ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ವಿ ರು ದ್ಧ ಕೋರ್ಟ್ ಮೊರೆ ಹೋದ ಪುರುಷರು: ಅಂತದ್ದೇನಿದೆ ಈ ಹಾಡಲ್ಲಿ???

Written by Soma Shekar

Published on:

---Join Our Channel---

ಅಲ್ಲು ಅರ್ಜುನ್ ನಾಯಕನಟನಾಗಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಇದೇ ಡಿಸೆಂಬರ್ 17ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾದ ಪ್ರಮೋಶನ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಇನ್ನು ಈ ಸಿನಿಮಾದ ಒಂದು ಪ್ರಮುಖ ಆಕರ್ಷಣೆ ಎನ್ನುವಂತೆ, ಸಿನಿಮಾದ ವಿಶೇಷ ಹಾಡಿನಲ್ಲಿ ನಟಿ ಸಮಂತಾ ಭರ್ಜರಿ ಹೆಜ್ಜೆಗಳನ್ನು ಹಾಕಿದ್ದು, ಈ ಹಾಡಿನ ವಿಡಿಯೋ ತೊಡಕನ್ನು ಚಿತ್ರತಂಡವು ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿದೆ. ತಮಿಳಿನಲ್ಲಿ ಹೂಂ ಸೊಲ್ರಿಯಾ, ತೆಲುಗಿನಲ್ಲಿ ಊಂ ಅಂಟಾವಾ ಎನ್ನುವ ಸಾಹಿತ್ಯದೊಂದಿಗೆ ಇರುವ ಈ ಹಾಡು ಭರ್ಜರಿ ವೈರಲ್ ಆಗಿದೆ.

ಈ ಹಾಡಿನಲ್ಲಿ ನಟಿ ಸಮಂತಾ ಹಾಟ್ ಲುಕ್ ಮತ್ತು ಮಾದಕ ನೃತ್ಯ ಪಡ್ಡೆಗಳ ಎದೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಹಾಡಿನ ತುಣುಕುಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಐಟಂ ಹಾಡು ಎಲ್ಲರ ಗಮನವನ್ನು ತನ್ನ ಕಡೆ ಸೆಳೆದಿದೆ. ಆದರೆ ಇವೆಲ್ಲವುಗಳ ಬೆನ್ನಲ್ಲೇ ಇದೀಗ ಪುರುಷ ಸಂಘಟನೆಯೊಂದು ಸಮಂತಾ ಹೆಜ್ಜೆ ಹಾಕಿರುವ ಈ ಮಾದಕ ನೃತ್ಯದ ವಿ ರುಬದ್ಧ ದೂರನ್ನು ದಾಖಲು ಮಾಡಿದೆ. ಈ ಹಾಡಿನ ಸಾಹಿತ್ಯದಲ್ಲಿ ಪುರುಷರನ್ನು ಕಾ ಮ ಪ್ರ ಚೋ ದಕ ರು ಎನ್ನುವಂತೆ ಬಿಂಬಿಸಲಾಗಿದೆ ಎನ್ನುವುದು ಈ ಪುರುಷ ಸಂಘಟನೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಆದ್ದರಿಂದಲೇ ಅವರು ಹಾಡಿನ ವಿ ರು ದ್ಧ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ಈ ಹಾಡನ್ನು ನಿ ಷೇಬಧ ಮಾಡಬೇಕೆಂದು ನ್ಯಾಯಾಲಯದಲ್ಲಿ ಮೊರೆಯಿಟ್ಟಿದ್ದಾರೆ. ಪ್ರಕರಣದ ಬಗ್ಗೆ ಇನ್ನು ನ್ಯಾಯಾಲಯ ಯಾವುದೇ ಇತ್ಯರ್ಥವನ್ನು ಮಾಡಿಲ್ಲ. ಈ ವಿಷಯ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿದ್ದು ಪುಷ್ಪ ಸಿನಿಮಾ ಬಿಡುಗಡೆಗೆ ಮುನ್ನವೇ ವಿ ವಾ ದಕ್ಕೆ ಸಿಲುಕುವಂತಾಗಿದೆ. ಸಮಂತಾ ಹೆಜ್ಜೆ ಹಾಕಿರುವ ಸ್ಪೆಷಲ್ ಹಾಡಿಗೆ ಸಂಗೀತ ಸಂಯೋಜನೆಯನ್ನು ದೇವಿ ಶ್ರೀ ಪ್ರಸಾದ್ ಮಾಡಿದ್ದು, ಚಂದ್ರ ಬೋಸ್ ಹಾಗೂ ವಿವೇಕ್ ತೆಲುಗು ಮತ್ತು ತಮಿಳಿನಲ್ಲಿ ಈ ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ.

Leave a Comment