ಸರ್ಕಾರ ಆದೇಶ ನೀಡದಿದ್ರೆ 50% ಕೋವಿ ಶೀಲ್ಡ್ ಲಸಿಕೆ ಉತ್ಪಾದನೆ ಕಡಿತಗೊಳಿಸುತ್ತೇವೆ.

0
221

ಕೊರೊನಾ ವಿ ರು ದ್ಧ ಹೋರಾಟದಲ್ಲಿ ಪರಿಣಾಮಕಾರಿ ಅಸ್ತ್ರ ಕೋವಿಡ್ ಲಸಿಕೆ ಎನ್ನುವುದನ್ನು ಜನರಲ್ಲಿ ಜಾಗೃತಿ ಮೂಡಿಸಲು, ಲಸಿಕೆಯನ್ನು ಇನ್ನಷ್ಟು, ಮತ್ತಷ್ಟು ಜನರಿಗೆ ತಲುಪಿಸಲು ಸರ್ಕಾರ ಅಭಿಯಾನದಂತೆ ಲಸಿಕೆ ನೀಡುವ ಕಾರ್ಯವನ್ನು ನಡೆಸುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶವು ಬರದೇ ಇರುವ ಕಾರಣ ಕೋವಿ ಶೀಲ್ಡ್ ಲಸಿಕೆಯ ಉತ್ಪಾದನೆಯನ್ನು 50% ಎಷ್ಟು ಕಡಿಮೆ ಮಾಡಲು ನಿರ್ಧಾರವನ್ನು ಮಾಡಿರುವುದಾಗಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಅವರು ಹೇಳಿದ್ದಾರೆ.

ಈ ವಿಚಾರವಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅದಾರ್ ಪೂನಾವಾಲಾ ಅವರು ಕೇಂದ್ರ ಸರ್ಕಾರವು ಲಸಿಕೆಯ ಉತ್ಪಾದನೆಗೆ ಹೆಚ್ಚುವರಿ ಆರ್ಡರ್ ನೀಡದೇ ಹೋದಲ್ಲಿ ಮುಂದಿನ ವಾರದಿಂದಲೇ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೋವಿ ಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ತಗ್ಗಿಸುವುದಾಗಿ ಹೇಳಿದ್ದಾರೆ. ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆಯ ಅಗತ್ಯವಿದ್ದರೆ ಹೆಚ್ಚುವರಿ ಲಸಿಕಾ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಆದರೆ ಈ ಹಿನ್ನೆಲೆಯಲ್ಲಿ ಸರ್ಕಾರವು ಯಾವುದೇ ಹೆಚ್ಚುವರಿ ಲಸಿಕೆಯ ಆದೇಶವನ್ನು ನೀಡಿಲ್ಲ, ಆದ ಕಾರಣ ಲಸಿಕೆಯ ಉತ್ಪಾದನೆಯನ್ನು ಕಡಿತಗೊಳಿಸಲಾಗುವುದು. 20-30 ಮಿಲಿಯನ್ ಸ್ಪೂತ್ನಿಕ್ ಲೈಟ್ ಲಸಿಕೆಯ ಡೋಸ್ ಗಳನ್ನು ಸಂಗ್ರಹಿಸುವುದಾಗಿ ಕೇಂದ್ರ ಸರ್ಕಾರವು ಹೇಳಿದೆ.‌ ನಾವು ಪರವನಾಗಿ ಪಡೆದ ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಉತ್ಪಾದನೆ‌‌ ಮಾಡಬಹುದಾಗಿದೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ‌

ಹೊಸ ರೂಪಾಂತರಿ ವೈರಸ್ ಮೇಲೆ ಲಸಿಕೆಗಳು ಪರಿಣಾಮಕಾರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈಗಿನ ಲಸಿಕೆಗಳು ರೂಪಾಂತರಿ ವೈರಸ್ ಮೇಲೆ ಕೆಲಸ ಮಾಡುವುದಿಲ್ಲ ಎಂದು ಹೇಳುವ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಪ್ರಸ್ತುತ ಇರುವ ಲಸಿಕೆಗಳ ಪರಿಣಾಮತ್ವದ ಬಗ್ಗೆಯೂ ಪೂನಾವಾಲಾ ಅವರು ಮಾತನಾಡಿದ್ದು, ಎರಡು ಡೋಸ್ ಲಸಿಕೆ ಪಡೆದವರು ಯೋಗ್ಯ ಮಟ್ಟದಲ್ಲಿ ಸುರಕ್ಷಿತವಾಗಿಲ್ಲ ಎನ್ನುವುದನ್ನು ನಂಬುವುದಕ್ಕೆ ಯಾವುದೇ ಕಾರಣವಿಲ್ಲ ಎಂದಿದ್ದಾರೆ. ‌

LEAVE A REPLY

Please enter your comment!
Please enter your name here