“ಸಮಯವು ಬಹಳ ವೇಗವಾಗಿ ಹಾರುತ್ತಿದೆ” ಜನ್ಮದಿನದ ಖುಷಿಯಲ್ಲಿ ಗಟ್ಟಿಮೇಳ ಖ್ಯಾತಿಯ ವಿಕ್ಕಿ ಹೇಳಿದ ಮನಸ್ಸಿನ ಮಾತುಗಳು

Written by Soma Shekar

Published on:

---Join Our Channel---

ಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಚಿತ್ರರಂಗದಲ್ಲಿ ಕೂಡಾ ತೊಡಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ವಿಕ್ಕಿ ಪಾತ್ರಧಾರಿಯಾಗಿ ಅಪಾರವಾದ ಜನಾದರಣೆಯನ್ನು ಹಾಗೂ ಜನರ ಅಭಿಮಾನವನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್ ಅವರು ಇತ್ತೀಚಿಗಷ್ಟೇ ತಮ್ಮ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದ್ದ ಅಭಿಷೇಕ ದಾಸ್ ಅವರು ತಮ್ಮ ಆಪ್ತರನ್ನು ಜನ್ಮದಿನದ ಪಾರ್ಟಿಗೆ ಬರಮಾಡಿಕೊಂಡಿದ್ದರು.

ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮಕ್ಕೆ ಆಹ್ವಾನಿತರಾಗಿದ್ದವರಲ್ಲಿ ನಟ ರಕ್ಷ್, ಶರಣ್ಯಾ ಶೆಟ್ಟಿ, ರಂಜನ್ ಸನತ್, ರವಿಚಂದ್ರ ಟಾಮಿ ಹಾಗೂ ಇನ್ನೂ ಕೆಲವರು ಸೇರಿದ್ದಾರೆ. ತಮ್ಮ ಧಾರಾವಾಹಿಯ ಸಹನಟರು ಸೇರಿದಂತೆ ಅವರ ಆಪ್ತರು ಒಟ್ಟಿಗೆ ಸೇರಿ ಅಭಿಷೇಕ್ ದಾಸ್ ಅವರ ಜನ್ಮದಿನವನ್ನು ಬಹಳ ಖುಷಿಯಿಂದ ಸಂಭ್ರಮಿಸಿದ್ದಾರೆ. ತಮ್ಮ ಜನ್ಮದಿನದ ಸಂತೋಷವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಉದ್ದೇಶದಿಂದ ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮದ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಅವರು ಅದರ ಜೊತೆಗೆ ಕೆಲವು ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಲವೊಂದು ಭಾವನೆಗಳಿಗೆ ಅಕ್ಷರ ರೂಪವನ್ನು ನೀಡಿದ್ದಾರೆ, “26. ನನಗೆ ಸಮಯವು ತುಂಬಾ ವೇಗವಾಗಿ ಹಾರುತ್ತಿದೆ ಎನ್ನುವುದನ್ನು ಫೀಲ್ ಮಾಡಲಾಗುತ್ತಿಲ್ಲ. ನನ್ನ 20 ರ ದಶಕದ ಅಂತ್ಯವನ್ನು ಪ್ರವೇಶಿಸುತ್ತಿದ್ದೇನೆ.. ಇನ್ನೂ ವಯಸ್ಸಾಗುತ್ತಿರುವ ಬಗ್ಗೆ ಚಿಂತಿಸುತ್ತಿದ್ದೇನೆ..

ನೀವು ಅದನ್ನು ಚೆನ್ನಾಗಿ ಮಾಡಿದ್ದೀರಿ. ನೀವೆಲ್ಲರೂ ನೀಡಿದ ಆಶ್ಚರ್ಯಗಳಿಂದ ಆಗಿರುವ ಸಂತೋಷ ಎಷ್ಟೆಂದು ಹೇಳವುದು ಸಾಧ್ಯವಿಲ್ಲ. ನಾನು ನಿಮ್ಮ ಎಲ್ಲಾ ಡಿಎಂ ಗಳನ್ನು ಮತ್ತು ನನ್ನ ಎಲ್ಲಾ ಆತ್ಮೀಯರು ಮತ್ತು ಅಭಿಮಾನಿಗಳಿಂದ ಬರುವ ಉಲ್ಲೇಖಗಳನ್ನು ಓದಿದ್ದೇನೆ. ಇದು ನಾನು ಎಂದೆಂದಿಗೂ ಒಂದು ಸುಂದರವಾದ ದಿನ ಎಂದು ಹೇಳುತ್ತೇನೆ,” ಎಂದು ಬರೆದುಕೊಂಡು ತಮ್ಮ ಸಂಭ್ರಮವನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ.

Leave a Comment