ಸಮಂತಾ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿ: ಆದ್ರೆ ಅವರ ಮಾಜಿ ಪತಿ ನಾಗಚೈತನ್ಯ ಏನ್ಮಾಡಿದ್ದಾರೆ ನೋಡಿ

Written by Soma Shekar

Updated on:

---Join Our Channel---

ಟಾಲಿವುಡ್ ನಟ ನಾಗ ಚೈತನ್ಯ ಸಿನಿಮಾಗಳ ನಂತರ ಇದೀಗ ಓಟಿಟಿ ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆನ್ನುವ ವಿಷಯವೊಂದು ಟಾಲಿವುಡ್ ಅಂಗಳದಿಂದ ಹೊರ ಬಂದಿದೆ. ಹೌದು ನಾಗಚೈತನ್ಯ ಓಟಿಟಿಯ ವೆಬ್ ಸಿರೀಸ್ ಆಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರವೇಶವನ್ನು ಮಾಡುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ನಾಗಚೈತನ್ಯ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದು, ಇದು ಓಟಿಟಿಯಲ್ಲಿ ನಾಗಚೈತನ್ಯ ಅವರ ಮೊದಲ ಸಿನಿಮಾ ಆಗಿದೆ ಎನ್ನುವುದು ವಿಶೇಷ.

ಈ ವೆಬ್ ಸಿರೀಸ್ ನಲ್ಲಿ ನಟ ನಾಗಚೈತನ್ಯ ಅವರಿಗೆ ನಾಯಕಿಯಾಗಿ ತಮಿಳಿನ ನಟಿ ಪ್ರಿಯಾ ಭವಾನಿ ಶಂಕರ್ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ವೆಬ್ ಸಿರೀಸ್ ನಲ್ಲಿ ದಕ್ಷಿಣ ಸಿನಿ ರಂಗದ ಹಲವು ಪ್ರಖ್ಯಾತ ನಾಮ ಕಲಾವಿದರು ಸಹಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ನಾಗಚೈತನ್ಯ ಹಾಗೂ ಅವರ ತಂದೆ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಇಬ್ಬರೂ ಜೊತೆಯಾಗಿ ಬಂಗರ್ರಾಜು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಪ್ಪ, ಮಗ ಇಬ್ಬರೂ ಸಿನಿಮಾದ ಪ್ರಮುಖ ಆಕರ್ಷಣೆ ಆಗಿದ್ದಾರೆ.

ಈ ಹಿಂದೆ ನಟ ನಾಗಾರ್ಜುನ ಅವರು ನಟಿಸಿದ್ದ ಸೋಗ್ಗಾಡೇ ಚಿನ್ನಿ ನಾಯನ ಎನ್ನುವ ಸೂಪರ್ ಹಿಟ್ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಈ ಸಿನಿಮಾವನ್ನು ಕಲ್ಯಾಣ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಝೀ ಸ್ಟುಡಿಯೋಸ್ ನ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿದೆ. ಇನ್ನು ನಾಗಾರ್ಜುನ ಅವರಿಗೆ ಜೋಡಿಯಾಗಿ ಹಿರಿಯ ನಟಿ ರಮ್ಯಕೃಷ್ಣ ಹಾಗೂ ನಾಗಚೈತನ್ಯ ಗೆ ಜೋಡಿಯಾಗಿ ಉಪ್ಪೆನ ಖ್ಯಾತಿಯ ನಟಿ ಕೃತಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Comment