ಸಮಂತಾಗೆ ಅ ಕ್ರ ಮ ಸಂಬಂಧಗಳಿವೆ ಎಂದ ವೈದ್ಯನೀಗ ಆಕೆ ನನ್ನ ಮೊಮ್ಮಗಳಿದ್ದಂತೆ ಎಂದು ವರೆಸೆ ಬದಲಿಸಿದ್ದೇಕೆ??

Written by Soma Shekar

Published on:

---Join Our Channel---

ನಟಿ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ಪಡೆದು ದೂರವಾಗಿದ್ದಾರೆ. ಆದರೆ ಅವರ ವಿಚ್ಚೇದನದ ಘೋಷಣೆ ಆಗಿ ವಾರಗಳೇ ಕಳೆದರೂ ಕೂಡಾ ಅವರ ವಿಚ್ಚೇದನಕ್ಕೆ ಕಾರಣವೇನು? ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಅತ್ತ ನಾಗಚೈತನ್ಯ ಆಗಲೀ, ಇತ್ತ ಸಮಂತಾ ಆಗಲೀ ಅಧಿಕೃತವಾಗಿ ತಮ್ಮ ಈ ನಿರ್ಣಯಕ್ಕೆ ಕಾರಣವೇನು ಎನ್ನುವುದನ್ನೂ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಬೇರಯಾಗಲು ಕಾರಣಗಳೆಂದು ಸಾಕಷ್ಟು ಗಾಸಿಪ್ ಗಳು ಮಾತ್ರ ಸಿಕ್ಕಾಪಟ್ಟೆ ಸುದ್ದಿಯಾಗಿದೆ‌. ಹಾಗೆ ಆದ ಸುದ್ದಿಗಳಲ್ಲಿ ವೈದ್ಯರೊಬ್ಬರು ನೀಡಿದ ಹೇಳಿಕೆಗಳು ಸಹಾ ಸಂಚಲನ ಹುಟ್ಟು ಹಾಕಿತ್ತು.

ಉದರ ತಜ್ಞರಾದ ಡಾ. ಸಿ.ಎಲ್‌‌. ವೆಂಕಟ್ ರಾವ್ ಅವರು ನಟಿ ಸಮಂತಾ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು. ಸಮಂತಾ ಬಗ್ಗೆ ನಾಲಗೆ ಹರಿ ಬಿಟ್ಟಿದ್ದ ವೆಂಕಟ ರಾವ್ ಅವರು ನಟಿಗೆ ಸಾಕಷ್ಟು ಅ ನೈ ತಿ ಕ ಸಂಬಂಧಗಳು ಇದ್ದವು, ಅದೇ ಅವರ ವಿಚ್ಛೇದನಕ್ಕೆ ಕಾರಣ ಎನ್ನುವ ಮಾತನ್ನು ಹೇಳಿದ್ದರು. ಆದರೆ ನಟಿ ಸಮಂತಾ ಈ ಮಾತು ಕೇಳಿದ ಮೇಲೆ ಸುಮ್ಮನೆ ಕೂತಿಲ್ಲ, ತನ್ನ ಬಗ್ಗೆ ನಾಲಗೆಯನ್ನು ಹರಿಬಿಟ್ಟ ವೈದ್ಯರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವ ಮೂಲಕ ವೈದ್ಯ ವೆಂಕಟ ರಾವ್ ಅವರು ಶಾ ಕ್ ಅನ್ನು ನೀಡಿದ್ದಾರೆ.

ಈ ವಿಚಾರವಾಗಿ ಯಾವಾಗ ತನ್ನ ಹೇಳಿಕೆಯ ವಿಚಾರವಾಗಿ ನಟಿಯು ಕೋರ್ಟ್ ಮೆಟ್ಟಿಲ್ಲನ್ನು ಏರಿದರೋ ಈಗ ವೈದ್ಯ ವೆಂಕಟರಾವ್ ಅವರು ತಮ್ಮ ಮಾತಿನ ವರಸೆಯನ್ನೇ ಬದಲಿಸಿದ್ದಾರೆ. ವೈದ್ಯರು ಈಗ ಸಮಂತಾ ನನಗೆ ಮೊಮ್ಮಗಳಿದ್ದಂತೆ, ಅವರಿಗೆ ನ್ಯಾಯ ಸಿಗುವಂತೆ ಮಾಡಲು ನಾನು ಸದಾ ನನ್ನ ಬೆಂಬಲವನ್ನು ನೀಡುತ್ತೇನೆ, ಸೋಶಿಯಲ್ ಮೀಡಿಯಾಗಳಲ್ಲಿ ಬಂದ ಪೋಸ್ಟ್ ಗಳನ್ನು ನೋಡಿ ಇಂತಹ ಬೇಜವಾಬ್ದಾರಿತನದ ಹೇಳಿಕೆ ನೀಡಿದೆ ಎಂದಿದ್ದಾರೆ.

ಸಮಂತಾ ತನ್ನ ಬಗ್ಗೆ ಗಾಸಿಪ್ ಗಳನ್ನು ಹರಡಿದ ಯೂಟ್ಯೂಬ್ ಚಾನೆಲ್ ಗಳ ಮೇಲೆ ಹಾಗೂ ವೈದ್ಯ ವೆಂಕಟರಾವ್ ಅವರ ಮೇಲೆ ಮಾನ ನಷ್ಟು ಮೊಕದ್ದಮೆ ಹೂಡಿದ ನಂತರ ಸಮಂತಾ ಅವರ ವಕೀಲರು ಈ ವಿಚಾರವನ್ನು ಶೀಘ್ರದಲ್ಲೇ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ನಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಕೋರ್ಟ್ ಈ ವಿಚಾರವಾಗಿ ಕೋರ್ಟ್ ಮಾತ್ರ ನಟಿಯ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದೆ ಎಂದು ತಿಳಿದು ಬಂದಿದೆ‌‌.

ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ. ಆದ ಕಾರಣ ಅವರ ವೈಯಕ್ತಿಕ ಜೀವನದ ಕುರಿತಾಗಿ ಸಾಕಷ್ಟು ವಿಚಾರಗಳು ಹರಿದಾಡುವುದು ಕೂಡಾ ಸಾಮಾನ್ಯವಾಗಿದೆ‌. ಅಲ್ಲದೇ ಸೆಲೆಬ್ರಿಟಿಗಳು ಸಹಾ ತಮ್ಮ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಮಾನಹಾನಿ ಮೊಕದ್ದಮೆ ದಾಖಲು ಮಾಡುವ ಬದಲಾಗಿ ಮಾಹಿತಿ ಪ್ರಸಾರ ಮಾಡಿದವರು ಕ್ಷಮೆ ಕೋರುವಂತೆ ಒತ್ತಾಯ ಮಾಡಬಹುದಿತ್ತು ಎಂದಿದೆ ಕೋರ್ಟ್.

Leave a Comment