ಸಮಂತಾ ಅಭಿಮಾನಿಗಳನ್ನು ಮತ್ತೆ ಕೆರಳಿಸಿದ ಸಿದ್ದಾರ್ಥ್: ನಟ ಬೀದಿನಾಯಿಗಳು ಎಂದಿದ್ದು ಯಾರನ್ನು??
ಟಾಲಿವುಡ್ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಜೋಡಿ ದೂರಾಗಿದ್ದು ಈಗ ಹಳೆಯ ವಿಷಯವಾದರೂ, ಇದರ ಬಗ್ಗೆ ಇನ್ನೂ ಚರ್ಚೆಗಳು ನಿಂತಿಲ್ಲ. ಅಭಿಮಾನಿಗಳಿಗಂತೂ ಇದೊಂದು ಶಾ ಕ್ ಹಾಗೂ ಅರಗಿಸಿಕೊಳ್ಳಲಾಗದ ವಾಸ್ತವ ಎನಿಸಿಕೊಂಡಿದೆ. ಅಲ್ಲದೇ ಸಮಂತಾ ನಾಗಚೈತನ್ಯ ತಮ್ಮ ವಿಚ್ಚೇದನದ ಮಾಹಿತಿಯನ್ನು ಅಧಿಕೃತವಾಗಿ ನೀಡಿದ ಬೆನ್ನಲ್ಲೇ ಕೆಲವು ಸ್ಟಾರ್ ಗಳು ಸಹಾ ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದುಂಟು. ಅದರಲ್ಲಿ ದಕ್ಷಿಣ ಸಿನಿ ರಂಗದ ಪ್ರಖ್ಯಾತ ನಟ ಸಿದ್ಧಾರ್ಥ್ ಕೂಡಾ ಸೇರಿದ್ದಾರೆ. ಸಿದ್ದಾರ್ಥ್ ಮಾಡಿದ ಒಂದು ಟ್ವೀಟ್ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ನಟ ಸಿದ್ಧಾರ್ಥ್ ಹಾಗೂ ಸಮಂತಾ ವರ್ಷಗಳ ಹಿಂದೆ ಪ್ರೀತಿಯಲ್ಲಿ ಇದ್ದ ವಿಷಯ ತಿಳಿದಿದ್ದೇ. ಆದರೆ ಸಮಂತಾ ಸಿದ್ದಾರ್ಥ್ ನಿಂದ ದೂರಾದ ಮೇಲೆ ಸಮಂತಾ ಜೀವನದಲ್ಲಿ ಬಂದಿದ್ದು ನಾಗಚೈತನ್ಯ. ಇಬ್ಬರ ನಡುವೆ ಆದ ಪ್ರೀತಿ ಮದುವೆಯ ರೂಪ ಪಡೆದು, ಇದೀಗ ಅವರ ವಿವಾಹ ಬಂಧನವು ನಾಲ್ಕನೇ ವರ್ಷದ ಅಂತ್ಯಕ್ಕೆ ಮುಗಿದು ಈ ಯುವ ಜೋಡಿ ಒಬ್ಬರಿಂದ ಒಬ್ಬರು ದೂರಾಗಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಬ್ರೇಕಪ್ ನಂತರ ಸಿದ್ದಾರ್ಥ್ ಒಂದು ಟ್ವೀಟ್ ಮಾಡಿದ್ದರು.
ಸಿದ್ದಾರ್ಥ್ ತಮ್ಮ ಟ್ವೀಟ್ ನಲ್ಲಿ “ಮೋಸ ಮಾಡುವವರು ಉದ್ದಾರವಾಗುವುದಿಲ್ಲ, ಇದು ಬಾಲ್ಯದಲ್ಲಿ ಶಿಕ್ಷಕರಿಂದ ಕಲಿತ ಪಾಠ” ಎಂದು ಬರೆದುಕೊಂಡಿದ್ದರು. ಅದು ಸಮಂತಾ ಗೆ ಹೇಳಿದ್ದು ಎಂದು ಎಲ್ಲರಿಗೂ ಆಗಲೇ ಸ್ಪಷ್ಟನೆ ಸಿಕ್ಕಿತ್ತು. ಆದರೆ ಅನಂತರ ನೆಟ್ಟಿಗರು ಸಿದ್ಧಾರ್ಥ್ ಗೆ ಫುಲ್ ಕ್ಲಾಸ್ ತಗೊಂಡು, ಇಂತಹ ಮಾತು ಆಡಲು ಮನಸ್ಸಾದರೂ ಹೇಗೆ ಬಂತು?? ಎಂದೆಲ್ಲಾ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಈಗ ಅದಕ್ಕೆ ನಟ ಸಿದ್ಧಾರ್ಥ್ ತಮ್ಮ ಸ್ಪಷ್ಟನೆ ನೀಡಿದ್ದಾರೆ.
ನಟ ಸಿದ್ಧಾರ್ಥ್ ತನ್ನ ಟ್ವೀಟ್ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಾ, “ನಾನು ನನ್ನ ಮನಸ್ಸಿನಲ್ಲಿ ಬಂದಿದ್ದನ್ನು ಟ್ವೀಟ್ ಮಾಡುತ್ತೇನೆ. ಬೀದಿ ನಾಯಿಗಳ ಬಗ್ಗೆ ನಾನು ಟ್ವೀಟ್ ಮಾಡಿದ್ದನ್ನು ನನಗೆ ಅಂದು ಕೊಂಡರೆ ಅದಕ್ಕೆ ನಾನು ಹೊಣೆಯಲ್ಲ” ಎಂದು ನಟ ಹೇಳಿದ್ದಾರೆ. ಇಲ್ಲಿ ಅವರು ಮೋಸ ಮಾಡಿದವರನ್ನು ಬೀದಿ ನಾಯಿಗಳಿಗೆ ಹೋಲಿಕೆ ಮಾಡಿರುವುದು ಈಗ ಎಲ್ಲರ ಗಮನವನ್ನು ಸೆಳೆದಿದೆ ಅಲ್ಲದೇ ಸಿದ್ದಾರ್ಥ್ ಅವರ ಈ ಮಾತು ಸಮಂತಾ ಅಭಿಮಾನಿಗಳನ್ನು ಕೆರಳಿಸಬಹುದು.