ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಅನನ್ಯ ಪಾಂಡೆ, ಸಿದ್ಧಾಂತ್ ಚತುರ್ವೇದಿ ಮತ್ತು ಧೈರ್ಯ ಕರ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಶಕುನ್ ಬಾತ್ರಾ ನಿರ್ದೇಶನದ ಬಾಲಿವುಡ್ ಸಿನಿಮಾ ಗೆಹರಾಯಿಯಾ ಕೆಲವೇ ದಿನಗಳ ಹಿಂದಷ್ಟೇ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಹೊಂದಿದೆ. ಇದೇ ಫೆಬ್ರವರಿ 11ರಂದು ಬಿಡುಗಡೆಯಾದ ಈ ಸಿನಿಮಾದ ಕುರಿತಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ಗಮನಿಸಬೇಕಾದ ವಿಷಯ ಏನೆಂದರೆ ಈ ಸಿನಿಮಾದ ಬಗ್ಗೆ ಹೆಚ್ಚು ನೆಗೆಟಿವ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಿನಿಮಾದ ಕೆಲವು ದೃಶ್ಯಗಳ ಕುರಿತಾಗಿ ಟ್ರೋಲ್ ಮಾಡಲಾಗಿದೆ.
ಗೆಹರಾಯಿಯಾ ಸಿನಿಮಾದ ಕುರಿತಾಗಿ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಎನಿಸಿರುವ, ನೇರ ಮಾತುಗಳಿಂದಲೇ ಹೆಸರಾಗಿರುವ ನಟಿ ಕಂಗನಾ ರಣಾವತ್ ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ಸಿನಿಮಾದ ಕುರಿತಾಗಿ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದರು. ಅಲ್ಲದೇ ಸಿನಿಮಾದಲ್ಲಿ ಅ ಶ್ಲೀ ಲ ತೆ ಹಾಗೂ ಚರ್ಮ ಪ್ರದರ್ಶನವನ್ನು ಮಾಡಿದರೆ ಸಿನಿಮಾ ಗೆಲ್ಲುವುದಿಲ್ಲ ಎನ್ನುವ ಮಾತನ್ನು ಹೇಳುವ ಜೊತೆಗೆ, ಆಧುನಿಕ ಕಾಲದ ಸಿನಿಮಾ, ನಗರದ ಸಿನಿಮಾ ಎಂದು ಹೇಳುತ್ತಾ ಕಸವನ್ನು ಮಾರಾಟ ಮಾಡಬೇಡಿ ಎಂದು ಕ ಟು ವಾಗಿ ಟೀ ಕಿ ಸಿದ್ದರು.
ಇದೀಗ ಇದೇ ಸಿನಿಮಾದ ಕುರಿತಾಗಿ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭಾಸ್ಕರ್ ರಾವ್ ಅವರು ಈ ಸಿನಿಮಾದ ಕುರಿತಾಗಿ ಟ್ವೀಟ್ ಒಂದನ್ನು ಮಾಡಿದ್ದು ಅದರಲ್ಲಿ, ನಾವು ಗೆಹರಾಯಿಯಾ ಸಿನಿಮಾ ನೋಡಲು ಪ್ರಾರಂಭಿಸಿದೆವು, ಆದರೆ ಇಪ್ಪತ್ತು ನಿಮಿಷಗಳ ನಂತರ ನಾನು ಸಿನಿಮಾ ನೋಡುವುದನ್ನು ನಿಲ್ಲಿಸಿಬಿಟ್ಟೆ ಎಂದು ಹೇಳಿದ್ದಾರೆ.
ಅಲ್ಲದೇ ಅವರು ಜೀವನದ ಮೌಲ್ಯಗಳನ್ನು ಚಿತ್ರ ಅವಮಾನಿಸಿದೆ ಎಂದು ನನಗೆ ಅನಿಸಿತು.
ನಾನು ದೀಪಿಕಾ ಪಡುಕೋಣೆ ಅವರ ಅಭಿಮಾನಿ ಅವರು ನಮ್ಮ ಬೆಂಗಳೂರಿನ ಹುಡುಗಿ, ಸಾಧಕಿ ಮತ್ತು ಧೈರ್ಯಶಾಲಿ ಹೆಣ್ಣು. ಲಕ್ಷಾಂತರ ಯುವತಿಯರು ದೀಪಿಕಾ ಪಡುಕೋಣೆ ಅವರನ್ನು ಆರಾಧಿಸಿ, ಅನುಸರಿಸುತ್ತಾರೆ. ಆದರೆ ಸಿನಿಮಾದಲ್ಲಿ ವಿವಾಹೇತರ ಸಂಬಂಧ ಹಾಗೂ ಮನೆಯನ್ನು ಹಾಳುಮಾಡುವ ಕಥಾ ಹಂದರ ಹೊಂದಿದೆ. ಇದು ಸರಿ ಎಂದು ಕೆಲವರಿಗೆ ಅನ್ನಿಸಬಹುದು, ಆದರೆ ಈ ಸಿನಿಮಾದಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಿದೆ. ನಾನೇನು ಹಳೆಯ ಕಾಲದವನಾ?? ಎಂದು ಅವರು ಬರೆದುಕೊಂಡಿದ್ದಾರೆ