ಸರ್ಕಸ್ ನಲ್ಲಿ ಟ್ರೈನರ್ ಮೇಲೆ ತಿರುಗಿ ಬಿದ್ದ ಕರಡಿ: ಹೌಹಾರಿದ ಜನ, ಭ ಯಾ ನಕ ಸನ್ನಿವೇಶ ವೈರಲ್

Entertainment Featured-Articles News Viral Video

ನೀವು ಕೂಡಾ ಮನರಂಜನೆಯನ್ನು ಪಡೆಯುವ ಸಲುವಾಗಿ ಸರ್ಕಸ್ ಗೆ ಭೇಟಿ ನೀಡಿರಬಹುದು. ಸರ್ಕಸ್ ನಲ್ಲಿ ತರಬೇತಿ ಪಡೆದಂತಹ ಕುಶಲ ಕಲಾವಿದರು ಮಾಡುವ ಸ್ಟಂಟ್ ಗಳನ್ನು ನೋಡಿದಾಗ ಅಚ್ಚರಿ ಮಾತ್ರವಲ್ಲದೆ, ಕೆಲವೊಮ್ಮೆ ಅವರ ಸಾಹಸಗಳು ಭ ಯ ಕೂಡಾ ಹುಟ್ಟಿಸುತ್ತದೆ. ಇದೇ ವೇಳೆ ಸರ್ಕಸ್ಸುಗಳಲ್ಲಿ ಪ್ರಮುಖ ಆಕರ್ಷಣೆ ಎನ್ನುವಂತೆ, ತರಬೇತುದಾರರು ಸಿಂಹ, ಹುಲಿ, ಕರಡಿ , ಆನೆಗಳಂತಹ ಪ್ರಾಣಿಗಳನ್ನು ಪಳಗಿಸಿ ತಮ್ಮ ಕೈ ಸನ್ನೆಯ ಮೂಲಕ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು, ಅವುಗಳಿಂದಲೂ ಕಸರತ್ತುಗಳನ್ನು ಮಾಡಿಸುತ್ತಾರೆ. ಪ್ರಾಣಿಗಳು ತಮ್ಮ ತರಬೇತುದಾರರು ಹೇಳಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದನ್ನು ನೋಡಿದಾಗಲೂ ಆಶ್ಚರ್ಯ ಉಂಟಾಗುತ್ತದೆ.

ಕೆಲವು ದೇಶಗಳಲ್ಲಿ ಈಗಾಗಲೇ ಸರ್ಕಸ್ ಗಳಲ್ಲಿ ವನ್ಯ ಪ್ರಾಣಿಗಳನ್ನು ಅಥವಾ ಇನ್ನಾವುದೇ ಸಾಕು ಪ್ರಾಣಿಗಳನ್ನು ಬಳಸಿ, ಹಿಂ ಸೆ ನೀಡಬಾರದು ಎಂದು ಪ್ರಾಣಿಗಳ ಬಳೆಕೆಗೆ ನಿಷೇಧವನ್ನು ಹೇರಲಾಗಿದೆ. ಆದರೆ ಕೆಲವು ದೇಶಗಳಲ್ಲಿ ಕೆಲವು ನಿಯಮಗಳ ಅನುಸಾರವಾಗಿ ಇದಕ್ಕೆ ಅನುಮತಿಯನ್ನು ನೀಡಲಾಗಿದೆ. ಇನ್ನ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಸರ್ಕಸ್ ನ ಒಂದು ಸಣ್ಣ ದೃಶ್ಯವನ್ನು ಒಳಗೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಬೆ ಚ್ಚಿ ಬಿದ್ದಿದ್ದಾರೆ.

ಸಿಬಿಎಸ್ ನ್ಯೂಸ್‌ ನ ವರದಿಯ ಪ್ರಕಾರ ಈ ಘಟನೆ ರಷ್ಯಾದ ಸರ್ಕಸ್ ಒಂದರಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಸರ್ಕಸ್ ನಡೆಯುವ ವೇಳೆಯಲ್ಲಿ ಜನರ ಮನರಂಜನೆಗಾಗಿ ಪ್ರದರ್ಶನ ನೀಡುತ್ತಿದ್ದ ಕರಡಿಯೊಂದು ಇದ್ದಕ್ಕಿದ್ದಂತೆ ತನ್ನ ತರಬೇತಿದಾರನ ಮೇಲೆ ದಾ ಳಿ ಮಾಡಿದೆ. ಅದು ತರಬೇತಿದಾರರು ಬಾಯಿಯ ಮೇಲೆ ದಾಳಿ ಇಟ್ಟು, ಆತನನ್ನು ಕಚ್ಚಿದೆ, ಅನಂತರ ಅದು ಆತನನ್ನು ಕೆಳಗೆ ಬೀಳಿಸಿ ಅವನ ಮೇಲೆ ಕುಳಿತುಕೊಳ್ಳುತ್ತದೆ. ಆಗ ಮತ್ತೊಬ್ಬ ತರಬೇತುದಾರ ಕಾಲಿನಿಂದ ಕರಡಿಯನ್ನು ಒದ್ದು, ದೂರ ಓಡಿಸಲು ಪ್ರಯತ್ನ ಮಾಡುತ್ತಾನೆ.

ಲಸರ್ಕಸ್ ನೋಡಲು ಬಂದಿದ್ದ ಜನರು ಭ ಯದಿಂದ ಅಲ್ಲಿಂದ ಓಡಲು ಪ್ರಾರಂಭಿಸುತ್ತಾರೆ. ಕರಡಿಯ ಉ ಗ್ರ ರೂಪವನ್ನು, ಅದರ ಸಿಟ್ಟನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು ವರದಿಗಳ ಪ್ರಕಾರ ಕರಡಿಯ ಆಟವನ್ನು ತೋರಿಸುವಾಗ ಕರಡಿಗೆ ವಿದ್ಯುತ್ ಶಾ ಕ್ ತಗುಲಿದೆ ಎಂದು ಹೇಳಲಾಗಿದ್ದು, ಶಾ ಕ್ ತಗುಲಿದ ಪರಿಣಾಮದಿಂದ ಅದು ಉ ದ್ರಿವಕ್ತಗೊಂಡು ತನ್ನ ತರಬೇತಿದಾರನ ಮೇಲೆ ತೀವ್ರವಾದ ಹ ಲ್ಲೆ ಯನ್ನು ಮಾಡಿದೆ ಎಂದು ಹೇಳಲಾಗಿದೆ..

naturebeauty8957 ಎನ್ನುವ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಖಾತೆಯಲ್ಲಿ ವೀಡಿಯೋ ಕೂಡಾ ಲಭ್ಯವಿದೆ. ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ವೈವಿಧ್ಯಮಯ ಕಾಮೆಂಟ್ ಗಳನ್ನು ನೀಡಿದ್ದಾರೆ. ಕೆಲವರು ಈ ವಿಡಿಯೋ ಬಹಳ ಹಳೆಯದು, ಇದು ಮತ್ತೊಮ್ಮೆ ವೈರಲ್ ಆಗುತ್ತಿದೆ ಎಂದು ಹೇಳಿದ್ದಾರೆ. ಏನೇ ಆದರೂ ಕರಡಿಯ ಕೋವಪವನ್ನು ಕಂಡಾಗ ಎಲ್ಲರಲ್ಲೂ ಕೂಡ ಭ ಯ ಉಂಟಾಗುತ್ತದೆ.

Leave a Reply

Your email address will not be published.