ಸಮಂತಾ ತಾನು ಮಾಡಿದ ತಪ್ಪನ್ನು ಪರೋಕ್ಷವಾಗಿ ಹೇಳಿದ್ರಾ?? ಪ್ರತಿಯೊಬ್ಬ ಪೋಷಕರೂ ಓದಲೇಬೇಕು

0 2

ನಟಿ ಸಮಂತಾ ವೈಯಕ್ತಿಕ ಜೀವನದಲ್ಲಿ ಎದ್ದ ಬಿರುಗಾಳಿ, ವಿಚ್ಚೇದನದಲ್ಲಿ ಕೊನೆಯಾಗಿದೆ‌. ಆದರೆ ಇದಾದ ನಂತರ ಕೂಡಾ ಸಮಂತಾಗೆ ಸಮಸ್ಯೆಗಳು ಕಡಿಮೆಯೇನಾಗಿಲ್ಲ. ಅದಕ್ಕೆ ಕಾರಣ ವಿಚ್ಚೇದನದ ಹಿಂದೆ ಮುಖ್ಯ ಪಾತ್ರ ವಹಿಸಿದ್ದು ಸಮಂತಾ ಎನ್ನುವ ಸುದ್ದಿಗಳು, ಈ ಸುದ್ದಿಗಳು ಹರಡಿದ ಬೆನ್ನಲ್ಲೇ ಸಮಂತಾ ತನ್ನ ಬಗ್ಗೆ ಅಪಪ್ರಚಾರ ಮಾಡುವವರ ಮೇಲೆ ದೂರು ನೀಡಿ, ಕೋರ್ಟ್ ಮೆಟ್ಟಿಲೇರಿದ್ದು ಕೂಡಾ ನಡೆದಿದೆ. ಇನ್ನು ವಿಚ್ಚೇದನದ ನಂತರ ತನ್ನ ಮನಸ್ಸಿನ ನೆಮ್ಮದಿಗಾಗಿ ರಿಷಿಕೇಶ್ ಗೆ ತೆರಳಿದ್ದ ನಟಿ ಈಗ ದುಬೈಗೆ ಹಾರಿದ್ದಾರೆ. ಪ್ರವಾಸದ ಮೂಲಕ ಮನಸ್ಸಿನ ನೆಮ್ಮದಿ ಹುಡುಕುತ್ತಿದ್ದಾರೆ.

ಇವೆಲ್ಲವುಗಳ ನಡುವೆಯೇ ನಟಿ ಸಮಂತಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು ತನ್ನ ಟ್ರಾವೆಲಿಂಗ್ ಅನುಭವ ವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈಗ ಇವೆಲ್ಲವುಗಳ ನಡುವೆ ಸಮಂತಾ ಹಾಕಿರುವ ಒಂದು ಪೋಸ್ಟ್ ಬಹಳ ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ಸಮಂತಾ ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಒಂದು ಮಹತ್ವದ ಸಂದೇಶವನ್ನು ನೀಡಿದ್ದಾರೆ. ಈ ಮೂಲಕ ಅವರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಒತ್ತು ನೀಡುವಂತೆ ಪೋಷಕರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಸಮಂತಾ ತಮ್ಮ ಪೋಸ್ಟ್ ನಲ್ಲಿ, ನೀವು ನಿಮ್ಮ ಮಗಳನ್ನು ಬಹಳ ಸಮರ್ಥವಾಗಿ ಬೆಳೆಸಿ. ಈ ಮೂಲಕ ತಾವು ಯಾರನ್ನು ಮದುವೆ ಆಗುತ್ತೇವೆ ಎನ್ನುವ ಚಿಂತೆಯೇ ಅವರಿಗೆ ಬರದ ಹಾಗಿರಲಿ. ಅಲ್ಲದೇ ನಿಮ್ಮ ಮಗಳ ಮದುವೆಗೆ ಹಣ ಕೂಡಿಡುವ ಬದಲು ಅದನ್ನು ಅವರ ಶಿಕ್ಷಣಕ್ಕೆ ಆ ಹಣ ಬಳಸಿ. ಅವರನ್ನು ಮದುವೆಗೆ ಮಾನಸಿಕವಾಗಿ ಸಿದ್ಧಪಡಿಸುವ ಬದಲು ಅವರನ್ನು ವೈಯಕ್ತಿಕವಾಗಿ ಗಟ್ಟಿಗೊಳಿಸಿ. ಸೆಲ್ಫ್​ ಲವ್​, ಆತ್ಮವಿಶ್ವಾಸವನ್ನು ಅವರಲ್ಲಿ ಬೆಳೆಸಿ’ ಎನ್ನುವ ಸಲಹೆಯನ್ನು ನೀಡಿದ್ದಾರೆ. ಸಮಂತಾ ಅವರು ಈ ಪೋಸ್ಟ್ ಬಹಳ ವೈರಲ್ ಆಗಿದೆ.

ಅಲ್ಲದೇ ಇಲ್ಲಿ ಪರೋಕ್ಷವಾಗಿ ಸಮಂತಾ ಹೆಣ್ಣು ಮಕ್ಕಳು ಮದುವೆಯ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕೆಂದು, ಪೋಷಕರು ಅದರ ಕಡೆ ಇನ್ನೂ ಹೆಚ್ಚಿನ ಗಮನವನ್ನು ನೀಡಬೇಕು ಎನ್ನುವ ವಿಚಾರವನ್ನು ಅವರು ಹೇಳಿರುವುದು ಗಮನ ಸೆಳೆದಿದೆ. ಅಲ್ಲದೇ ಸಮಂತಾ ಮದುವೆ ವಿಚಾರದಲ್ಲಿ ತನ್ನ ನಿರ್ಧಾರ ತಪ್ಪಾಗಿತ್ತು ಎಂದು ಹೇಳಿದಂತೆ ಇದೆ. ಸಮಂತಾ ತಮ್ಮ ಮನಸ್ಸಿನ ಬೇಸರವನ್ನು ಈ ರೀತಿ ಹೊರಗೆ ಹಾಕಿದ್ದಾರೆ ಎನ್ನುವ ಹಾಗಿದೆ.

Leave A Reply

Your email address will not be published.