ಸರ್ಕಾರಿ ಶಾಲೇಲಿ ಮಕ್ಕಳಿಗೆ ಮೊಟ್ಟೆ ಕೊಡ್ತಾರೆ, ನನ್ನ ಮಗ ಅಲ್ಲಿ ಓದೋದು ಬೇಡ!! ಎಂದ ಅಪ್ಪ ಮಾಡಿದ್ದೇನು??

Written by Soma Shekar

Published on:

---Join Our Channel---

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಮಾಜದಲ್ಲಿನ ಒಂದು ವರ್ಗವು ಮಕ್ಕಳಿಗೆ ಮೊಟ್ಟೆಯನ್ನು ನೀಡಬೇಕು ಎಂದು ವಾದ ಮಾಡಿದರೆ, ಇನ್ನೊಂದು ವರ್ಗವು ಶಾಲೆಗಳಲ್ಲಿ ಮೊಟ್ಟೆಯನ್ನು ನೀಡಬಾರದು ಎನ್ನುವ ವಾದವನ್ನು ಮಾಡುತ್ತಿದೆ. ಶಾಲೆಗಳಲ್ಲಿ ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆಯನ್ನು, ಅದನ್ನು ತಿನ್ನದೇ ಇರುವವರಿಗೆ ಬಾಳೆಹಣ್ಣನ್ನು ನೀಡಲಾಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಈ ವಿಷಯದ ಬಗ್ಗೆ ಸಾಕಷ್ಡು ಚರ್ಚೆಗಳು ಆರಂಭವಾಗಿದ್ದು, ದೊಡ್ಡ ಮಟ್ಟದ ವಿ ವಾ ದಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳಲ್ಲಿ ಈ ವಿಷಯ ಬಹುದೊಡ್ಡ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿಯೇ, ತಂದೆ ಒಬ್ಬರು ಇದೇ ವಿಚಾರಕ್ಕಾಗಿ ಸರ್ಕಾರಿ ಶಾಲೆಯಿಂದ ತಮ್ಮ ಮಗನ ಟಿಸಿಯನ್ನು ಪಡೆದುಕೊಂಡು, ಮಗನನ್ನು ಖಾಸಗಿ ಶಾಲೆಗೆ ದಾಖಲು ಮಾಡಿದ್ದಾರೆ. ಕೊಪ್ಪಳದ ವೀರಣ್ಣ ಕೊರ್ಲಹಳ್ಳಿ ಇಂತಹದೊಂದು ನಿರ್ಧಾರವನ್ನು ಮಾಡಿದ ವ್ಯಕ್ತಿಯಾಗಿದ್ದಾರೆ. ಇವರು ಅಖಿಲ ಭಾರತ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷರು ಆಗಿದ್ದಾರೆ.

ಇವರ ಮಗ ಶರಣಬಸವ ಕಿರಣ ರೈಲ್ವೆ ನಿಲ್ದಾಣದ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದನು. ಆದರೆ ಅದು ಸರ್ಕಾರಿ ಶಾಲೆಯಾದ್ದರಿಂದ ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತಾರೆ. ಆದರೆ ಅದೇ ಕಾರಣಕ್ಕೆ ಸರ್ಕಾರಿ ಶಾಲೆಯಿಂದ ವೀರಣ್ಣ ಅವರು ತಮ್ಮ ಮಗನ ವರ್ಗಾವಣೆ ಪತ್ರವನ್ನು ಪಡೆದು ಖಾಸಗಿ ಶಾಲೆಗೆ ದಾಖಲು ಮಾಡಿದ್ದಾರೆ. ಅವರು ಈ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿರುವ ಅವರು ಸರ್ಕಾರಿ ಶಾಲೆಯಲ್ಲಿ ಮೊಟ್ಟೆಯನ್ನು ನೀಡುತ್ತಾರೆ, ಅದಕ್ಕೆ ನನ್ನ ಧರ್ಮದಲ್ಲಿ ವಿರೋಧವಿದೆ. ನನ್ನ ಮಗ ಒಂದೆರಡು ದಿನ ಮೊಟ್ಟೆಯನ್ನು ತಿನ್ನದೇ ಇರಬಹುದು. ಆದರೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನು ಕೂಡಾ ಮೊಟ್ಟೆಯನ್ನು ತಿನ್ನಬಹುದು ಎನ್ನುವ ಕಾರಣವನ್ನು ನೀಡುತ್ತಾ, ಇದೇ ಕಾರಣದಿಂದ ತಾನು ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment