ಸನ್ನಿ ಲಿಯೋನಿ ಮನೆಯಲ್ಲಿ ನಡೆಯಿತು ಸಂಭ್ರಮದ ಗಣೇಶ ಚತುರ್ಥಿ: ಗಂಡ, ಮಕ್ಕಳೊಂದಿಗೆ ಹಬ್ಬ ಆಚರಿಸಿದ ಸನ್ನಿ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಸನ್ನಿ ಲಿಯೋನಿ ಗೆ ಇಂದು ಪರಿಚಯದ ಅಗತ್ಯವಿಲ್ಲ, ಈಗಾಗಲೇ ಬಹು ಬೇಡಿಕೆಯ ನಟಿಯಾಗಿ, ಸೆಲೆಬ್ರಿಟಿಯಾಗಿ ದೊಡ್ಡ ಹೆಸರನ್ನು ಮಾಡಿರುವ ಸನ್ನಿ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿಂದಲೂ ಸಹಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದ್ದರಿಂದಲೇ ನೀ ಲಿ ಸಿನಿಮಾಗಳಲ್ಲಿ ಹಿಂದೊಮ್ಮೆ ನಟಿಸಿದ್ದರೂ ಇಂದು ತಮ್ಮ ಮಾನವೀಯ ಕಾರ್ಯಗಳಿಂದ ಸನ್ನಿ ಯುವ ಜನರ ಹೃದಯಗಳಿಗೆ ಲಗ್ಗೆ ಇಟ್ಟಿದ್ದಾರೆ. ಸನ್ನಿ ಜನ್ಮದಿನಕ್ಕೆ ಕರ್ನಾಟಕದ ಗ್ರಾಮವೊಂದರಲ್ಲಿ ಅವರ ಬೃಹತ್ ಕಟೌಟ್ ನಿಲ್ಲಿಸಿದ ವಿಷಯ ದೊಡ್ಡ ಸುದ್ದಿಯಾಗಿದ್ದು ಮಾತ್ರವಲ್ಲದೇ , ಸನ್ನಿ ಸಹಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆ ಫೋಟೋ ಶೇರ್ ಮಾಡಿಕೊಂಡಿದ್ದರು.

ಕಳೆದ ವರ್ಷ ಲಾಕ್ ಡೌನ್ ಆದಾಗ ತಮ್ಮ ಕುಟುಂಬ ಹಾಗೂ ಮಕ್ಕಳ ಕಾಳಜಿ ಗಾಗಿ ಸನ್ನಿ ಅಮೆರಿಕಾದಲ್ಲಿನ ತಮ್ಮ ನಿವಾಸಕ್ಕೆ ಹಾರಿದ್ದರು. ಕೊರೊನಾ ಅಬ್ಬರ ತಗ್ಗಿದ ಮೇಲೆ ಭಾರತಕ್ಕೆ ಮರಳಿ ಬಂದ ಅವರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸನ್ನಿ ಲಿಯೋನಿ ಯನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಯ ಹಿಂಬಾಲಸುತ್ತಿದ್ದು, ಸನ್ನಿ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚಿಗೆ ರಾಖೀ ಅಥವಾ ರಕ್ಷಾ ಬಂಧನದ ಖುಷಿಯನ್ನು ತಮ್ಮ ಮೂರು ಮಕ್ಕಳು ಸಂಭ್ರಮಿಸಿದ್ದ ವೀಡಿಯೋವನ್ನು ಸನ್ನಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಮಕ್ಕಳು ಒಬ್ಬರು ಮತ್ತೊಬ್ಬರಿಗೆ ರಾಖಿ ಕಟ್ಟಿ ಖುಷಿಪಟ್ಟ ಆ ಕ್ಷಣವನ್ನು ನೋಡಿ ಅವರ ಅಭಿಮಾನಿಗಳು ಸಹಾ ಅಪಾರವಾದ ಮೆಚ್ಚುಗೆ ಗಳನ್ನು ವ್ಯಕ್ತಪಡಿಸಿದ್ದರು ಹಾಗೂ ಸನ್ನಿ ಗೆ ಶುಭಾಶಯಗಳನ್ನು ಅವರು ಕೋರಿದ್ದರು. ಇದಾದ ಬೆನ್ನಲ್ಲೇ ಸನ್ನಿ ಇತ್ತೀಚಿಗೆ ಗಣೇಶ ಚತುರ್ಥಿ ಯನ್ನು ಆಚರಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸನ್ನಿ ತಮ್ಮ ಕುಟುಂಬದೊಂದಿಗೆ ಎಲ್ಲಾ ಹಬ್ಬಗಳನ್ನು ಸಹಾ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡುತ್ತಾರೆ. ಗಣೇಶ ಚತುರ್ಥಿಯನ್ನು ಸಹಾ ಅವರು ಬಹಳ ಸಡಗರದಿಂದ, ಅದ್ದೂರಿಯಾಗಿ ಗಂಡ ಮತ್ತು ಮುದ್ದು ಮಕ್ಕಳೊಡನೆ ಭಕ್ತಿ ಶ್ರದ್ಧೆಯಿಂದ ಆಚರಣೆ ಮಾಡಿಕೊಂಡಿದ್ದಾರೆ. ಸನ್ನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗಣೇಶ ಹಬ್ಬದ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಅವರ ಅಭಿಮಾನಿಗಳು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಸನ್ನಿ ಲಿಯೋನಿ ಹಿಂದಿ ಬಿಗ್ ಬಾಸ್ ಮೂಲಕ ಭಾರತದ ಕಿರುತೆರೆಯ ಪರದೆಗೆ ಎಂಟ್ರಿ ನೀಡಿದರು. ಅದಾದ ನಂತರ ಅವರು ಬಾಲಿವುಡ್ ಗೆ ಪ್ರವೇಶ ಮಾಡಿದರು. ಅಲ್ಲಿಂದಾಚೆಗೆ ಅವರು ನೀ ಲಿ ಚಿತ್ರಗಳಿಗೆ ಗುಡ್ ಬೈ ಹೇಳಿದರು. ಸನ್ನಿ ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಲ್ಲಿ ಕೂಡಾ ಭರ್ಜರಿ ಡಾನ್ಸ್ ಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಉಂಟು. ಅಲ್ಲದೇ ಅವರು ಸುಗಂಧ ದ್ರವ್ಯಗಳು ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಕಂಪನಿ ಕೂಡಾ ನಡೆಸುತ್ತಿದ್ದಾರೆ.

Leave a Comment