಗುತ್ತದೆಯೋ, ಯಾವ ಸೆಲೆಬ್ರಿಟಿ ಜೋಡಿಯ ನಡುವೆ ಬ್ರೇಕಪ್ ಆಗುತ್ತದೆಯೋ ಯಾರಿಗೂ ಸಹಾ ತಿಳಿಯುವುದಿಲ್ಲ. ಅದ್ರಲ್ಲೂ ವಿಶೇಷವಾಗಿ ದಶಕಗಳ ಕಾಲ ಜೊತೆಯಾಗಿ ಜೀವನ ನಡೆಸಿದ ಸೆಲೆಬ್ರಿಟಿ ಜೋಡಿಗಳು ಇದ್ದಕ್ಕಿದ್ದ ಹಾಗೆ ವಿಚ್ಚೇದನದ ಘೋಷಣೆ ಮಾಡಿದಾಗ ಖಂಡಿತ ಅದು ಶಾಕಿಂಗ್ ಎನಿಸುತ್ತದೆ. ಅಲ್ಲದೇ ಇದು ದೊಡ್ಡ ಸುದ್ದಿಗಳು ಸಹಾ ಆಗಿ, ಮಾದ್ಯಮಗಳಲ್ಲಿ ಸದ್ದು ಮಾಡುತ್ತದೆ.

ಈಗ ಸದ್ಯ ಅಂತಹುದೇ ಒಂದು ಸೆಲೆಬ್ರಿಟಿ ಜೋಡಿಯ ವಿಚ್ಚೇದನದ ವಿಷಯ ಇದೀಗ ಸಂಚಲನವನ್ನು ಸೃಷ್ಟಿಸಿದೆ. ಹೌದು ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೇಲ್ ಹಾಗೂ ಅವರ ಪತ್ನಿ ಸೀಮಾ ಖಾನ್ ದಂಪತಿ ಈಗ ವಿಚ್ಚೇದನವನ್ನು ಪಡೆಯಲು ಮುಂದಾಗಿದ್ದು, ಬಾಲಿವುಡ್ ನಲ್ಲಿ ಈಗ ಈ ವಿಚ್ಚೇದನದ ಸುದ್ದಿಯೇ ದೊಡ್ಡ ಚರ್ಚೆಯಾಗಿದ್ದು, ಈ ಜೋಡಿಯ ವಿಚ್ಚೇದನವು ಅನೇಕರಿಗೆ ಶಾ ಕ್ ನೀಡಿದೆ. ಹೌದು, ಇದು ಖಂಡಿತ ಒಂದು ಶಾಕಿಂಗ್ ಸುದ್ದಿಯೇ ಆಗಿದೆ.

ಸೊಹೇಲ್ ಖಾನ್ ಹಾಗೂ ಸೀಮಾ ಖಾನ್ ದಂಪತಿ ಬರೋಬ್ಬರಿ 24 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ಸಜ್ಜಾಗಿದ್ದಾರೆ. ಸಲ್ಮಾನ್ ಖಾನ್ ಕುಟುಂಬದ ವಿಚಾರ ಬಂದಾಗ ಅಲ್ಲಿ ಮದುವೆಗಳ ವಿಚಾರ ಸಹಜವಾಗಿಯೇ ಸದ್ದಾಗುತ್ತದೆ. ಸಲ್ಮಾನ್ ಖಾನ್ ಅವರು ತಮ್ಮಂದಿರಲ್ಲಿ ಮೊದಲನೆಯವರಾದ ಆರ್ಬಾಜ್ ಖಾನ್ ಕೆಲವು ವರ್ಷಗಳ ಹಿಂದೆ ಮಲೈಕಾ ಅವರಿಗೆ ವಿಚ್ಚೇದನ ನೀಡುವ ಮೂಲಕ ಆ ವಿಷಯ ದೊಡ್ಡ ಸುದ್ದಿಯಾಗಿತ್ತು.

ಈಗ ಅವರ ಕಿರಿಯ ಸಹೋದರನೂ ಸಹಾ ವಿಚ್ಚೇದನ ಪಡೆಯುತ್ತಿರುವುದು ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆದಿದೆ. ಸೊಹೇಲ್ ಮತ್ತು ಸೀಮಾ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆಗೂ ಸಹಾ ಸತಿ, ಪತಿ ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಬಂದಿರುವುದು ಸಹಾ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ. ಈ ಜೋಡಿ 1998 ರಲ್ಲಿ ವಿವಾಹವಾಗಿದ್ದು, ನಿರ್ವಾನ್ ಮತ್ತು ಯೋಹಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *