ಸಮಂತಾ, ಪೂಜಾ ತರ ನೀವೂ ಐಟಂ ಸಾಂಗ್ ಮಾಡ್ತೀರಾ? ಬೋಲ್ಡಾಗಿ ಉತ್ತರ ನೀಡಿದ ಸಾಯಿ ಪಲ್ಲವಿ!!!

Written by Soma Shekar

Published on:

---Join Our Channel---

ನಟಿ ಸಾಯಿ ಪಲ್ಲವಿ ಎಂದ ಕೂಡಲೇ ನೆನಪಾಗುವುದು ಒಬ್ಬ ಸಹಜ ಸುಂದರಿ ಹಾಗೂ ಅಪ್ಪಟ ಡಾನ್ಸ್ ಕಲಾವಿದೆ ಹಾಗೂ ನಟನೆಯಲ್ಲಿ ಪ್ರತಿಭಾವಂತೆ ಎಂದು ಈಗಾಗಲೇ ಸಾಬೀತು ಮಾಡಿರುವ ಸಹಜ ನಟಿ ಎನಿಸಿಕೊಂಡಿದ್ದಾರೆ. ಬೇರೆ ನಟಿಯರ ಹಾಗೆ ಗ್ಲಾಮರ್, ಎಕ್ಸ್ ಪೋಸಿಂಗ್, ಟ್ರೋಲ್ ಗಳೆಂದು ಸದ್ದು ಮಾಡದೇ ಉತ್ತಮವಾದ ಪಾತ್ರಗಳ ಮೂಲಕವೇ ಸ್ಟಾರ್ ನಟಿಯರಿಗೆ ಸ್ಪರ್ಧೆಯನ್ನು ನೀಡುತ್ತಿರುವ ದಕ್ಷಿಣದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಯಿ ಪಲ್ಲವಿಯ ವಿಶೇಷ ಪ್ರತಿಭೆ ಎಂದರೆ ಆಕೆ ಒಬ್ಬ ಅದ್ಭುತ ಡಾನ್ಸರ್.

ಸಾಯಿ ಪಲ್ಲವಿ ಡಾನ್ಸ್ ಎಂದರೆ ಖುದ್ದು ಟಾಲಿವುಡ್ ನ ಮೆಗಾಸ್ಟಾರ್ ಕೂಡಾ ಅಭಿಮಾನಿ ಎಂದು ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಕೂಡಾ ವಿಶೇಷ. ಇಷ್ಟೊಂದು ಅದ್ಭುತವಾಗಿ ಡಾನ್ಸ್ ಮಾಡುವ ಸಾಯಿ ಪಲ್ಲವಿ ಯಾವುದಾದರೂ ಸಿನಿಮಾವೊಂದರಲ್ಲಿ ಐಟಂ ಸಾಂಗ್ ಅಥವಾ ವಿಶೇಷ ಹಾಡಿಗೆ ಹೆಜ್ಜೆಯನ್ನು ಹಾಕಲಿದ್ದಾರಾ?? ಎನ್ನುವ ಪ್ರಶ್ನೆ ಸಹಜವಾಗಿಯೇ ಡಾನ್ಸ್ ಪ್ರಿಯರಿಗೆ ಮೂಡುತ್ತದೆ. ಅಲ್ಲದೇ ಇದುವರೆಗೆ ಯಾವ ನಿರ್ದೇಶಕರು ಅವರನ್ನು ಇದಕ್ಕೆ ಅಪ್ರೋಚ್ ಮಾಡಿಲ್ಲವೇ?? ಎನ್ನುವ ಅನುಮಾನ ಮೂಡುತ್ತದೆ.

ಪ್ರಸ್ತುತ ನಟಿ ಸಾಯಿಪಲ್ಲವಿ ನಾಯಕಿಯಾಗಿ, ನಾನಿ ನಾಯಕನಾಗಿ ನಟಿಸಿರುವ ಶ್ಯಾಮ್ ಸಿಂಗ್ ರಾಯ್ ಸಿನಿಮಾ ಬಿಡುಗಡೆ ಆಗಿ, ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಈ ಸಿನಿಮಾದ ಕುರಿತಾಗಿ ಸಂದರ್ಶನಗಳಲ್ಲಿ ಹಲವು ರೀತಿಯ ಪ್ರಶ್ನೆಗಳು ಸಾಯಿ ಪಲ್ಲವಿ ಅವರ ಕಡೆಗೆ ಬಂದಿದ್ದು ಸಾಮಾನ್ಯ. ಅಂತಹ ಪ್ರಶ್ನೆ ಗಳಲ್ಲಿ ಒಂದು ಐಟಂ ಸಾಂಗ್ ಕುರಿತಾಗಿ ಆಗಿದ್ದು ವಿಶೇಷ. ಆದರೆ ಆ ಪ್ರಶ್ನೆಗೆ ಬಹಳ ಬೋಲ್ಡಾಗಿಯೇ ಸಾಯಿಪಲ್ಲವಿ ತಮ್ಮ ಕಡೆಯಿಂದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ರಂಗಸ್ಥಲಂ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಹಾಗೂ ಪುಷ್ಪ ಸಿನಿಮಾದಲ್ಲಿ ಸಮಂತಾ ರೀತಿ ನೀವು ಸಹಾ ಮುಂದೆ ವಿಶೇಷ ಹಾಡಿಗೆ ಹೆಜ್ಜೆ ಹಾಕುವಿರಾ?? ಎನ್ನುವ ಪ್ರಶ್ನೆ ಸಾಯಿಪಲ್ಲವಿ ಮುಂದೆ ಬಂದಾಗ, ನಟಿಯು “ನನಗೆ ಕಂಫರ್ಟ್ ಇದ್ದರೆ ಮಾಡುವೆ, ಡ್ಯಾನ್ಸ್ ಮಾಡ್ತೀನಿ, ಆದರೆ ಆಯ್ಕೆ ಮಾಡಿಕೊಳ್ಳುವ ಹಾಡು ನನ್ನ ಸಿನಿಮಾದಲ್ಲಿ ಒಂದು ರೀತಿ ಇದ್ರೆ, ನೀವು ಹೇಳಿದಂತೆ ಸ್ಪೆಷಲ್ ಹಾಡಿನಲ್ಲಿ ಬೇರೆ ತರ ಇರುತ್ತೆ. ಬಹುಶಃ ನಾನು ಸ್ಪೆಷಲ್ ಸಾಂಗ್ ಗೆ ಕಂಫರ್ಟ್ ಅಲ್ಲ” ಎನ್ನುವ ಮಾತನ್ನು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಯಕ ನಟಿಯರೇ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಹಿಂದೆ ವಿಶೇಷ ಹಾಡುಗಳಿಗಾಗಿಯೇ ಪ್ರತ್ಯೇಕ ನಟಿಯರು ಇದ್ದರು, ಅವರು ಅದರ ಮೂಲಕವೇ ದೊಡ್ಡ ಜನಪ್ರಿಯತೆ ಪಡೆದುಕೊಂಡು ಮಿಂಚಿದ್ದರು, ಆದರೆ ಈಗ ನಾಯಕಿಯರೇ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಡಾನ್ಸರ್ ಗಳಿಗೆ ಸ್ಪರ್ಧೆ ನೀಡುತ್ತಿದ್ದಾರೆ.

Leave a Comment