ಕೆಲವು ತಿಂಗಳುಗಳ ಹಿಂದೆಯಷ್ಟೇ ತೆಲುಗು ಸಿನಿರಂಗದ ಹಾಗೂ ದಕ್ಷಿಣ ಸಿನಿ ರಂಗದ ಸ್ಟಾರ್ ನಟಿ ಸಮಂತಾ ತಮ್ಮ ಹೆಸರಿನ ಜೊತೆಗೆ ಇದ್ದ ಸರ್ ನೇಮ್ ಅಕ್ಕಿನೇನಿ ಯನ್ನು ಕೈಬಿಟ್ಟರು. ಯಾವಾಗ ಸಮಂತಾ ಅಕ್ಕಿನೇನಿ ಹೆಸರಿಗೆ ಕತ್ತರಿಯನ್ನು ಹಾಕಿದರೋ, ಅದೊಂದ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತು. ನಟಿ ಸಮಂತಾ ಹಾಗೂ ನಾಗಚೈತನ್ಯ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿ ಇಲ್ಲ ಅವರ ನಡುವೆ ಒಂದು ಭಿನ್ನಾಭಿಪ್ರಾಯ, ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿ ದೊಡ್ಡ ಸದ್ದು ಮಾಡಿತು. ತಿಂಗಳುಗಳ ನಂತರ ಅದು ನಿಜವೂ ಆಯಿತು.
ಇದೆಲ್ಲಾ ಆದ ಮೇಲೆ ಇತ್ತೀಚಿಗೆ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕೂಡಾ ತಮ್ಮ ಪತಿಯ ಹೆಸರನ್ನು ಕೈಬಿಟ್ಟು ಸುದ್ದಿಯಾಗಿ ಅನಂತರ ಎಲ್ಲವೂ ಗಾಳಿ ಸುದ್ದಿಯೆಂದೂ ತನ್ನ ಮತ್ತು ತನ್ನ ಪತಿಯ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಹೀಗೆ ಹೆಸರಿನ ವಿಷಯವಾಗಿ ಸಮಂತಾ ಹಾಗೂ ಪ್ರಿಯಾಂಕ ನಂತರ ಈಗ ರಶ್ಮಿಕಾ ಹೆಸರಿನ ಗುಲ್ಲೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಪಟ್ಟಿದ್ದು, ಅನುಮಾನಗಳ ಹುಳುಗಳು ಅಭಿಮಾನಿಗಳ ತಲೆಯನ್ನು ಹೊಕ್ಕಿವೆ.
ಇಷ್ಟಕ್ಕೂ ಆಗಿದ್ದೇನು? ಅನ್ನೋದಾದ್ರೆ ರಶ್ಮಿಕಾ ತಾವು ವಿದೇಶಕ್ಕೆ ಹೋಗುತ್ತಿರುವ ವಿಷಯವಾಗಿ ಪಾಸ್ ಪೋರ್ಟ್ ಹಿಡಿದುಕೊಂಡ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಆಗ ಅಲ್ಲಿ ರಶ್ಮಿಕಾ ಸರ್ ನೇಮ್ ರಶ್ಮಿಕಾ ಮಂದಣ್ಣ ಬದಲಾಗಿ ಮುಂಡಚಾದಿರ ಎನ್ನುವುದು ಕಾಣಿಸಿದೆ. ಮಂದಣ್ಣ ಜಾಗದಲ್ಲಿ ಈ ಹೊಸ ಪದ ಕಂಡೊಡನೆ ಇದೇನಿದು ಎನ್ನುವ ಅನುಮಾನ ಹಾಗೂ ಪ್ರಶ್ನೆಗಳು ಹಲವರಲ್ಲಿ ಮೂಡಿದೆ. ಹೊಸ ಸರ್ ನೇಮ್ ಎಲ್ಲಿಂದ ಬಂತು ಎಂದು ಆಶ್ಚರ್ಯ ಪಟ್ಟಿದ್ದಾರೆ.
ವಾಸ್ತವವಾಗಿ ರಶ್ಮಿಕಾ ಕೊಡವ ಕುಟುಂಬದಿಂದ ಬಂದವರು. ಅವರ ತಂದೆಯ ಪೂರ್ಣ ಹೆಸರು ಮದನ್ ಮಂದಣ್ಣ ಮುಂಡಚಾದಿರ ಎನ್ನುವುದಾಗಿದೆ. ಕೊಡಗಿನ ಇತಿಹಾಸದಲ್ಲಿ ವೀರಯೋಧರಾಗಿದ್ದ ಮುಂಡಚಾದಿರ ಮೂಲದವರೆನ್ನುವ ಕಾರಣಕ್ಕೆ ಶತಮಾನಗಳಿಂದ ಆ ವಂಶಜರು ಆ ಹೆಸರನ್ನು ತಮ್ಮ ಸರ್ ನೇಮ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಅದೇ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅವರ ಸರ್ ನೇಮ್ ನಲ್ಲೂ ಆ ಹೆಸರು ಕಾಣಿಸಿಕೊಂಡಿದೆ ಎನ್ನುವ ವಿಚಾರ ಸುದ್ದಿಯಾದ ಮೇಲೆ ಎಲ್ಲರ ಅನುಮಾನಗಳಿಗೆ ಉತ್ತರ ಸಿಕ್ಕಿದೆ.