ಸಮಂತಾಗೆ ದೂರವಾದ ಕೆಲವೇ ದಿನಗಳಲ್ಲಿ ಐಶಾರಾಮೀ ಮನೆ ಖರೀದಿಗೆ ಮುಂದಾದ ನಾಗಚೈತನ್ಯ
ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ತಾವು ಬೇರೆ ಆಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಅಕ್ಟೋಬರ್ 2ರಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಒಂದೂವರೆ ತಿಂಗಳಿನಿಂದ ಹರಡಿದ್ದ ಊಹಾಪೋಹಗಳಿಗೆ ಒಂದು ಅಧಿಕೃತ ಅಂತ್ಯವನ್ನು ಹಾಡಿದ್ದರು. ಅವರ ಈ ಘೋಷಣೆಯ ನಂತರ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಸುದ್ದಿಯಾಗಿದ್ದಾರೆ. ಅವರ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ತರಹೇವಾರಿ ಸುದ್ದಿಗಳು ಹೊರ ಬರುತ್ತಿದೆ. ಇವರ ಕುರಿತಾದ ಪ್ರತಿಯೊಂದು ಹೊಸ ಅಪ್ಡೇಟ್ ಕೂಡ ದೊಡ್ಡ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ವಿಚಾರ ಸುದ್ದಿಯಾಗಿ ಎಲ್ಲರ ಗಮನ ಸೆಳೆದಿದೆ. ಹೌದು ವಿಚ್ಛೇದನದ ಘೋಷಣೆಯನ್ನು ಮಾಡಿದ ನಂತರ ಸಮಂತಾ ತಮ್ಮ ಹಳೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಇದೇ ವೇಳೆ ನಾಗ ಚೈತನ್ಯ ಹೊಸ ಅಪಾರ್ಟ್ಮೆಂಟ್ ಒಂದನ್ನು ಖರೀದಿ ಮಾಡಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ. ಹೈದರಾಬಾದಿನ ದುಬಾರಿ ಏರಿಯಾದಲ್ಲಿ ನಾಗಚೈತನ್ಯ ತಮ್ಮ ಹೊಸ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ನಾಗಚೈತನ್ಯ ಅವರ ಹೊಸಮನೆ ಜುಬಿಲಿ ಹಿಲ್ಸ್ ನಲ್ಲಿ ಇದ್ದು, ಈಗಾಗಲೇ ಮನೆಯ ನವೀಕರಣ ಕಾರ್ಯಗಳು ಪ್ರಾರಂಭವಾಗಿದೆ. ಹೊಸ ಮನೆಯ ನವೀಕರಣ ಕಾರ್ಯ ಮುಗಿದ ಮೇಲೆ ನಾಗಚೈತನ್ಯ ತಮ್ಮ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿಸಲಾಗಿದೆ. ಪ್ರಸ್ತುತ ಅವರ ತಮ್ಮ ತಂದೆಯ ಮನೆಯಲ್ಲಿ ಇದ್ದಾರೆ. ಇನ್ನು ಸಮಂತಾ ತಮ್ಮ ಗಚಿಬೌಲಿ ಭವನದಲ್ಲೇ ಇರಲಿದ್ದಾರೆ ಎನ್ನಲಾಗುತ್ತಿದೆ. ಆ ಮನೆ ಸಮಂತಾ ತಾನೇ ಇಟ್ಟುಕೊಳ್ಳಲು ಬಯಸಿದ್ದಾರೆನ್ನಲಾಗಿದೆ.
ತಾವು ಬೇರೆಯಾಗುತ್ತಿರುವ ವಿಷಯ ಅಧಿಕೃತ ಘೋಷಣೆ ಆದ ಮೇಲೆ , ನಾಗಚೈತನ್ಯ ದೀರ್ಘಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ನಟಿ ಪೂಜಾ ಹೆಗ್ಡೆ ಮತ್ತು ತಮ್ಮ ಸಹೋದರ ಅಖಿಲ್ ಅಕ್ಕಿನೇನಿ ಜೋಡಿಯಾಗಿ ನಟಿಸಿರುವ ದಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಇನ್ನೊಂದೆಡೆ ಸಮಂತಾ ವಿಚ್ಚೇದನದ ಘೋಷಣೆ ನಂತರ ತಮ್ಮ ಬಗ್ಗೆ ಹರಡುತ್ತಿರುವ ಕೆಟ್ಟ ಸುದ್ದಿಗಳ ಬಗ್ಗೆ ಕೆಂಡಾಮಂಡಲವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.