ಸರೋವರದಲ್ಲಿ ಮೋಜು ಮಾಡುತ್ತಿದ್ದ ಜನ: ಆಗಲೇ ನಡೀತು ಭೀ ಕ ರ ಅವಘಡ, ಎದೆ ನಡುಗಿಸುವ ದೃಶ್ಯ ವೈರಲ್

Written by Soma Shekar

Published on:

---Join Our Channel---

ಅಪಾಯ ಎನ್ನುವುದು ಯಾವಾಗ? ಹೇಗೆ ? ಎಲ್ಲಿಂದ ಬರುತ್ತದೆ? ಎಂದು ಯಾರಿಂದಲೂ ಊಹಿಸುವುದು ಸಾಧ್ಯವಿಲ್ಲ. ನಿಶ್ಯಬ್ದ, ರಮಣೀಯತೆಯಿಂದ ಜನರನ್ನು ತನ್ನತ್ತ ಸೆಳೆಯುವ ಪ್ರಕೃತಿಯ ಸುಂದರವಾದ ತಾಣಗಳಲ್ಲೂ ಕೂಡಾ ಅನಿರೀಕ್ಷಿತವಾಗಿ ಅ ವ ಘ ಡ ಗಳು ನಡೆಯಬಹುದು ಹಾಗೂ ಅದು ಪ್ರಾಣಕ್ಕೆ ಕಂ ಟ ಕ ವನ್ನು ಸಹಾ ತರಬಹುದು ಎಂದರೆ ತಪ್ಪಾಗಲಾರದು. ‌ಏಕೆಂದರೆ ಇಂತಹ ಭೀ ಕ ರ ಎನಿಸುವ ಘಟನೆಗಳು ಈಗಾಗಲೇ ಸಾಕಷ್ಟು ಬಾರಿ ನಡೆದಿದೆ. ಪ್ರಸ್ತುತ ಅಂತಹುದೇ ಮತ್ತೊಂದು ಘಟನೆಯು ನಡೆದಿದ್ದು, ವೀಡಿಯೋ ವೈರಲ್ ಆಗಿದೆ.

ಬ್ರೆಜಿಲ್ ನಲ್ಲಿ ಇಂತಹುದೊಂದು ಎದೆ ನಡುಗಿಸುವ ಘಟನೆಯು ನಡೆದಿದೆ. ಬ್ರೆಜಿಲ್ ನ ಒಂದು ಸರೋವರದಲ್ಲಿ ಮೋಟಾರ್ ಬೋಟ್ ನಲ್ಲಿ ಕುಳಿತು ಜನರು ಸರೋವರದಲ್ಲಿನ ಸವಾರಿಯನ್ನು ಆನಂದಿಸುತ್ತಾ, ಸುರಿಯುತ್ತಿರುವ ಜಲಪಾತದ ಅಂದವನ್ನು ಅನುಭವಿಸುತ್ತಾ ಸಂತೋಷದಿಂದ ಕಾಲವನ್ನು ಕಳೆಯುವ ಸಂದರ್ಭದಲ್ಲೇ ದೊಡ್ಡದೊಂದು ಅ ವ ಘ ಡ ನಡೆದುಹೋಗಿದೆ. ಈ ಭೀ ಕ ರ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮೋಟಾರ್ ಬೋಟ್ ನಲ್ಲಿ ಪ್ರವಾಸಿಗರು ಸರೋವರದ ಅಂದವನ್ನು ಸವಿಯುವಾಗಲೇ ಬೃಹದಾಕಾರದ ಬಂಡೆಗಳು ಸರೋವರದ ನೀರಿನೊಳಗೆ ಬಿದ್ದು ದೊಡ್ಡ ಅ ಪಾ ಯ ವನ್ನು ತಂದೊಡ್ಡಿದೆ. ಈ ಘಟನೆಯಲ್ಲಿ 7 ಜನರು ಮೃ ತ ರಾಗಿದ್ದು, 32 ಜನರಿಗೆ ಗಾಯಗಳಾಗಿದೆ ಎನ್ನಲಾಗಿದೆ. ಈ ಘಟನೆ ಬೆಳಿಗಿನ ಹನ್ನೊಂದು ಗಂಟೆಯ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ. ವೀಡಿಯೋದಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಈ ಅನಿರೀಕ್ಷಿತ ಅ ವ ಘ ಡ ಅಲ್ಲಿದ್ದವರಿಗೆ ಆತಂಕವನ್ನು ಉಂಟು ಮಾಡಿದೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ ಆ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಿಂದ ಸುರಿದ ಮಳೆಯಿಂದಾಗಿ ಬಂಡೆಗಳು, ಕಲ್ಲುಗಳು ಉರುಳುತ್ತಿವೆ ಎನ್ನಲಾಗಿದೆ. ಈ ವಿಚಾರವಾಗಿ ಲೆಫ್ಟಿನೆಂಟ್ ಪೆದ್ರೋ ಅವರು ವಿವರವನ್ನು ನೀಡುತ್ತಾ, 32 ಜನರನ್ನು ಉಳಿಸಲಾಗಿದೆ. 9 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಹಾಗೂ ಇನ್ನೂ 20 ಜನರು ನಾಪತ್ತೆಯಾಗಿದ್ದಾರೆ ಎಂದಿದ್ದು, ಹೆಲಿಕಾಪ್ಟರ್ ನ ಸಹಾಯದಿಂದ ನಾಪತ್ತೆಯಾದವರ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

Leave a Comment