ಕನ್ನಡ ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋ ಗಳಿಗೆ ಅವುಗಳದ್ದೇ ಆದ ವಿಶೇಷ ಸ್ಥಾನ ಮಾನಗಳು ಇವೆ. ಅದರಲ್ಲೂ ಹಾಡುಗಳ ಅಂದರೆ ಸಿಂಗಿಂಗ್ ರಿಯಾಲಿಟಿ ಶೋ ಗಳು ಎಂದಾಗ ಸಂಗೀತ ಪ್ರಿಯರಿಗೆ ಹಾಗೂ ಹಾಡುಗಳನ್ನು ಕೇಳಲು ಇಷ್ಟಪಡುವ ಎಲ್ಲರಿಗೂ ಸಹಾ ಒಂದು ವ್ಯಾಮೋಹ ಅಥವಾ ಒಂದು ಆಕರ್ಷಣೆ ಎನ್ನುವಂತೆ ಬಹಳ ಇಷ್ಟಪಟ್ಟು ಜನರು ಈ ಕಾರ್ಯಕ್ರಮಗಳನ್ನು ನೋಡುತ್ತಾರೆ. ಆದ್ದರಿಂದಲೇ ಈ ಸಿಂಗಿಂಗ್ ರಿಯಾಲಿಟಿ ಶೋ ಗಳು ತಮ್ಮದೇ ಆದ ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆದುಕೊಂಡು ಮುಂದೆ ಸಾಗಿವೆ. ಇಂತಹ ಯಶಸ್ವಿ ಸಿಂಗಿಂಗ್ ರಿಯಾಲಿಟಿ ಶೋ ಗಳಲ್ಲಿ ಸರಿಗಮಪ ಅಗ್ರಮಾನ್ಯ ಎನಿಸಿದೆ.
ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಸರಿಗಮಪ ಸಂಗೀತ ಪ್ರಿಯರು ಮತ್ತು ಕಿರುತೆರೆಯ ಪ್ರೇಕ್ಷಕರ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿದ್ದು, ಅಪರೂಪವಾದ ಹಾಡುಗಳನ್ನು ಅದ್ಭುತವಾಗಿ ಈ ವೇದಿಕೆಯ ಮೇಲೆ ಹಾಡುವ ಮೂಲಕ ಗಾನ ಸುಧೆಯ ಇಂಪನ್ನು ಕೇಳುಗನ ಮನಸ್ಸಿಗೆ ತಲಪುವಂತೆ ಹಾಡುವ ಅದೆಷ್ಟೋ ಗಾನ ಕೋಗಿಲೆಗಳು ತಮ್ಮ ಕಂಠಸಿರಿಯಿಂದ ಈ ಬಾರಿಯ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಸಂಗೀತದ ಅಬ್ಬರವನ್ನು ಎಬ್ಬಿಸುತ್ತಾ, ಹಾಡುಗಳ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ.
ಇನ್ನು ಈ ವಾರದ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಗೆ ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರ ಸಿನಿಮಾಗಳ ಅದ್ಭುತ ಹಾಡುಗಳನ್ನು ಹಾಡುವ ಮೂಲಕ ಗಾಯಕರು ರಂಜಿಸಿದ್ದು, ಅದರ ಪ್ರೋಮೋ ಗಳು ಸಖತ್ ಸದ್ದು ಮಾಡಿವೆ. ವಾಹಿನಿ ಶೇರ್ ಮಾಡಿರುವ ಈ ಪ್ರೋಮೋ ಗಳಲ್ಲಿ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿರುವುದರ ಜೊತೆಗೆ ಮೆಚ್ಚುಗೆಗಳು ಸಹಾ ಹರಿದು ಬರುತ್ತಿದೆ.
ಸರಿಗಮಪ ಮೂಲಕ ನಾಡಿಗೆ ಪರಿಚಿತವಾಗಿರುವ ಬಾಲ ಗಾನ ಪ್ರತಿಭೆ ಜ್ಞಾನೇಶ್ ಈಗಾಗಲೇ ತನ್ನ ಮಧುರ ಕಂಠಕ್ಕೆ ಹೆಸರುವಾಸಿ. ಈ ಹುಡುಗ ಶಿವರಾಜ್ ಕುಮಾರ್ ಅವರ ಮುಂದೆ ಓಂ ಸಿನಿಮಾದ ಬ್ರಹ್ಮಾನಂದ ಓಂ ಕಾರ ಎನ್ನುವ ಅದ್ಭುತವಾದ ಹಾಡನ್ನು ಹಾಡಿದ್ದು, ಈ ಹಾಡನ್ನು ಕೇಳಿ ಗಾನ ಸುಧೆಯಲ್ಲಿ ಕಳೆದು ಹೋದ ಮಹಾಗುರುಗಳಾದ ಹಂಸಲೇಖ ಅವರು ಮಾತ್ರವೇ ಅಲ್ಲದೇ ವೇದಿಕೆಯ ಮೇಲೆ ಇದ್ದವರು ಹಾಗೂ ಜ್ಯೂರಿ ಎಲ್ಲರೂ ಸಹಾ ಭಾವುಕರಾಗಿ ಕಣ್ಣೀರು ಹಾಕಿದ ಅಪರೂಪದ ಸನ್ನಿವೇಶಕ್ಕೆ ಸರಿಗಮಪ ಸಾಕ್ಷಿಯಾಗಿದೆ.
ಇನ್ನು ಜ್ಞಾನೇಶ ಹಾಡಿದ ಇಂಪಾದ ಅತ್ಯದ್ಭುತ ಹಾಡನ್ನು ಕೇಳಿ ಮೈಮರೆತು ಕೇಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಾದರೆ ತಮ್ಮ ತಂದೆಯವರು, ವರನಟ, ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರೇ ಹಾಡಿದಂತಹ ಅನುಭೂತಿ ನನಗಾಯಿತು ಎಂದಿದ್ದು ಮಾತ್ರವೇ ಅಲ್ಲದೇ ಮರಿ ಅಪ್ಪಾಜಿಯವರನ್ನು ನೋಡಿದ ಹಾಗಾಯ್ತು ಎಂದು ವೇದಿಕೆ ಮೇಲೆ ಹೋಗಿ ಜ್ಞಾನೇಶನನ್ನು ಅಪ್ಪಿಕೊಂಡಿದ್ದಾರೆ ಶಿವರಾಜ್ ಕುಮಾರ್. ಪ್ರೋಮೋ ಜನರ ಮೆಚ್ಚುಗೆ ಗಳಿಸಿದ್ದು ಎಪಿಸೋಡ್ ನೋಡಲು ಕಾತರರಾಗಿದ್ದಾರೆ.