ಪುಷ್ಪ ಸಿನಿಮಾ ಬಿಡುಗಡೆಗೆ ಮುನ್ನ ಹಾಗೂ ಬಿಡುಗಡೆಯ ನಂತರವೂ ಸಹಾ ದೊಡ್ಡ ಸದ್ದನ್ನು ಮಾಡಿ, ಅದೇ ವೇಗದಿಂದ ಹೋಗುತ್ತಿರುವ ವಿಷಯ ಅಂದರೆ ಅದು ಈ ಸಿನಿಮಾದಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿರುವ ಐಟಂ ಸಾಂಗ್. ಸಮಂತಾ ಐಟಂ ಸಾಂಗ್ ಮಾಡುತ್ತಿದ್ದಾರೆ ಎಂದಾಗಲೇ ದೊಡ್ಡ ಕ್ರೇಜ್ ಹುಟ್ಟು ಹಾಕಿತ್ತು. ಅನಂತರ ಐಟಂ ಸಾಂಗ್ ಯೂಟ್ಯೂಬ್ ನಲ್ಲಿ ರಿಲೀಸ್ ಆದ ಮೇಲೆ ದೊಡ್ಡ ಕಿಚ್ಚು ಹೊತ್ತಿಸಿತು. ಪುಷ್ಪ ಸಿನಿಮಾ ಒಂದು ಕಡೆ ಎಂದರೆ ಸಿನಿಮಾದಲ್ಲಿನ ಸಮಂತಾ ಐಟಂ ಹಾಡು ಒಂದೆಡೆ ಎನ್ನುವ ಮಟ್ಟಕ್ಕೆ ಸದ್ದು ಮಾಡಿತ್ತು.
ಇನ್ನು ಸಿನಿಮಾ ಬಿಡುಗಡೆಗೆ ಮುನ್ನವೇ ಈ ಹಾಡಿನ ಸಂಗೀತ, ನೃತ್ಯ ಅಬ್ಬರಿಸುವಾಗಲೇ ಪುರುಷ ಸಂಘಟನೆಯೊಂದು, ಈ ಹಾಡಿನ ಸಾಹಿತ್ಯದಲ್ಲಿ ಪುರುಷರನ್ನು ಕಾ ಮ ಪಿ ಪಾ ಸುಗಳೆಂದು ಹೇಳಲಾಗಿದೆ, ಇದು ನಮಗೆ ಮಾಡಿದ ಅವಮಾನ, ಆದ್ದರಿಂದ ಸಮಂತಾ ಹೆಜ್ಜೆ ಹಾಕಿದ ಹೂಂ ಅಂತೀಯ ಮಾವ ಹಾಡನ್ನು ನಿಷೇಧ ಮಾಡಬೇಕೆಂದು ಕೋರ್ಟ್ ಮೆಟ್ಟಿಲನ್ನು ಏರಿದರು. ಆದರೆ ಎರಡು ದಿನಗಳ ನಂತರ ಸಿನಿಮಾ ಥಿಯೇಟರ್ ಗಳಲ್ಲಿ ಈ ಹಾಡಿಗೆ ಪುರುಷರು ಹೆಜ್ಜೆ ಹಾಕಿ ಕುಣಿದರು…
ಜನ ತನ್ನ ಹಾಡಿಗೆ ಥಿಯೇಟರ್ ಗಳಲ್ಲಿ ಕುಣಿದಿದ್ದು ನೋಡಿ ಸಮಂತಾ ಖುಷಿಗೊಂಡು ಇದೊಂತರ ಹುಚ್ಚು ಎಂದು ಬರೆದುಕೊಂಡು ಸಂಭ್ರಮಪಟ್ಟರು. ಈಗ ಇಷ್ಟಕ್ಕೆ ಕಥೆ ಮುಗಿದಿಲ್ಲ. ಪುಷ್ಪ ಸಿನಿಮಾದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಪುಷ್ಪ ಸಿನಿಮಾದ ಈ ಐಟಂ ಸಾಂಗ್ ತನಗೆ ಒಂದು ಭಕ್ತಿ ಗೀತೆಯಂತೆ, ಇದೊಂದು ಭಕ್ತಿ ಗೀತೆಗೆ ಸಮಾನ ಎನ್ನುವ ಮಾತನ್ನು ಹೇಳಿದರು. ಇದು ಈಗ ಇನ್ನೊಂದು ದೊಡ್ಡ ಚರ್ಚೆಗೆ ಕಾರಣವಾಗಿ ಈಗ ಸದ್ದು ಮಾಡಿದೆ.
ಡಿಎಸ್ಪಿ ಹೇಳಿದ ಮಾತಿಗೆ ಸಿಟ್ಟಾದ ಬಿಜೆಪಿ ಎಂಎಲ್ಎ ರಾಜಾ ಸಿಂಗ್, ಹೇಗೆ ದೇವಿ ಶ್ರೀ ಪ್ರಸಾದ್ ಐಟಂ ಸಾಂಗ್ ಅನ್ನು ಭಕ್ತಿ ಗೀತೆಗೆ ಹೋಲಿಕೆ ಮಾಡಿದರು, ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದೆ. ಕೂಡಲೇ ದೇವಿ ಶ್ರೀ ಪ್ರಸಾದ್ ಕ್ಷಮಾಪಣೆ ಕೋರಬೇಕು. ಇಲ್ಲವಾದರೆ ಅವರನ್ನು ಚಪ್ಪಲಿಗಳಿಂದ ಸ್ವಾಗತ ಮಾಡಲಾಗುವುದು ಎನ್ನುವ ಮಾತು ಹೇಳಿದ್ದಾರೆ. ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗಂತೂ ದೊಡ್ಡ ಸದ್ದು ಮಾಡಿರುವುದು ಮಾತ್ರ ಸತ್ಯವಾಗಿದೆ.