“ಸಮಂತಾ ಸೆಕೆಂಡ್ ಹ್ಯಾಂಡ್ ಐಟಂ, 50 ಕೋಟಿ ದೋಚಿದ್ದಾಳೆ”: ಎಂದವನಿಗೆ ಖಡಕ್ ರಿಪ್ಲೈ ಕೊಟ್ಟ ಸಮಂತಾ

Entertainment Featured-Articles News
76 Views

ಒಂದು ಕಡೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು ಬೇರೆ ಬೇರೆಯಾಗಿ, ತಮ್ಮ ವೃತ್ತಿ ಜೀವನದಲ್ಲಿ ಇಬ್ಬರೂ ಬ್ಯುಸಿಯಾಗಿ ಹೋಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇವರ ವಿಚ್ಛೇದನದ ವಿಷಯ ಮಾತ್ರ ಇನ್ನೂ ಚರ್ಚೆಯಾಗುತ್ತಲೇ ಇದೆ. ಕೆಲವರಂತೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಚಿತ್ರ ಎನ್ನುವ ಕಾಮೆಂಟ್ ಗಳನ್ನು ಹಾಕುತ್ತಾ ಇನ್ನೂ ಕೂಡಾ ಅದರಲ್ಲೂ ಮುಖ್ಯವಾಗಿ ನಟಿ ಸಮಂತಾರನ್ನು ಟ್ರೋಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ನಟಿಗೆ ಮಾನಸಿಕ ವೇದನೆಯನ್ನು ಸಹಾ ನೀಡುತ್ತಿದ್ದಾರೆ.

ಇಂತಹ ಟ್ರೋಲ್ ಗಳಿಗೆ ಸಮಂತಾ ತಲೆ ಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಇದೀಗ ನೆಟ್ಟಿಗನೊಬ್ಬರು ಹದ್ದು ಮೀರಿ , ತನ್ನ ನಾಲಗೆಯನ್ನು ಹರಿ ಬಿಟ್ಟಿದ್ದು, ಇದನ್ನು ನೋಡಿ ಸಹಿಸಲಾಗದ ನಟಿ ಸಮಂತಾ ಕೂಡಾ ಖಡಕ್ ಪ್ರತಿಕ್ರಿಯೆಯೊಂದನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದರೆ ಇಷ್ಟಕ್ಕೂ ನೆಟ್ಟಿಗನು ಟ್ವೀಟ್ ಮಾಡಿದ್ದೇನು?? ಆತನ ಟ್ವೀಟ್ ನಲ್ಲಿ ಇದ್ದದ್ದಾದರೂ ಏನು ಎನ್ನುವುದರ ಬಗ್ಗೆ ವಿವರಗಳನ್ನು ತಿಳಿಯೋಣ.

ನೆಟ್ಟಿಗನೊಬ್ಬನು,”ಸಮಂತಾ ವಿಚ್ಛೇದನ ಪಡೆದ ಸೆಕೆಂಡ್ ಹ್ಯಾಂಡ್ ಐಟಂ, ಒಬ್ಬ ಜೆಂಟಲ್ ಮ್ಯಾನ್ ನಿಂದ ಅನಾಯಾಸವಾಗಿ 50 ಕೋಟಿ ದೋಚಿದ್ದಾಳೆ” ಎಂದು ಬಹಳ ಕೀಳು ಮಟ್ಟದಲ್ಲಿ ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಗೆ ಬಹಳ ಸಿಂಪಲ್ ಆಗಿ ಆದ್ರೆ ಸಖತ್ ಪ್ರತಿಕ್ರಿಯೆ ಕೊಟ್ಟ ಸಮಂತಾ, “ಕಾಮರಾಲಿ ದುಖಾನ್ ದಾರ್ ನಿನ್ನ ಆತ್ಮಕ್ಕೆ ದೇವರು ಶಾಂತಿಯನ್ನು ಕರುಣಿಸಲಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಮಂತಾ ಅಭಿಮಾನಿಗಳು ಸಮಂತಾಗೆ ಬೆಂಬಲ ನೀಡುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಚರ್ಚೆಗಳು, ವಿಮರ್ಶೆ ಗಳು ಏನೇ ಇದ್ದರೂ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಪುಷ್ಪ ಸಿನಿಮಾದಲ್ಲಿನ ಐಟಂ ಸಾಂಗ್ ಭರ್ಜರಿ ಯಶಸ್ಸು ಪಡೆದಿದೆ. ಇನ್ನು ತೆಲುಗಿನಲ್ಲಿ ನಟಿಸುತ್ತಲೇ ಸಮಂತಾ ಹಿಂದಿಯಲ್ಲಿ ಸಿನಿಮಾಗಳಿಗೆ ಸಜ್ಜಾಗುತ್ತಿದ್ದಾರೆ. ಅಲ್ಲದೇ ಹಾಲಿವುಡ್ ನ ಒಂದು ಸಿನಿಮಾದಲ್ಲಿ ಅವರು ದ್ವಿಲಿಂಗಿ ಪಾತ್ರವನ್ನು ಮಾಡಲು ಒಪ್ಪಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ.

Leave a Reply

Your email address will not be published. Required fields are marked *