ಸರಿಗಮಪ ಶೋ ನಿಂದ ಹಂಸಲೇಖ ಹೊರಗೆ: ಈ ಸುದ್ದಿಗೆ ಸಿಕ್ಕಿತು ಸ್ಪಷ್ಟನೆ, ವಾಹಿನಿಯ ಮುಖ್ಯಸ್ಥರು ಹೇಳಿದ್ದೇನು??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಗಳಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮ ಸರಿಗಮಪ ಹಾಡುಗಳ ರಿಯಾಲಿಟಿ ಶೋ. ಈ ಬಾರಿ ಸರಿಗಮಪ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಕಾರ್ಯಕ್ರಮ ಈಗಾಗಲೇ ಭರ್ಜರಿ ಯಶಸ್ಸಿನೊಂದಿಗೆ ಜನಪ್ರಿಯತೆಯ ನಾಗಲೋಟವನ್ನು ಮಾಡುತ್ತಿದ್ದು, ವಾರದಿಂದ ವಾರಕ್ಕೆ ಅದ್ಭುತ ಗಾಯನ ಪ್ರತಿಭೆಗಳ, ಅತ್ಯದ್ಭುತ ಕಂಠಸಿರಿಯಿಂದ ಕನ್ನಡದ ಅದೆಷ್ಟೋ ಸುಮಧುರ ಹಾಗೂ ಎವರ್ ಗ್ರೀನ್ ಹಾಡುಗಳನ್ನು ಹಾಡಿ ಜನರ ಕಿವಿಗೆ ತಂಪನ್ನು ನೀಡಿ, ಜನರ ಮನಸ್ಸನ್ನು ರಂಜಿಸುತ್ತಿದ್ದಾರೆ.

ಸರಿಗಮಪ ಶೋ ನ ಪ್ರಮುಖ ಆಕರ್ಷಣೆ ಸುಮಧುರ ಗಾಯನದ ಪ್ರತಿಭಾವಂತರಾದರೆ, ಅದರ ಜೊತೆಗೆ ಶೋ ನ ಮೆಂಟರ್ ಗಳು ಹಾಗೂ ಗಾಯನ ಪ್ರತಿಭೆಗಳ ಸಾಮರ್ಥ್ಯ ಓರೆ ಹಚ್ಚಿ, ಅದರ ಸರಿ ತಪ್ಪುಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವ ಜಡ್ಜ್ ಗಳು ಹಾಗೂ ಮಹಾಗುರುಗಳ ಸ್ಥಾನ ಪಡೆದಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ಪಾತ್ರವೂ ಅಪಾರವಾಗಿದೆ. ಗಾಯನ ಪ್ರತಿಭಾವಂತರನ್ನು ಇನ್ನಷ್ಟು ಪ್ರಬುದ್ಧರನ್ನಾಗಿ ಮಾಡುವಲ್ಲಿ ಜಡ್ಜ್ ಗಳು ಹಾಗೂ ಮಹಾಗುರುಗಳ ಪಾತ್ರವನ್ನು ನಾವು ಕಡೆಗಣಿಸುವ ಹಾಗಿಲ್ಲ.

ಇನ್ನು ಮಹಾಗುರುಗಳಾದ ಹಂಸಲೇಖ ಅವರು ಇದೀಗ ಕಾರ್ಯಕ್ರಮದಿಂದ ಸ್ವಲ್ಪ ಬಿಡುವು ಪಡೆಯಲು ನಿರ್ಧರಿಸಿದ್ದು, ಅವರು ಶೋ ದಿಂದ ಹೊರಗೆ ಉಳಿಯಲಿದ್ದು, ಈ ವಿಚಾರವಾಗಿ ವಾಹಿನಿಯ ಮುಖ್ಯಸ್ಥ ರಾಗಿರುವ ರಾಘವೇಂದ್ರ ಹುಣಸೂರು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡುವ ಮೂಲಕ ಹಂಸಲೇಖ ಅವರು ಸರಿಗಮಪ ದಿಂದ ಬ್ರೇಕ್ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ರಾಘವೇಂದ್ರ ಹುಣಸೂರು ಅವರು ತಮ್ಮ ಪೋಸ್ಟ್ ನಲ್ಲಿ, “ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ.” ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದು, ಅನೇಕರು ಇದಕ್ಕೆ ಪ್ರತಿಕ್ರಿಯೆಗಳನ್ನು ಕಾಮೆಂಟ್ ಗಳ ಮೂಲಕ ನೀಡುತ್ತಿದ್ದಾರೆ.

Leave a Comment