ಸನ್ನಿ ಲಿಯೋನಿಯನ್ನು ನೋಡಿ ಭಯದಿಂದ ಓಡಿ ಹೋದ ನಟ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವೀಡಿಯೋ

Entertainment Featured-Articles News Viral Video
55 Views

ತೆಲುಗಿ ಸಿನಿ ಸೀಮೆಯಲ್ಲಿ ವಿಭಿನ್ನವಾದ ಪಾತ್ರಗಳನ್ನು ಆರಿಸಿಕೊಂಡು, ತನಗಾಗಿ ಒಂದು ವಿಶೇಷ ಸ್ಥಾನವನ್ನು ಹಾಗೂ ವರ್ಚಸ್ಸನ್ನು ಪಡೆದುಕೊಂಡಿರುವ ನಟ ಮಂಚು ವಿಷ್ಣು. ಸೋಲು, ಗೆಲುವಿನ ಕಡೆಗೆ ಗಮನ ನೀಡದೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ‌ ಸಾಗಿರುವ ಈ ನಟ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾ ಸಾಗುತ್ತಿದ್ದಾರೆ. ಇತ್ತೀಚಿಗೆ ಮೊನಗಾಳ್ಳು ಸಿನಿಮಾದ ಮೂಲಕ ತಮ್ಮ ಅಭಿಮಾನಿಗಳಿಗೆ ನಟ ಮನರಂಜನೆಯನ್ನು ನೀಡಿದ್ದರು. ಆದರೆ ದೊಡ್ಡ ಬಜೆಟ್ ನೊಂದಿಗೆ ನಿರ್ಮಾಣವಾದ ಈ ಸಿನಿಮಾ ನಿರೀಕ್ಷಿತ ಮಟ್ಟದ ಗೆಲುವನ್ನು ಸಾಧಿಸುವಲ್ಲಿ ವಿಫಲವಾಯಿತು.

ಇಂತಹ ವಿಫಲತೆಯಿಂದಾಗಿ ನಟ ಮಂಚು ವಿಷ್ಣು ನಟನೆಯಿಂದ ಕಳೆದ ಸ್ವಲ್ಪ ಕಾಲದಿಂದಲೂ ಸಹಾ ದೂರ ಉಳಿದಿದ್ದರು. ಈಗ ಮತ್ತೆ ಸಿನಿಮಾ ಕಡೆ ಮುಖ ಮಾಡಿರುವ ನಟ ಮಂಚು ವಿಷ್ಣು ಇದೀಗ ಗಾಲಿ ನಾಗೇಶ್ವರರಾವು ಎನ್ನುವ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದು, ಇತ್ತೀಚಿಗೆ ಈ ಸಿನಿಮಾಕ್ಕೆ ಸಂಬಂಧಿಸಿದ ಹೊಸ ಅಪ್ಡೇಟ್ ಅನ್ನು ಸಹಾ ಸೋಶಿಯಲ್ ಮೀಡಿಯಾ ಮೂಲಕ ಮಾಡಿದ್ದಾರೆ ನಟ ಮಂಚು ವಿಷ್ಣು ಘೋಷಣೆಯನ್ನು ಸಹಾ ನೀಡಿದ್ದಾರೆ.

ಇನ್ನು ಈ ಸಿನಿಮಾದ ಪ್ರಮುಖ ವಿಶೇಷ ಎನ್ನುವಂತೆ ನಟಿ ಸನ್ನಿ ಲಿಯೋನಿ ಈ ಸಿನಿಮಾದಲ್ಲಿ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ರೇಣುಕಾ ಹೆಸರಿನ ಎನ್ ಆರ್ ಐ ಮಹಿಳೆ ಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸಿನಿಮಾ ಚಿತ್ರೀಕರಣವು ಪ್ರಸ್ತುತ ತಿರುಪತಿ ಯಲ್ಲಿ ನಡೆಯುತ್ತಿದೆ. ಈ ವೇಳೆ ನಟಿ ಸನ್ನಿ ಲಿಯೋನಿ ಮಂಚು ವಿಷ್ಣು ಅವರನ್ನು ಆಟವಾಡಿಸಲು ಸನ್ನಿ ಲಿಯೋನಿ ಪ್ಲಾನ್ ಒಂದನ್ನು ಮಾಡಿದ್ದು, ಆ ವೀಡಿಯೋ ವನ್ನು ಸನ್ನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸನ್ನಿ ಮುಖಕ್ಕೆ ಮಾಸ್ಕ್ ಧರಿಸಿ ಒಂದು ಗೋಡೆಯ ಹಿಂದೆ ಅಡಗಿಕೊಂಡಿದ್ದಾರೆ, ಈ ವೇಳೆ ಮತ್ತೊಂದು ಕಡೆಯಿಂದ ಮಂಚು ವಿಷ್ಣು ನಡೆದುಕೊಂಡು ಬರುತ್ತಿರುತ್ತಾರೆ. ಹತ್ತಿರ ಬಂದ ಕೂಡಲೇ ನಟನನ್ನು ಭ ಯ ಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಟ ವಿಷ್ಣು ಮಾಸ್ಕ್ ನಲ್ಲಿದ್ದ ಸನ್ನಿಯನ್ನು ನೋಡಿದಾಗ ಭಯಪಡುವುದಿಲ್ಲ. ನಂತರ ಸನ್ನಿ ಮಾಸ್ಕ್ ತೆಗೆದಾಗ ಅವರ ಮುಖವನ್ನು ನೋಡಿ ವಿಷ್ಣು ಭ ಯ ಪಟ್ಟು ಅಲ್ಲಿಂದ ಓಡಿ ಹೋಗುತ್ತಾರೆ. ಸನ್ನಿ ಕೂಡಾ ಅವರ ಹಿಂದೆ ಓಡಿ ಹೋಗುತ್ತಾರೆ.

ವೀಡಿಯೋ ಶೇರ್ ಮಾಡಿಕೊಂಡ ಸನ್ನಿ ಲಿಯೋನಿ ನನ್ನ ಪ್ರಯತ್ನ ಮತ್ತೊಮ್ಮೆ ವಿಫಲವಾಯಿತು ಎಂದು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ಮಂದಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೇ ಕೆಲವರು ನಟ ಮಂಚು ವಿಷ್ಣು ಅವರನ್ನು ಟ್ರೋಲ್ ಕೂಡಾ ಮಾಡಿದ್ದಾರೆ. ಇನ್ನು ನಟಿ ಸನ್ನಿ ಲಿಯೋನಿ ವರ್ಷಗಳ ಹಿಂದೆ ಮಂಚು ವಿಷ್ಣು ಸಹೋದರ ಮಂಚು ಮನೋಜ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *