ಸಮಂತಾರನ್ನು ಈ ವಿಷಯದಲ್ಲಿ ಹಿಂದಿಕ್ಕಿದ ಮಹೇಶ್ ಬಾಬು: ನುಚ್ಚು ನೂರಾಯ್ತು ಸಮಂತಾ ಮಾಡಿದ್ದ ದಾಖಲೆ!!

Entertainment Featured-Articles News

ಪುಷ್ಪ ಸಿನಿಮಾ ಎಬ್ಬಿಸಿದ ಬಿರುಗಾಳಿ ಏನು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅಲ್ಲು ಅರ್ಜುನ್ ನಾಯಕನಾಗಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ, ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ರ ಕ್ತ ಚಂದನ ಕ ಳ್ಳ ಸಾಗಾಣಿಕೆಯ ಕಥಾ ಹಂದರದೊಂದಿಗೆ ಐದು ಭಾಷೆಗಳಲ್ಲಿ ತೆರೆಗೆ ಬಂದ ಸಿನಿಮಾ ಮಾಡಿದೆ ಹೊಸ ದಾಖಲೆಗಳನ್ನು‌, ಅಲ್ಲದೇ ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ‌ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾಗಿದೆ. ಪುಷ್ಪ ಸಿನಿಮಾದ ಹಾಡುಗಳು ಸಹಾ ದೊಡ್ಡ ಸದ್ದನ್ನು ಮಾಡಿದೆ.

ಪುಷ್ಪ ಸಿನಿಮಾದ ಜನಪ್ರಿಯತೆ ಒಂದು ಕಡೆ ಆದರೆ ಈ ಸಿನಿಮಾದಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿದ ವಿಶೇಷ ಹಾಡು ( ಐಟಂ ಸಾಂಗ್ ) ತನ್ನದೇ ಆದ ವೇಗವನ್ನು ಪಡೆದು ದಾಖಲೆ ಬರೆದು, ಸಿನಿಮಾಕ್ಕಿಂತ ಹೆಚ್ಚು ಸೂಪರ್ ಹಿಟ್ ಆಗಿ, ಯೂಟ್ಯೂಬ್ ನಲ್ಲಿ 24 ಗಂಟೆಗಳಲ್ಲಿ ಅತಿ ವೀಕ್ಷಣೆ ಮಾಡಲ್ಪಟ್ಟ ವೀಡಿಯೋ ಎನ್ನುವ ದಾಖಲೆ ಬರೆದು ಸಂಚಲನವನ್ನೇ ಹುಟ್ಟು ಹಾಕಿತು. ಸಮಂತಾ ಈ ಹಾಡಿನಿಂದ ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ಎಲ್ಲೆಲ್ಲೂ ಸಮಂತಾ ಹೆಜ್ಜೆ ಹಾಕಿದ ಹಾಡು ಸದ್ದು ಮಾಡಿ, ಜನರ ಮೆಚ್ಚುಗೆಗಳು ಹರಿದು ಬಂದವು.

ಈಗ ಸಮಂತಾ ಹಾಡು ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದಾರೆ ಟಾಲಿವುಡ್ ನ ಸ್ಟಾರ್ ನಟ, ಪ್ರಿನ್ಸ್ ಮಹೇಶ್ ಬಾಬು ಅವರು. ನಟ ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾ ಸರ್ಕಾರುವಾರಿ ಪಾಟ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ‌.‌ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಮಹಾನಟಿ ಖ್ಯಾತಿಯ ಜನಪ್ರಿಯ ನಟಿ ಕೀರ್ತಿ ಸುರೇಶ್ ಅವರು ನಟಿಸಿರುವುದು ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ. ಈ ಸಿನಿಮಾದ ಕಲಾವತಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಮಹೇಶ್ ಬಾಬು ಅವರ ಸಿನಿಮಾದ ಈ ಹಾಡು ಬಿಡುಗಡೆ ಗೊಂಡ 24 ಗಂಟೆಗಳಲ್ಲೇ ದಾಖಲೆ ಮೊತ್ತದ ವೀಕ್ಷಣೆ ಪಡೆದು ಸಮಂತಾ ಅವರ ಊಂ ಅಂಟಾವಾ ಹಾಡಿಗೆ ಸೆಡ್ಡು ಹೊಡೆದಿದೆ. ಹೌದು ಪುಷ್ಪ ಸಿನಿಮಾದ ಐಟಂ ಸಾಂಗ್ 24 ಗಂಟೆಗಳಲ್ಲಿ 12.39 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಈಗ ಮಹೇಶ್ ಬಾಬು ಅವರ ಕಲಾವತಿ ಹಾಡು 24 ಗಂಟೆಗಳಲ್ಲಿ 16 ಮಿಲಿಯನ್ ವೀಕ್ಷಣೆಗಳು, 8 ಲಕ್ಷ ಲೈಕ್ಸ್ ಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದು, ಪುಷ್ಪ ಸಿನಿಮಾದ ಹಾಡಿನ ದಾಖಲೆಯನ್ನು ಮುರಿದಿದೆ.

Leave a Reply

Your email address will not be published. Required fields are marked *