ಬಾಲಿವುಡ್ ಸಿನಿಮಾ ರಂಗದಲ್ಲಿ ಸಲ್ಮಾನ್ ಖಾನ್ ದೊಡ್ಡ ಹೆಸರು. ಇನ್ನು ಅವಿವಾಹಿತನಾಗಿಯೇ ಉಳಿದಿರುವ ಬಾಲಿವುಡ್ ಬಾಕ್ಸಾಫೀಸಿನ ಸುಲ್ತಾನ ಸಲ್ಮಾನ್ ಈಗಾಗಲೇ ಹಲವು ನಟಿಯರ ಜೊತೆಗೆ ಪ್ರೇಮ, ಡೇಟಿಂಗ್ ಮಾಡಿರುವುದು ರಹಸ್ಯವಾಗಿ ಏನೂ ಉಳಿದಿಲ್ಲ. ಆದರೆ ಈಗ ಹೊಸ ವಿಷಯ ಏನೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಪ್ರೇಮದಲ್ಲಿ ಬಿದ್ದಿದ್ದಾರೆ, ಅಂದಗಾತಿಯೊಬ್ಬಳ ಪ್ರೇಮಪಾಶದಲ್ಲಿ ಸಲ್ಮಾನ್ ಬಂ ಧಿ ಯಾಗಿದ್ದಾರೆ ಎನ್ನುವ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ಈ ವಿಷಯ ಈಗ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಮಾಡಿದೆ.
ಸಲ್ಲು ಭಾಯ್ ಡೇಟಿಂಗ್ ಮಾಡುತ್ತಿರುವುದು ನಟಿ ಸಮಂತಾ ಜೊತೆಗೆ ಎನ್ನುವ ಸುದ್ದಿ ಕೇಳಿ ಬಂದಿದ್ದು , ಸಮಂತಾ ಹೆಸರು ಕೇಳಿ ಬಂದ ಕೂಡಲೇ ಈ ವಿಚಾರ ಇನ್ನಷ್ಟು ದೊಡ್ಡ ಸದ್ದನ್ನು ಮಾಡುತ್ತಿರುವುದು ಸಹಜವೇ ಆಗಿದೆ. ಟಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿರುವ, ಸ್ವಲ್ಪ ಸಮಯದ ನಂತರ ವಿಚ್ಚೇದನ ಪಡೆದು ಪತಿಯಿಂದ ದೂರಾಗಿರುವ ಸಮಂತಾ ಇದೀಗ ಸಲ್ಮಾನ್ ಖಾನ್ ಲವ್ ನಲ್ಲಿ ಬಿದ್ದರಾ ಎಂದು ಸಮಂತಾ ಅಭಿಮಾನಿಗಳು ಗೊಂದಲಕ್ಕೆ ಈಡಾಗಿದ್ದಾರೆ.
ಈ ಗೊಂದಲಕ್ಕೆ ಕಾರಣವಾದ ಹೆಸರಿನ ಸಮಂತಾ ಟಾಲಿವುಡ್ ನ ಜನಪ್ರಿಯ ನಟಿಯಲ್ಲ ಎನ್ನುವುದು ತಿಳಿಯದೇ ಇದೆಲ್ಲಾ ಆಗಿದೆ. ಹೌದು ಸಲ್ಮಾನ್ ಖಾನ್ ಜೊತೆಗೆ ತಳಕು ಹಾಕಿಕೊಂಡಿರುವ ನಟಿ ಸಮಂತಾ ಭಾರತ ಮೂಲದವರಲ್ಲ ಎಂದು ತಿಳಿದು ಬಂದಿದೆ. ಸಲ್ಮಾನ್ ಖಾನ್ ಅಮೆರಿಕನ್ ಮೂಲದ ನಟಿ ಸಮಂತಾ ಲಾಕ್ ವುಡ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದು ತಿಳಿಯದೇ ಸಮಂತಾ ಹೆಸರು ಕೇಳಿದ ಕೂಡಲೇ ಇದು ಅನೇಕರಿಗೆ ಅನುಮಾನವನ್ನು ಮೂಡಿಸಿದ್ದು ಸಹಜವಾಗಿದೆ.
ಬಾಲಿವುಡ್ ನಲ್ಲಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಅವರ ಜೊತೆ ಬಾಲಿವುಡ್ ನ ಹಲವು ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಆದರೆ ಯಾರ ಜೊತೆಗೂ ಅವರ ಪ್ರೇಮ ಕಹಾನಿ ಸುಖಾಂತ್ಯ ಕಾಣಲಿಲ್ಲ. ಇನ್ನು ಈಗ ಹೊಸ ಗೆಳತಿ ಸಮಂತಾ ಸಲ್ಮಾನ್ ಖಾನ್ ಅವರ ಜನ್ಮದಿನದ ಪಾರ್ಟಿಯಲ್ಲಿ ಸಹಾ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಆದರೆ ಸಮಂತಾ ಮಾತ್ರ ತಮ್ಮ ನಡುವೆ ಅಂತಹುದೇನೂ ಇಲ್ಲ ಎಂದಿದ್ದಾರೆ.