ಸರಿಗಮಪ ಹೊಸ ಸೀಸನ್ ನ ಅದ್ದೂರಿ ಪ್ರೋಮೋಗೆ ಫಿದಾ ಆದ ವೀಕ್ಷಕರು:36 ಗಾಯಕರ ನಡುವೆ ಮಹಾ ಸಂಗೀತ ಸಂಗ್ರಾಮ

0
199

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಸರಿಗಮಪ ತನ್ನದೇ ಆದಂತಹ ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದಿದೆ. ಬಹಳಷ್ಟು ಜನ ಪ್ರತಿಭಾವಂತ ಗಾಯಕರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರ ಭವಿಷ್ಯವನ್ನು ರೂಪಿಸಿದ ಹೆಗ್ಗಳಿಕೆ ಸರಿಗಮಪ ಶೋ ಗೆ ಸಂದಿದೆ. ಇದೀಗ ಸರಿಗಮಪ ಹೊಸ ಸೀಸನ್ ಇದೇ ಸೆಪ್ಟೆಂಬರ್ 18 ರಿಂದ ಆರಂಭವಾಗಲಿದ್ದು, ಈ ಕುರಿತಾದ ಮಾಹಿತಿಯನ್ನು ಜೀ ಕನ್ನಡ ವಾಹಿನಿಯು ಒಂದು ಬಹಳ ಅದ್ದೂರಿಯಾದ ಪ್ರೋಮೋದ ಮೂಲಕ ಹಂಚಿಕೊಂಡು ಎಲ್ಲರ ಗಮನ ಸೆಳೆದಿದೆ.

ಈ ಬಾರಿ ಸರಿಗಮಪ ಬಹಳ ವಿಶೇಷವಾಗಿದೆ, ಏಕೆಂದರೆ ಈ ಬಾರಿ ಒಟ್ಟು 36 ಜನ ಸ್ಪರ್ಧಿಗಳ ನಡುವೆ ಸ್ಪರ್ಧೆ ಏರ್ಪಡಲಿದೆ. ಅಲ್ಲದೇ ಈ ಹೊಸ ಸೀಸನ್ ಸರಿಗಮಪ ಚಾಂಪಿಯನ್ ಶಿಪ್ ಆಗಿದೆ. ಹಿಂದಿನ ಸೀಸನ್ ಗಳಲ್ಲಿ ಭಾಗವಹಿಸಿದ್ದ ಪ್ರತಿಭಾವಂತ ಗಾಯಕರು ಮತ್ತೊಮ್ಮೆ ವೇದಿಕೆಗೆ ಆಗಮಿಸುತ್ತಿದ್ದಾರೆ. ಅವರ ನಡುವೆ ಸ್ಪರ್ಧೆ ನಡೆಯಲಿದೆ. ಒಟ್ಟು 36 ಜನ ಸ್ಪರ್ಧಿಗಳು ಇರುವ ಕಾರಣ ಈ ಬಾರಿ ಸರಿಗಮಪ ಹೆಚ್ಚು ದಿನಗಳ ಕಾಲ ಪ್ರಸಾರವಾಗಲಿದೆ ಎನ್ನುವ ಸುಳಿವನ್ನು ನೀಡಿದೆ.

ಇನ್ನು ಶೋ ನಲ್ಲಿ ಈ ಹಿಂದಿನ ಹಾಗೆ ಮಹಾ ಗುರುಗಳಾಗಿ ನಾದಬ್ರಹ್ಮ ಹಂಸಲೇಖ ಅವರು ಪಾಲ್ಗೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ ವಿಜಯಪ್ರಕಾಶ್ ಅವರು ಶೋನಲ್ಲಿ ಜಡ್ಜ್ ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಸ್ಟಾರ್ ನಿರೂಪಕಿ ಅನುಶ್ರೀ ಅವರು ಮಾಡಲಿದ್ದಾರೆ. ವಾಹಿನಿಯು ಹಂಚಿಕೊಂಡಿರುವ ಬಹಳ ಅದ್ಭುತವಾಗಿ ಮೂಡಿ ಬಂದಿದೆ.

ಸಂಗೀತಪ್ರಿಯರಿಗೆ ಸರಿಗಮಪ ಹೊಸ ಸೀಸನ್ ಪ್ರಾರಂಭದ ವಿಷಯವು ಬಹಳ ಖುಷಿಯನ್ನು ನೀಡುತ್ತಿದೆ. ವಾಹಿನಿ ಪ್ರೋಮೋ ದಲ್ಲಿ ‘ಸ್ವರ ಸಂಸ್ಥಾನದಲ್ಲಿ 36 ಚಾಂಪಿಯನ್ ಗಾಯಕರ ಸಂಗೀತ ಸಮರ. ಶಾರದಾಂಬೆಯ ಅನುಗ್ರಹ , ಮಹಾಗುರು ಹಂಸಲೇಖ ಅವರ ಸಾರಥ್ಯ. ಅರ್ಜುನ್ ಜನ್ಯ ,ವಿಜಯ್ ಪ್ರಕಾಶ್ ತೀರ್ಪುಗಾರಿಕೆಯೊಂದಿಗೆ  6 ಶ್ರೇಷ್ಠ ಸಂಗೀತಗಾರರ ಮಾರ್ಗದರ್ಶನದಲ್ಲಿ ಶುರುವಾಗಲಿದೆ ಸರಿಗಮಪ ಚಾಂಪಿಯನ್ ಶಿಪ್’ ಎಂದು ಹೇಳಿದೆ.

ಈ ಪ್ರೋಮೋ ಬಹಳ ಅದ್ದೂರಿಯಾಗಿದೆ. ಈ ಪ್ರೋಮೋ ಸಾಕಷ್ಟು ಜನರ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದೆ.ಈ ಪ್ರೋಮೋದಲ್ಲಿ 36 ಸ್ಪರ್ಧಿಗಳೂ ಕಾಣಿಸಿಕೊಂಡಿದ್ದಾರೆ. ಅಂತಿಮವಾಗಿ ಒಬ್ಬರಿಗೆ ಸರಿಗಮಪ ಚಾಂಪಿಯನ್​ಶಿಪ್​ ಒಲಿಯಲಿದ್ದು ಅದು ಯಾರಿಗೆ? ಎನ್ನುವುದು ಕುತೂಹಲವಾಗಿದೆ‌. ಸಂಗೀತ ಪ್ರಿಯರಿಗೆ ಶನಿವಾರ ಮತ್ತು ಭಾನುವಾರ ಸಂಗೀತ ರಸದೌತಣವನ್ನು ನೀಡಲಿದೆ ಸರಿಗಮಪ ಚಾಂಪಿಯನ್ ಶಿಪ್.

LEAVE A REPLY

Please enter your comment!
Please enter your name here