ಸಮಂತಾ ಸಿಕ್ಕರೆ ಏನು ಮಾಡ್ತೀನಿ ಅಂತ ತನ್ನ ಮನಸ್ಸಿನ ಮಾತು ಹೇಳಿದ ನಾಗಚೈತನ್ಯ: ಭಾವುಕರಾದ ಅಭಿಮಾನಿಗಳು

Entertainment Featured-Articles Movies News

ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಸದ್ಯಕ್ಕೆ ಅವರು ನಟಿಸಿರುವ ಬಾಲಿವುಡ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಮೋಷನ್ ಕಾರ್ಯಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಬಾಲಿವುಡ್ ಗೂ ಎಂಟ್ರಿ ನೀಡುತ್ತಿದ್ದಾರೆ. ನಾಗಚೈತನ್ಯ ಎಲ್ಲಿಗೇ ಹೋದರೂ, ಯಾವುದೇ ಸಿನಿಮಾದ ವಿಚಾರವಾಗಿ ಮಾದ್ಯಮಗಳ ಮುಂದೆ ಬಂದಾಗಲೂ ಅಲ್ಲಿ ಸಮಂತಾ ಕುರಿತಾಗಿ ಪ್ರಶ್ನೆಗಳನ್ನು ಕೇಳುವುದು ಸಹಜ. ಮಾದ್ಯಮಗಳು ನಾಗಚೈತನ್ಯ ಅವರ ಬಳಿ ಸಮಂತಾ ಕುರಿತಾದ ಒಂದಲ್ಲಾ ಒಂದು ಪ್ರಶ್ನೆ ಕೇಳುತ್ತಾರೆ. ಈಗ ಮತ್ತೊಮ್ಮೆ ಇಂತಹುದೇ ಒಂದು ಸನ್ನಿವೇಶ ನಾಗಚೈತನ್ಯ ಅವರಿಗೆ ಎದುರಾಗಿದೆ.

ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಸಹಾ ವಿಚ್ಚೇದನದ ನಂತರ ವೃತ್ತಿ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇಬ್ಬರೂ ಸಹಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಸಿನಿಮಾ ರಂಗದಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯುವ ಕಡೆಗೆ ಮುನ್ನುಗ್ಗುತ್ತಿದ್ದಾರೆ. ಅದರಲ್ಲೂ ಈ ಓಟದಲ್ಲಿ ಸಮಂತಾ ವೇಗ ತುಸು ಹೆಚ್ಚಾಗಿಯೇ ಇದ್ದು, ನಟಿ ಸಮಂತಾ ಟಾಕ್ ಆಫ್ ದಿ ಟೌನ್ ಆಗಿದ್ದು,‌ ಸದಾ ಒಂದಲ್ಲಾ ಒಂದು ವಿಚಾರವಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈಗ ನಾಗಚೈತನ್ಯ ಅವರು ಮಾದ್ಯಮಗಳ ಮುಂದೆ ಸಮಂತಾ ಬಗ್ಗೆ ತಮ್ಮ ಮನಸ್ಸಿನಲ್ಲಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದ ಭಾಗವಾಗಿ ನಟ ನಾಗಚೈತನ್ಯ ಇತ್ತೀಚಿಗೆ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾ. ಸಿನಿಮಾ ಪ್ರಚಾರ ವಿಚಾರವಾಗಿ ಮುಂಬೈಗೆ ಸಹಾ ತೆರಳಿದ್ದ ನಟ ಅಲ್ಲಿ ಕೂಡಾ ಮಾದ್ಯಮಗಳ ಮುಂದೆ ಹತ್ತು ಹಲವು ವಿಚಾರಗಳನ್ನು ಮಾತನಾಡಿದ್ದರು. ಆದರೆ ಇಂತಹ ಸಂದರ್ಶನಗಳ ವೇಳೆ ಸಿನಿಮಾ ಕುರಿತಾದ ಪ್ರಶ್ನೆಗಳಿಗಿಂತ ನಾಗಚೈತನ್ಯ ಅವರಿಗೆ ಅವರ ವೈಯಕ್ತಿಕ ಜೀವನದ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈಗ ನಾಗಚೈತನ್ಯ ತಮ್ಮ ಮಾಜಿ ಪತ್ನಿ ಬಗ್ಗೆ ಏನು ಹೇಳಿದ್ದಾರೆ ನೋಡೋಣ ಬನ್ನಿ.

ಸಂದರ್ಶನದ ವೇಳೆ ನಾಗಚೈತನ್ಯ ಅವರನ್ನು, ಸಮಂತಾ ಅವರನ್ನು ಮತ್ತೆ ಭೇಟಿಯಾದ್ರೆ ನೀವು ಏನು ಮಾಡುವಿರಿ? ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ನಾಗಚೈತನ್ಯ ಕೊಟ್ಟ ಉತ್ತರ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ನಾಗಚೈತನ್ಯ ತಮ್ಮ ಉತ್ತರದಲ್ಲಿ, ಒಂದು ವೇಳೆ ಸಮಂತಾರನ್ನು ಭೇಟಿಯಾದರೆ ಆಕೆಗೆ “ಹಾಯ್ ಹೇಳಿ, ಆಕೆಯನ್ನು ಹಗ್ ಮಾಡಿಕೊಳ್ಳುತ್ತೇನೆ” ಅಲ್ಲದೇ ನನ್ನ ವೈಯಕ್ತಿಕ ಜೀವನವು ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರದಂತೆ ಎಚ್ಚರವನ್ನು ವಹಿಸುತ್ತೇನೆ ಎಂದು ಬಹಳ ಬುದ್ಧಿವಂತಿಕೆಯಿಂದ ನಾಗಚೈತನ್ಯ ಉತ್ತರವನ್ನು ನೀಡಿದ್ದಾರೆ.

Leave a Reply

Your email address will not be published.