ಸನಾತನ ನಂಬಿದ ಸಭ್ಯ ಮಹಿಳೆಯಾಗಿರುವಾಗ ಇದೆಲ್ಲಾ ಏನು? ನಟಿ ಕಂಗನಾ ಮೇಲೆ ಸಿಟ್ಟಾದ ನೆಟ್ಟಿಗರು

0 0

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಒಂದಲ್ಲಾ ಒಂದು ವಿಷಯದಿಂದಾಗಿ ಮಾದ್ಯಮಗಳಲ್ಲಿ ಸದ್ದು ಮಾಡುತ್ತಾ,‌ ಸುದ್ದಿಯಲ್ಲಿ ಇರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಂಗನಾ ನೀಡುವ ಹೇಳಿಕೆಗಳು ಒಂದು ದೊಡ್ಡ ಚರ್ಚೆಯನ್ನೇ ಹುಟ್ಟಿ ಹಾಕುತ್ತವೆ. ಕಂಗನಾ ಅವರ ಹೇಳಿಕೆಗಳಿಗೆ ಪರ ವಿ ರೋ ಧ ಅಭಿಪ್ರಾಯಗಳು ಹರಿದು ಬರುವುದು ಸಹಾ ಸಾಮಾನ್ಯ. ಇನ್ನು ಕಂಗನಾ ಶೇರ್ ಮಾಡುವ ವೀಡಿಯೋ ಹಾಗೂ ಫೋಟೋಗಳು ಸಹಾ ಸಾಕಷ್ಟು ವೈರಲ್‌ ಆಗುವುದು, ಅಭಿಮಾನಿಗಳಿಗೆ ಖುಷಿ ನೀಡುವುದು ಸಹಾ ಸಹಜ. ಇದೀಗ ಕಂಗನಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಸೂಪರ್ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಅನೇಕರು ಅದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ, ‌ಅದೇ ವೇಳೆ ಕೆಲವರು ಆ ಫೋಟೋಗಳನ್ನು ನೋಡಿ ಅಸಮಾಧಾನ ಕೂಡಾ ಹೊರ ಹಾಕಿದ್ದಾರೆ.‌

ಕಂಗನಾ ಬುಡಾಪೆಸ್ಟ್ ನಲ್ಲಿ ತಮ್ಮ ಮುಂದಿನ ಸಿನಿಮಾ ಧಾಕಡ್ ನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಸಿನಿಮಾದ ಚಿತ್ರೀಕರಣವು ಮುಗಿದಿದ್ದು, ಚಿತ್ರೀಕರಣ ಮುಗಿದ ಮೇಲೆ ಪಾರ್ಟಿ ಗೂ ಮುನ್ನವೇ ಕಂಗನಾ ತಮ್ಮ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹೊಸ ಫೋಟೋ ಗಳಲ್ಲಿ ಕಂಗನಾ ಕೊರ್ಸೆಲ್ ಬ್ರಾಲೆಟ್ ಮತ್ತು ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುಂದರವಾದ ಚಿತ್ರಗಳನ್ನು ಶೇರ್ ಮಾಡಿಕೊಂಡ ಕಂಗನಾ ಅವರು ಅದರ ಜೊತೆಗೆ ಗಾಲಿಬ್ ಹೇಳಿರುವ ಸಾಲುಗಳನ್ನು ಬರೆದುಕೊಂಡಿದ್ದು, ಆ ಸಾಲುಗಳಲ್ಲಿ ಬದುಕು, ಸಾವು ಹಾಗೂ ಪ್ರೀತಿಯ ಬಗ್ಗೆ ಹೇಳಲಾಗಿದೆ.

ಕಂಗನಾ ಫೋಟೋಗಳನ್ನು ಶೇರ್ ಮಾಡಿದ ಮೇಲೆ ಈ ಫೋಟೋಗಳಿಗೆ ಭರ್ಜರಿಯಾಗಿ ಲೈಕ್ ಹಾಗೂ ಕಾಮೆಂಟ್ ಗಳು ಹರಿದು ಬರುತ್ತಿವೆ. ಅಭಿಮಾನಿಗಳು ಬಹಳಷ್ಟು ಜನರು ಮೆಚ್ಚುಗೆ ನೀಡಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆದರೆ ಇದೇ ವೇಳೆ ಕೆಲವರಿಗೆ ಕಂಗನಾ ಅವರ ಈ ಗ್ಲಾಮರಸ್ ಫೋಟೋ ಗಳು ಇಷ್ಟವಾಗಿಲ್ಲ. ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಕಂಗನಾ ಅವರ ಫೋಟೋ ವನ್ನು ನೋಡಿ, “ನಿಮ್ಮಿಂದ‌ ಇಂತಹ ನಿರೀಕ್ಷೆ ಇರಲಿಲ್ಲ ಕಂಗನಾ, ಎಂತಹ ಕೆಟ್ಟ ವಸ್ತ್ರಗಳನ್ನು ಧರಿಸಿದ್ದೀರಿ” ಎಂದು ಹೇಳಿದ್ದಾರೆ. ಇನ್ನೊಬ್ಬರು “ಅರೆರೆ ದೇಶದ ಸಂಸ್ಕಾರಗಳ ಬಗ್ಗೆ ನೀನೇ ಅಲ್ವಾ ಮಾತಾಡ್ತಾ ಇದ್ದಿದ್ದು” ಎಂದು ವ್ಯಂಗ್ಯವಾಡಿದ್ದಾರೆ.

ಕಂಗನಾ ಅವರ ಮತ್ತೊಬ್ಬ ಅಭಿಮಾನಿ, “ನೀವು ಸನಾತನದಲ್ಲಿ ನಂಬಿಕೆ ಇಟ್ಟ ಸಭ್ಯ ಮಹಿಳೆಯಾಗಿರುವಾಗ ಇದೆಲ್ಲಾ ಏನು?? ಯಾರಿಗೇ ಆಗಲಿ ಎರಡು ಮುಖಗಳು ಒಳ್ಳೆಯದಲ್ಲ” ಎಂದು ಸಲಹೆಯನ್ನು ನೀಡಿದ್ದಾರೆ. ಇನ್ನು ಧಾಕಡ್ ಸಿನಿಮಾದಲ್ಲಿ ಕಂಗನಾ ಅವರು ಏಜೆಂಟ್ ಅಗ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಜೊತೆಗೆ ಅರ್ಜುನ್ ರಾಮ್ ಪಾಲ್ ಹಾಗೂ ದಿವ್ಯ ದತ್ತಾ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಕಂಗನಾ ತಲೈವಿ ಹಾಗೂ ತೇಜಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave A Reply

Your email address will not be published.