ಅರ್ಚಕರ ಕೆಂಗಣ್ಣಿಗೆ ಗುರಿಯಾದ ಸನ್ನಿ ಲಿಯೋನಿ: ಕ್ಷಮೆ ಕೇಳದಿದ್ದರೆ ದೇಶದಲ್ಲಿ ಇರೋಕೆ ಬಿಡಲ್ಲ ಎಂದ ಅರ್ಚಕರು..
ಬಾಲಿವುಡ್ ನ ಹಾಟ್ ಹಾಟ್ ಬೆಡಗಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಬಾಲಿವುಡ್ ನ ಜನಪ್ರಿಯ ನಟಿಯಾಗಿದ್ದಾರೆ. ಆದರೆ ಈಗ ಅವರ ಇತ್ತೀಚಿನ ಒಂದು ವಿಡಿಯೋ ಆಲ್ಬಮ್ ಸಾಂಗ್ ಬ್ಯಾನ್ ಮಾಡುವಂತೆ ಉತ್ತರಪ್ರದೇಶದ ಅರ್ಚಕರು ಆಗ್ರಹಿಸಿದ್ದು, ಹಾಗೇನಾದರೂ ಆಗದಿದ್ದರೆ ಆಕೆಯನ್ನು ದೇಶದಲ್ಲಿ ಇರಲು ಕೊಡುವುದಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವೊಂದನ್ನು ಸಹಾ ನೀಡಲಾಗಿದೆ. ಇಷ್ಟಕ್ಕೂ ಸನ್ನಿ ಲಿಯೋನಿ ಮೇಲೆ ಅರ್ಚಕರು ಕೋಪಗೊಳ್ಳಲು ಆ ಮ್ಯೂಸಿಕ್ ವಿಡಿಯೋ ದಲ್ಲಿ ಅಂತದ್ದೇನಿದೆ ಎಂಬ ಪ್ರಶ್ನೆ ನಿಮಗೆ ಈಗಾಗಲೇ ಮೂಡಿರಬಹುದು, ಅದಕ್ಕೆ ಉತ್ತರ ಇಲ್ಲಿದೆ.
ಸರೆಗಮ ಮ್ಯೂಸಿಕ್ ಬುಧವಾರವಷ್ಟೇ ತನ್ನ ಇತ್ತೀಚಿನ ಮಧುಬನ್ ಎನ್ನುವ ಶೀರ್ಷಿಕೆಯನ್ನು ಹೊತ್ತ ಮ್ಯೂಸಿಕ್ ವಿಡಿಯೋ ಆಲ್ಬಮ್ ಬಿಡುಗಡೆ ಮಾಡಿದೆ. ಇದರಲ್ಲಿ ಗಾಯಕಿ ಕನಿಕಾ ಕಪೂರ್ ಹಾಗೂ ಗಾಯಕ ಅರಿಂದಮ್ ಚಕ್ರವರ್ತಿ ಹಾಡಿರುವ ಒಂದು ಪಾರ್ಟಿ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಇದು ರಾಧಾಕೃಷ್ಣರ ಪ್ರೇಮವನ್ನು ಆಧರಿಸಿದ ಗೀತೆಯಾಗಿದೆ. ಮಧು ಬನ್ ಮೇ ರಾಧಿಕಾ ನಾಚೇ ಹಾಡಿಗೆ ಸನ್ನಿ ಲಿಯೋನಿ ಅ ಶ್ಲೀ ಲ ಡ್ಯಾನ್ಸ್ ಮಾಡಿದ್ದಾರೆ ಎನ್ನುವುದು ಸದ್ಯದ ಆ ರೋ ಪವಾಗಿದೆ.
ಸನ್ನಿ ಲಿಯೋನಿ ಈ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಆದ್ದರಿಂದ ಈ ಹಾಡನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಮಥುರಾದ ಅರ್ಚಕರು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಬೃಂದಾವನದ ಸಂತ ನಾವಲ್ ಗಿರಿ ಮಹಾರಾಜ್ ಎಚ್ಚರಿಕೆಯನ್ನು ನೀಡಿದ್ದಾರೆ. ಸನ್ನಿ ಲಿಯೋನಿಯ ಈ ದೃಶ್ಯವನ್ನು ಹಿಂಪಡೆದು, ಆಕೆ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಭಾರತದಲ್ಲಿರಲು ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಈ ಹಾಡನ್ನು ಮೂಲತಃ ಬಾಲಿವುಡ್ ನ ಅಂದಿನ ಜನಪ್ರಿಯ ಗಾಯಕ ಮೊಹಮ್ಮದ್ ರಫಿ ಅವರು 1960 ರ ಕೋಹಿನೂರ್ ಸಿನಿಮಾಕ್ಕೆ ಹಾಡಿದ್ದರು. ಇನ್ನು ಸನ್ನಿ ಯ ಈ ಹಾಡಿನ ವಿಚಾರವಾಗಿ ಅಖಿಲ ಭಾರತ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಮಹೇಶ್ ಪಾಠಕ್ ಅವರೂ ವಿ ರು ದ್ಧ ಧ್ವನಿ ಎತ್ತಿದ್ದಾರೆ. ಈ ಹಾಡನ್ನು ಅವಹೇಳನಕಾರಿ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ಬ್ರಿಜ್ ಭೂಮಿಗೆ ಇರುವ ಪ್ರತಿಷ್ಠೆಯನ್ನು ಹಾಳುಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.